ಪತ್ನಿಗೆ ಇಂಜೆಕ್ಷನ್ ನೀಡಿ ಸಹಜ ಸಾವು ಎಂದು ನಾಟಕವಾಡಿದ್ದ ವೈದ್ಯ ಪತಿಯನ್ನು ಮಾರತಹಳ್ಳಿ ಪೊಲೀಸರು ಅಂತಿಮವಾಗಿ ಬಂಧಿಸಿದ್ದಾರೆ. ಕ್ರೂರ ಕೃತ್ಯದಿಂದ ಹೆಂಡತಿಯನ್ನು ಹತ್ಯೆಗೈದ ಈ ಘಟನೆಗೆ 6 ತಿಂಗಳ ನಂತರ ಸತ್ಯ ಬಹಿರಂಗವಾಗಿದೆ.
ಬಂಧಿತನನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಯ ಜನರಲ್ ಸರ್ಜನ್ ಆಗಿದ್ದ ಡಾ. ಮಹೇಂದ್ರರೆಡ್ಡಿ ಎಂದು ಗುರುತಿಸಲಾಗಿದೆ. ಈತನು ತನ್ನ ಪತ್ನಿ ಡಾ. ಕೃತಿಕಾ ರೆಡ್ಡಿಯನ್ನು ಹತ್ಯೆಗೈದು, ಕುಟುಂಬಸ್ಥರು ಸೇರಿದಂತೆ ಎಲ್ಲರನ್ನೂ ಸಹಜ ಸಾವು ಎಂದು ನಂಬಿಸಿದ್ದಾನೆ.
2024ರ ಮೇ 26ರಂದು ಡಾ. ಮಹೇಂದ್ರರೆಡ್ಡಿ ಮತ್ತು ಡಾ. ಕೃತಿಕಾರೆಡ್ಡಿ ವಿವಾಹವಾಗಿದ್ದರು. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚರ್ಮರೋಗ ತಜ್ಞೆಯಾಗಿದ್ದ ಕೃತಿಕಾ, ಅಜೀರ್ಣ, ಗ್ಯಾಸ್ಟ್ರಿಕ್ ಹಾಗೂ ಲೋ ಶುಗರ್ ಸಮಸ್ಯೆಗಳಿಂದ ಬಳಲುತ್ತಿದ್ದರೆನ್ನಲಾಗಿತ್ತು. ಈ ಬಗ್ಗೆ ಮಾಹಿತಿ ಮುಚ್ಚಿ ಇಟ್ಟುಕೊಂಡಿದ್ದ ಕೃತಿಕಾಳ ಕುಟುಂಬ, ಆಕೆಯ ಮದುವೆಯನ್ನು ಮಹೇಂದ್ರರೆಡ್ಡಿಗೆ ಮಾಡಿಕೊಟ್ಟಿದ್ದರು.
ಮದುವೆಯ ನಂತರ ಪತ್ನಿಯ ಆರೋಗ್ಯ ಸಮಸ್ಯೆಗಳ ಬಗ್ಗೆ ತಿಳಿದ ಮಹೇಂದ್ರ, ಆಕೆಯನ್ನು ಕೊಲ್ಲುವ ತಂತ್ರ ರೂಪಿಸಿದ್ದಾನೆ. ತವರು ಮನೆಯಲ್ಲಿ ಆರಾಮವಾಗಿ ಮಲಗಿದ್ದ ಪತ್ನಿಗೆ ಇವ್ ಲೈನ್ ಮೂಲಕ ಎರಡು ದಿನ ಔಷಧ ಕೊಟ್ಟಿದ್ದಾನೆ. ಹಂತ ಹಂತವಾಗಿ ಆಕೆಗೆ ಅನಸ್ತೇಷಿಯಾ ಕೊಟ್ಟು ಟಾರ್ಚರ್ ಕೊಟ್ಟಿದ್ದಾನೆ. ಆ ಬಳಿಕ ಆಕೆಗೆ ಜ್ಞಾನ ತಪ್ಪಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ಕೃತಿಕಾ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದರು.
ಪತ್ನಿ ಕೊಂದು ಕಳ್ಳಾಟವಾಡಿದ್ದ ಡಾಕ್ಟರ್ ಪತಿ ಮಹೇಂದ್ರ ರೆಡ್ಡಿ ಬೇರೆ ಯುವತಿ ಜೊತೆ ಸಂಪರ್ಕ ಹೊಂದಿದ್ದ ಎನ್ನಲಾಗುತ್ತಿದೆ. ಹಗಲು ರಾತ್ರಿ ಹುಡುಗಿ ಜೊತೆ ಫೋನ್ ನಲ್ಲಿ ಮಾತು ಕತೆ ನಡೆಸಿದ್ದ. ಕೃತಿಕಾ ಗ್ಯಾಸ್ಟ್ರಿಕ್ ಸಮಸ್ಯೆ ಎಂದಿದ್ದಕ್ಕೆ ಮೊದಲು ಓಷಧಿ ನೀಡಿದ್ದ. ಬಳಿಕ ೩ ದಿನಗಳ ಕಾಲ ಆಕೆಯ ಕಾಲಿಗೆ ಐವಿ ನೀಡಿದ್ದ. ಅನಾರೋಗ್ಯ ಹೆಚ್ಚಾದ ಮೇಲೆ ಕೃತಿಕಾಳನ್ನ ಆಸ್ಪತ್ರೆಗೆ ಸೇರಿಸಿದ್ದಾನೆ ಎನ್ನಲಾಗಿದೆ.
ಇನ್ನು ಪೊಲೀಸ್ ಕಮಿಷಿನರ್ ಸೀಮಂತ್ ಕುಮಾರ್ ಸಿಂಗ್ ಈ ಬಗ್ಗೆ ಮಾತನಾಡಿದ್ದಾರೆ. ಇಂಜೆಕ್ಷನ್, ಮೆಡಿಕಲ್ ಕಿಟ್ ಹಾಗು ಇನ್ನು ಹಲವು ವಸ್ತುಗಳು ಸಿಕ್ಕಿವೆ. ರಿಪೋರ್ಟ್ ಪ್ರಕಾರ ಅವರ ಆರೋಗ್ಯ ಸರಿಯಾಗಿರಲಿಲ್ಲ. ಅವರ ಟ್ರೀಟ್ಮೆಂಟ್ ನಡಿಯುತ್ತಿತ್ತು. ಟ್ರೀಟ್ಮೆಂಟ್ ನಲ್ಲಿ ಉಪಯೋಗಿಸಿದಂತಹ ಎಲ್ಲ ವಸ್ತುಗಳನ್ನ ಸೀಜ್ ಮಾಡಿದೀವಿ ಎಂದಿದ್ದಾರೆ. ಸದ್ಯಕ್ಕೆ ಎವಿಡನ್ಸ್ ಆಧಾರದ ಮೇಲೆ ಅರೆಸ್ಟ್ ಮಾಡಿದೀವಿ. ಚಾರ್ಜ್ ಶೀಟ್ ಆಗಿದೆ. ಸದ್ಯ FSL ವರದಿ ಬಂದಿದೆ ಎಂದಿದ್ದಾರೆ.
ವರದಿ : ಲಾವಣ್ಯ ಅನಿಗೋಳ