Monday, October 20, 2025

Latest Posts

ಸಿಎಂ ಸಿದ್ದರಾಮಯ್ಯಗೆ ಕಾನೂನು ಜ್ಞಾನ ಇಲ್ವಾ? ಎಂದು ಪ್ರಶ್ನಿಸಿದ ಶೆಟ್ಟರ್!

- Advertisement -

ಶಾಲೆ ಮಾತ್ರವಲ್ಲ, ಸಾರ್ವಜನಿಕ ಸ್ಥಳಗಳಲ್ಲಿ RSS ಕಾರ್ಯಕ್ರಮಗಳಿಗೆ ನಿಷೇಧ ಮಾಡುವಂತೆ ಪ್ರಿಯಾಂಕ್ ಖರ್ಗೆ ಅವರು RSS ವಿಚಾರವಾಗಿ ಪತ್ರದ ಕುರಿತು ಜಗದೀಶ್ ಶೆಟ್ಟರ್ ಪ್ರತಿಕ್ರಿಯಿಸಿದ್ದಾರೆ. ಶೆಟ್ಟರ್ ಆದೇಶವನ್ನೇ ಜಾರಿ ಮಾಡಿದ್ದೇವೆ ಅಂತ ಸರ್ಕಾರ ಹೇಳ್ತಿದೆ. ಜಗದೀಶ್ ಶೆಟ್ಟರ್ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಏನು ಆದೇಶ ಕೊಟ್ಟಿದ್ರೋ ಅದನ್ನ ಜಾರಿ ಮಾಡಿದ್ದೇವೆ ಅಂತ ಸರ್ಕಾರ ಹೇಳಿದೆ.

ಆದ್ರೆ ಈಗ ಸರ್ಕಾರದ ಆರೋಪವನ್ನ ಜಗದೀಶ್ ಶೆಟ್ಟರ್ ನಿರಾಕರಿಸಿದ್ದಾರೆ. ಸಿಎಂ ಆಗಿದ್ದಾಗ ಆ ರೀತಿ ಆದೇಶ ಹೊರಡಿಸಿಲ್ಲ ಎಂದಿದ್ದಾರೆ. ಪ್ರಿಯಾಂಕ್ ಖರ್ಗೆ ಅವರ ಮಾತಿಗೆ ಜಗದೀಶ್ ಶೆಟ್ಟರ್ ಸ್ಪಷ್ಟನೆ ಕೊಟ್ಟಿದ್ದಾರೆ. ಖಾಸಗಿ ಕಾರ್ಯಕ್ರಮಕ್ಕೆ ಕೆಲವರು ಅನುಮತಿ ಕೋರಿದ್ರು. ಆಗ ಬೆಂಗಳೂರಿನ ಕೋಟೆ ಪ್ರಾಢಶಾಲೆಯವರು ಅನುಮತಿ ಕೇಳಿದ್ರು, ಅದಕ್ಕೆ ಶಿಕ್ಷಣ ಇಲಾಖೆ ಪ್ರತ್ಯುತ್ತರ ಕೊಟ್ಟಿದ್ದು. ಕ್ಯಾಬಿನೆಟ್ ನಲ್ಲಿ ಅಥವಾ ಬೇರೆಲ್ಲೂ ಅಂತಹ ಆದೇಶ ಹೊರಡಿಸಿಲ್ಲ. ಶಿಕ್ಷಣ ಇಲಾಖೆಯ ಸುತ್ತೋಲೆ ಅದು ಅಂತ ಖರ್ಗೆ ಮಾತಿಗೆ ಪ್ರತ್ಯುತ್ತರ ನೀಡಿದ್ದಾರೆ.

ಶಾಲೆ ಮಾತ್ರವಲ್ಲ, ಸಾರ್ವಜನಿಕ ಸ್ಥಳಗಳಲ್ಲಿ RSS ಕಾರ್ಯಕ್ರಮಗಳಿಗೆ ನಿಷೇದ ಮಾಡುವಂತೆ ಪತ್ರ ಕಳುಹಿಸಿದ್ದೀರಿ. ಅದಕ್ಕೆ ಸಿದ್ದರಾಮಯ್ಯನವರು ಇಲ್ಲಿಯವರೆಗೂ ಏನು ನಿರ್ಧಾರ ತೆಗೆದುಕೊಂಡಿದ್ದಾರೆ ಅಂತ ಪ್ರಶ್ನಿಸಿದ್ದಾರೆ. RSS ಕಾರ್ಯಕ್ರಮಗಳಲ್ಲಿ ಭಾಗ ವಹಿಸೋಕೆ ಕೇಂದ್ರ ಸರ್ಕಾರವೇ ಅನುಮತಿ ಕೊಟ್ಟಿದೆ ಅಂತ ಈಗ ರಾಜ್ಯ ಸರ್ಕಾರದ ವಿರುದ್ಧ ಜಗದೀಶ್ ಶೆಟ್ಟರ್ ಕಿಡಿ ಕಾರಿದ್ದಾರೆ.

RSS ಚಳುವಟಿಕೆಯಲ್ಲಿ ಭಾಗವಹಿಸೋಕೆ ನಿಯಮಗಳಿವೆ. ಯಾವುದೇ ಕಾನೂನು ಇಲ್ಲದೆ PDO ರನ್ನ ಅಮಾನತು ಮಾಡಿದ್ದಾರೆ. ಹೇಗೆ ನೀವು ಅವರನ್ನ ಅಮಾನತು ಮಾಡಿದ್ರಿ. ಸಿಎಂ ಸಿದ್ದರಾಮಯ್ಯ ಅವರಿಗೆ ಕಾನೂನು ಜ್ಞಾನವಿಲ್ಲವಾ? ಪ್ರಿಯಾಂಕ್ ಖರ್ಗೆ ಅವರು ದಾರಿ ತಪ್ಪಿಸುತ್ತಿದ್ದಾರೆ ಅಂತ ಪ್ರಿಯಾಂಕ್ ಖರ್ಗೆ ಅವರ ವಿರುದ್ದವೂ ಕಿಡಿ ಕಾರಿದ್ದಾರೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss