- Advertisement -
Health Tips: ತುಪ್ಪ ತಿನ್ನುವುದರಿಂದ ನಮ್ಮ ದೇಹದ ತೂಕ ಹೆಚ್ಚಾಗುತ್ತದೆ ಅನ್ನೋ ಭ್ರಮೆ ಹಲವರಲ್ಲಿದೆ. ಆ ಭ್ರಮೆಗೆ ವೈದ್ಯರೇ ಉತ್ತರಿಸಿದ್ದಾರೆ. ಕುಟುಂಬ ವೈದ್ಯರಾದ ಡಾ.ಪ್ರಕಾಶ್ ರಾವ್ ಈ ಬಗ್ಗೆ ವಿವರಿಸಿದ್ದಾರೆ.
ತೂಕ ಇಳಿಸಲು ಪ್ರಯತ್ನಿಸುವವರು ಪದೇ ಪದೇ ತಮ್ಮ ದೇಹದ ತೂಕವನ್ನು ಚೆಕ್ ಮಾಡಿದರೆ, ಅದರಿಂದಲೇ ಆತಂಕ ಮತ್ತೂ ಹೆಚ್ಚುತ್ತದೆ ಅಂತಾರೆ ವೈದ್ಯರು. ಬರೀ ವ್ಯಾಯಾಮದಿಂದ ತೂಕ ಇಳಿಸಲಾಗುವುದಿಲ್ಲ. ವ್ಯಾಯಾಮದ ಜತೆಗೆ ಆಹಾರದ ಬಗ್ಗೆಯೂ ಗಮನ ಹರಿಸಬೇಕು.
ಇನ್ನು ತುಪ್ಪ ಸೇವನೆಯ ಬಗ್ಗೆ ಮಾತನಾಡಿರುವ ವೈದ್ಯರು, ಕಾರ್ಬೋಹೈಡ್ರೇಟ್ಸ್ ದೇಹದಲ್ಲಿ ಹೆಚ್ಚಾದಾಗ ನಮ್ಮ ದೇಹದ ತೂಕ ಹೆಚ್ಚಾಗುತ್ತದೆ. ತುಪ್ಪ ತಿನ್ನುವುದರಿಂದ ಎಂದಿಗೂ ದೇಹದ ತೂಕ ಹೆಚ್ಚುವುದಿಲ್ಲ ಎಂದಿದ್ದಾರೆ. ದಿನಕ್ಕೆ 5 ಗ್ರಾಮ್ ತುಪ್ಪ ತಿಂದರೆ ಅದರಿಂದೇನೂ ಸಮಸ್ಯೆ ಇಲ್ಲ ಅಂತಾರೆ ವೈದ್ಯರು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.
- Advertisement -