Health Tips: ಅನ್ನ ತಿನ್ನುವುದರಿಂದ ದೇಹದ ತೂಕ ಹೆಚ್ಚಾಗುತ್ತದೆ ಅಂತಾ ಹೇಳಲಾಗತ್ತೆ.ಹಾಗಾದ್ರೆ ನಿಜವಾಗ್ಲೂ ಅನ್ನದ ಸೇವನೆಯಿಂದ ದೇಹದ ತೂಕ ಹೆಚ್ಚತ್ತಾ ಅನ್ನೋ ಬಗ್ಗೆ ಜಿಮ್ ಟ್ರೇನರ್ ಅಂಜನ್ ಅವರೇ ಹೇಳಿದ್ದಾರೆ ಕೇಳಿ.
ನಾವು ರಾತ್ರಿ ವೇಳೆ ಏನೇ ಆಹಾರ ಸೇವಿಸಿದರೂ ಅದು 7.30ಕ್ಕಿಂತ ಮುಂಚೆಯೇ ಸೇವಿಸಿಬಿಡಬೇಕು. ಮತ್ತು ರಾತ್ರಿ ಬೇಗ ಮಲಗಬೇಕು. ಇದೇ ರೀತಿ ಅಭ್ಯಾಸ ಮುಂದುವರಿಸಿದರೆ, ನಮ್ಮ ಆರೋಗ್ಯವೂ ಚೆನ್ನಾಗಿರುತ್ತದೆ. ದೇಹದ ತೂಕ ಕೂಡ ಸರಿಯಾಗಿರುತ್ತದೆ ಅಂತಾರೆ ಅಂಜನ್.
ದೇಹವನ್ನು ಫಿಟ್ ಆಗಿರಿಸಬೇಕು. ತೂಕ ಸರಿಯಾಗಿರಬೇಕು, ವೇಟ್ ಲಾಸ್ ಮಾಡುವುದು ಬೇಡ ಎನ್ನುವವರು 2 ಬಾರಿ ಕುಚಲಕ್ಕಿ ಅನ್ನದ ಸೇವನೆ ಮಾಡಬೇಕು. ತೂಕ ಇಳಿಸಬೇಕು ಎನ್ನುವವರು 1 ಬಾರಿ ಕುಚಲಕ್ಕಿ ಸೇವನೆ ಮಾಡಬೇಕು. ಇನ್ನು ಸಂಜೆ ವೇಳೆ ರಾಗಿಮುದ್ದೆ, ಚಪಾತಿ ಇಂಥ ಆಹಾರ ಸೇವನೆ ಮಾಡುವುದು ಉತ್ತಮ ಅಂತಾರೆ ಅಂಜನ್.
ಅಲ್ಲದೇ, ಬೆಳಿಗ್ಗೆ ಎದ್ದ ತಕ್ಷಣ ಎಳನೀರು ಕುಡಿಯುವುದು ಆರೋಗ್ಯ ಮತ್ತು ಸೌಂದರ್ಯ ಎರಡಕ್ಕೂ ಉತ್ತಮ. ಅಲ್ಲದೇ, ತೂಕ ಕೂಡ ಉತ್ತಮವಾಗಿರುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.