Tuesday, November 18, 2025

Latest Posts

ನಿಮ್ಮ ದೇಹದ ಕೆಲವು ಭಾಗ ಸಡನ್ನಾಗಿ ಅನಸ್ತೇಶಿಯಾ ನೀಡಿದ ಹಾಗಾಗುತ್ತದೆಯಾ..? ಇದೇ ಕಾರಣ ನೋಡಿ..

- Advertisement -

Health Tips: ನೀವು 1 ಕಡೆ ಹೆಚ್ಚು ಸಮಯ ಕುಳಿತಾಗ, ಅಥವಾ ಕಾಲು ಮೇಲೆ ಕಾಲು ಹಾಕಿ ಕುಳಿತಾಗ. 1 ಬದಿ ಮಗ್ಗಲು ಬದಲಿಸದೇ ಮಲಗಿದ್ದಾಗ, ಹೀಗೆ ಹಲವು ಬಾರಿ ಆ ಜಾಗದಲ್ಲಿ ಜೀವವೇ ಇಲ್ಲದಂತಾಗುತ್ತದೆ. ಅನಸ್ತೇಶಿಯಾ ನೀಡಿದ ಹಾಗಾಗುತ್ತದೆ. ಹಾಗಾದರೆ ಇದಕ್ಕೆ ಕಾರಣವೇನು ಅಂತಾ ತಿಳಿಯೋಣ ಬನ್ನಿ..

ನರಗಳು ದುರ್ಬಲವಾದಾಗ ಈ ರೀತಿಯಾಗುತ್ತದೆ. ದೇಹದ ಯಾವುದೇ ಭಾಗದಲ್ಲಿ ಭಾರ ಬಿದ್ದರೆ, ಅಲ್ಲಿ ನರದ ಮೇಲೆ ಭಾರ ಬೀಳುತ್ತದೆ. ಆಗ ನರಗಳ ಮೂಲಕವಾಗಬೇಕಿದ್ದ ರಕ್ತ ಪರಿಚಲನೆ ನಿಲ್ಲುತ್ತದೆ. ಈ ವೇಳೆ ಆಯಾ ಸ್ಥಳಗಳಿಗೆ ರಕ್ತ ಸರಬರಾಜಾಗದೇ, ಸ್ವಲ್ಪ ಸಮಯ ಆ ಜಾಗದಲ್ಲಿ ಅನಸ್ತೇಶಿಯಾ ನೀಡಿದ ಹಾಗಾಗುತ್ತದೆ.

ಬಿಪಿ, ಶುಗರ್, ಬಿ12 ಅಂಶ ಕಡಿಮೆ ಇದ್ದಾಗ ಈ ರೀತಿಯಾಗುತ್ತದೆ. ಆದರೆ ಇಂಥ ಸಮಸ್ಯೆ ಪದೇ ಪದೇ ಮತ್ತು ಹೆಚ್ಚಾಗಿದ್ದರೆ, 10ರಿಂದ 20 ನಿಮಿಷ ವಾಕ್ ಮಾಡಿ. ವ್ಯಾಯಾಮ ಮಾಡಿ. ಆರೋಗ್ಯಕರ ಆಹಾರಗಳಾದ ಹಾಲು, ಪನೀರ್, ತುಪ್ಪ, ದಹಿ, ಚಿಕನ್, ಇತ್ಯಾದಿ ಪ್ರೋಟೀನ್ ಇರುವ ಆಹಾರಗಳ ಸೇವನೆ ಮಾಡಿ.

ಬೆಳಗ್ಗೆ ಬೀಳುವ ಸೂರ್ಯನ ತಿಳಿ ಬಿಸಿಲಿಗೆ ನಿಲ್ಲಿ. ಇದರಿಂದ ದೇಹಕ್ಕೆ ವಿಟಾಮಿನ್ ಡಿ ಸಿಗುತ್ತದೆ. ರಾತ್ರಿ ಮಲಗುವಾಗ ಎಳ್ಳೆಯನ್ನು ಸ್ವಲ್ಪ ಬೆಚ್ಚಗೆ ಮಾಡಿ, ಕೈ ಮತ್ತು ಪಾದಕ್ಕೆ ಸವರಿ ಮಲಗಿ. ಏನು ಮಾಡಿದರೂ ಆರೋಗ್ಯ ಸಮಸ್ಯೆ ಕಡಿಮೆಯಾಗುತ್ತಿಲ್ಲವೆಂದಲ್ಲಿ, ನಿರ್ಲಕ್ಷ್ಯ ತೋರದೇ, ವೈದ್ಯರ ಬಳಿ ಪರೀಕ್ಷಿಸಿ.

- Advertisement -

Latest Posts

Don't Miss