Thursday, December 12, 2024

Latest Posts

ಅಮೆರಿಕ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಡೋನಾಲ್ಡ್ ಟ್ರಂಪ್: ಶುಭಾಶಯ ತಿಳಿಸಿದ ಪ್ರಧಾನಿ ಮೋದಿ

- Advertisement -

International News: ಅಮೆರಿಕದಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೋನಾಲ್ಡ್ ಟ್ರಂಪ್ ಗೆಲುವು ಸಾಧಿಸಿದ್ದಾರೆ. ಈ ಮೂಲಕ 47ನೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇವರ ಎದುರಾಳಿಯಾಗಿದ್ದ ಕಮಲಾ ಹ್ಯಾರಿಸ್, ಕಡಿಮೆ ಮತಗಳಿಂದ ಸೋಲನನ್ನುಭವಿಸಿದ್ದಾರೆ.

ಈ ವೇಳೆ ಮಾತನಾಡಿದ ಟ್ರಂಪ್, ಇದು ಅಮೆರಿಕ ಕಂಡ ಅಸಾಧಾರಣ ಗೆಲುವು. ಇದಕ್ಕಿಂತ ಖುಷಿ ಇನ್ನೊಂದಿಲ್ಲ. ಇದೊಂದು ಐತಿಹಾಸಿಕ ಕ್ಷಣ. ನನ್ನನ್ನು ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿದ್ದಕ್ಕೆ ಧನ್ಯವಾದಗಳು ಎಂದು ಟ್ರಂಪ್ ತಿಳಿಸಿದ್ದಾರೆ.

ಅಲ್ಲದೇ, ಇದೊಂದು ಸುವರ್ಣಯುಗ, ಅಮೆರಿಕದ ಅಭಿವೃದ್ಧಿಗಾಗಿ ನಾನು ಹೋರಾಡುತ್ತೇನೆ. ನನ್ನ ಜೀವ ಇರುವವರೆಗೂ ನಿಮ್ಮೆಲ್ಲರ ಉತ್ತಮ ಭವಿಷ್ಯಕ್ಕಾಗಿ ನಾನು ಶ್ರಮಿಸುತ್ತೇನೆ ಎಂದು ಡೋನಾಲ್ಡ್ ಟ್ರಂಪ್ ಹೇಳಿದ್ದಾರೆ.

ಇನ್ನು ಟ್ರಂಪ್ ಗೆಲುವು ಸಾಧಿಸಿದ್ದಕ್ಕೆ ಪ್ರಧಾನಿ ಮೋದಿ ಅಭಿನಂದನೆ ತಿಳಿಸಿ, ಸಂದೇಶ ರವಾನಿಸಿದ್ದಾರೆ. ತಮ್ಮ ಮತ್ತು ಟ್ರಂಪ್ ಫೋಟೋ ಹಾಕಿ, ನನ್ನ ಸ್ನೇಹಿತ ಡೋನಾಲ್ಡ್ ಟ್ರಂಪ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದು, ಅವರಿಗೆ ಅಭಿನಂದನೆಗಳು. ವ್ಯಾಪಾರ ವಹಿವಾಟು ಉತ್ತಮಗೊಳಿಸಲು, ಜಂಟಿಯಾಗಿ ಮತ್ತಷ್ಟು ಶ್ರಮಿಸೋಣ. ಜನರ ಒಳಿತಿಗಾಗಿ ಇಬ್ಬರು ಸೇರಿ ಕೆಲಸ ಮಾಡೋಣ ಎಂದಿದ್ದಾರೆ.

- Advertisement -

Latest Posts

Don't Miss