Saturday, December 7, 2024

Latest Posts

ಬೆಂಗಳೂರಿನ ರಾಯರ ಮಠಕ್ಕೆ ಭೇಟಿ ಕೊಟ್ಟ ಬ್ರಿಟನ್ ಮಾಜಿ ಪ್ರಧಾನಿ ರಿಷಿ ಸುನಕ್

- Advertisement -

International News: ಬ್ರಿಟನ್ ಮಾಜಿ ಪ್ರಧಾನಿ, ಸುಧಾಮೂರ್ತಿ ಮತ್ತು ನಾರಾಯಣ ಮೂರ್ತಿಯವರ ಅಳಿಯ ರಿಷಿ ಸುನಕ್, ಭಾರತಕ್ಕೆ ಬಂದಿದ್ದು, ಬೆಂಗಳೂರಿನ ಕೆಲವು ಕಡೆಯೂ ಭೇಟಿ ನೀಡಿದ್ದಾರೆ.

ಸುಧಾಮೂರ್ತಿ ಮತ್ತು ನಾರಾಯಣಮೂರ್ತಿ ಅವರ ಪುತ್ರಿ ಅಕ್ಷತಾ ಅವರು ಬ್ರಿಟನ್ ಮಾಜಿ ಪ್ರಧಾನಿ ರಿಷಿ ಸುನಕ್ ಪತ್ನಿಯಾಗಿದ್ದು, ತನ್ನ ತವರೂರಿಗೆ ಆಗಮಿಸಿದ್ದರು. ಇದೇ ವೇಳೆ ಬೆಂಗಳೂರಿನ ರಾಯರ ಮಠಕ್ಕೆ ಕುಟುಂಬ ಸಮೇತರಾಗಿ ಭೇಟಿ ನೀಡಿದ್ದಾರೆ. ರಾಯರ ದರ್ಶನ ಮಾಡಿ, ರಾಯರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಜಯನಗರದ ನಂಜನಗೂಡು ರಾಯರ ಮಠಕ್ಕೆ ಭೇಟಿ ನೀಡಿದ್ದರು. ರಿಷಿ ಸುನಕ್ ಹುಟ್ಟಿ ಬೆಳೆದಿದ್ದು ಬ್ರಿಟನ್‌ನಲ್ಲಿ ಆದರೂ, ಅವರು ಭಾರತೀಯರಾಗಿದ್ದಾರೆ. ಆದ್ರೆ ಅವರು ಉತ್ತರ ಭಾರತೀಯರಾಗಿದ್ದು, ರಾಯರ ಭಕ್ತರಾಗಿದ್ದಾರೆ. ಸುಧಾಮೂರ್ತಿ ಹೇಳಿದಂತೆ ರಿಷಿ ಸುನಕ್ ಗುರುವಾರದ ದಿನ ರಾಯರನ್ನು ಆರಾಧಿಸುತ್ತಾರೆ. ಏಕೆಂದರೆ, ಸುಧಾಮೂರ್ತಿ ಬ್ರಾಹ್ಮಣರಾಗಿದ್ದು, ರಾಯರನ್ನು ಆರಾಧಿಸುತ್ತಾರೆ. ಹಾಗಾಗಿ ರಿಷಿ ಕೂಡ ರಾಯರ ಭಕ್ತರಾಗಿದ್ದಾರೆ.

- Advertisement -

Latest Posts

Don't Miss