- Advertisement -
ಮಂಗಳೂರು: ಇಲ್ಲಿನ ವಿಶ್ವವಿದ್ಯಾಲಯ ಕಾಲೇಜಿನಲ್ಲಿ ಹಿಜಾಬ್ ವಿವಾದ ಉಂಟಾಗಿರುವ ಹಿನ್ನೆಲೆಯಲ್ಲಿ ಶಿಸ್ತು ಉಲ್ಲಂಘಿಸಿದ ವಿಧ್ಯಾರ್ಥಿನಿಯರಿಗೆ ಪ್ರಿನ್ಸಿಪಾಲ್ ನೀಡಿದ ನೋಟಿಸ್ ಗೆ ಉತ್ತರ ನೀಡಲು ಗುರುವಾರ ಕೊನೆ ದಿನವಾಗಿದ್ದರೂ ಕೂಡ ಯಾವುದೇ ಉತ್ತರ ಸಲ್ಲಿಸಿಲ್ಲ ಎಂದು ಮೂಲಗಳು ತಿಳಿಸಿವೆ.
ಹಿಜಾಬ್ ನಿಷೇಧದ ಕುರಿತು ಮೂವರು ವಿಧ್ಯಾರ್ಥಿನಿಯರು ಹೊರಗಿನವರೊಂದಿಗೆ ಸೇರಿಕೊಂಡು ಸುದ್ದಿಗೋಷ್ಠಿ ನಡೆಸಿ ಕಾಲೇಜ್ ಶಿಸ್ತು ಉಲ್ಲಂಘಿಸಿದರು.
ಇದನ್ನು ಗಂಭೀರವಾಗಿ ಪರಿಗಣಿಸಿದ ಪ್ರಿನ್ಸಿಪಾಲ್ ಡಾ.ಅನುಸೂಯ ರೈ ಜೂನ್6 ರಂದು ನೋಟಿಸ್ ನೀಡಿದ್ದರು. ಆ ಮೂವರು ವಿಧ್ಯಾರ್ಥಿನಿಯರು ಮುಂದೆ ತರಗತಿಗೆ ಬರಬೇಕಾದರೆ ಉತ್ತರ ನೀಡಬೇಕು. ಇಲ್ಲದಿದ್ದರೆ ಸೂಕ್ತ ಕ್ರಮ ಕೈ ಗೊಳ್ಳಲಾಗುವುದು ಎಂದು ಪ್ರಿನ್ಸಿಪಾಲ್ ತಿಳಿಸಿದ್ದಾರೆ.
- Advertisement -

