Friday, April 18, 2025

Latest Posts

ನನ್ನ ಹಾಡಿಗೆ ಚಪ್ಪಾಳೆ ತಟ್ಟಬೇಡಿ: ಕೋಲ್ಕತ್ತಾ ಸಂಗೀತ ಕಾರ್ಯಕ್ರಮದಲ್ಲಿ ಬೇಸರ ಹೊರಹಾಕಿದ ಶ್ರೇಯಾ

- Advertisement -

Bollywood News: ಶ್ರೇಯಾ ಘೋಷಾಲ್ ಅಂದ್ರೆ ಯಾರಿಗೆ ತಾನೇ ಗೊತ್ತಿಲ್ಲಾ ಹೇಳಿ..? ಅದರಲ್ಲೂ ಭಾರತೀಯರಿಗೆ ಶ್ರೇಯಾ ಘೋಷಾಲ್ ಫೇವರಿಟ್ ಸಿಂಗರ್, ಆಕೆಯ ಧ್ವನಿ ಕೇಳಿ, ತಲೆಯಾಡಿಸದವರೇ ಇಲ್ಲ.. ವಾವ್ ಅನ್ನೋ ಉದ್ಗಾರ ತೆಗೆಯದವರೇ ಇಲ್ಲ. ಇನ್ನು ಅವರ ಸಂಗೀತ ಕಾರ್ಯಕ್ರಮ ನಡೆಯುತ್ತಿದೆ ಎಂದರೆ, ಅವರು ಹಾಡು ಶುರು ಮಾಡಿದ ತಕ್ಷಣವೇ ಚಪ್ಪಾಳೆ ಮೊಳಗಲು ಶುರುವಾಗುತ್ತದೆ. ಆದರೆ, ಕೋಲ್ಕತ್ತಾದಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಶ್ರೇಯಾ ಘೋಷಾಲ್‌ ಗಾಯನ ಪ್ರತಿಭಟನೆ ನಡೆಸಿದ್ದು, ನಾನು ಹಾಡುವ ಹಾಡನ್ನು ಕೇಳಿ ಯಾರೂ ಚಪ್ಪಾಳೆ ತಟ್ಟಬಾರದು ಎಂದು ಹೇಳಿದ್ದಾರೆ.

ಈ ಮೊದಲೇ ಈ ಸಂಗೀತ ಕಾರ್ಯಕ್ರಮದ ಕೊಲ್ಕತ್ತಾದಲ್ಲಿ ನಡೆಯಬೇಕಿತ್ತು. ಆದರೆ ಕೋಲ್ಕತ್ತಾದ ಮೆಡಿಕಲ್ ಕಾಲೇಜಿನಲ್ಲಿ ಗ್ಯಾಂಗ್ ರೇಪ್ ಆದ ಕಾರಣ ಈ ಕಾರ್ಯಕ್ರಮವನ್ನು ಮುಂದೂಡಲಾಗಿತ್ತು. ಇದೀಗ ಆ ಕಾರ್ಯಕ್ರಮ ನಡೆಸಿಕೊಟ್ಟ ಶ್ರೇಯಾ ಘೋಷಾಲ್ ಬೇಸರದೊಂದಿಗೆ ಹಾಡು ಹಾಡಿದ್ದಾರೆ. ಅಲ್ಲದೇ ಮೃತ ವಿದ್ಯಾರ್ಥಿನಿಗಾಗಿ ಭಾವುಕವಾದ ಹಾಡೊಂದನ್ನು ಶ್ರೇಯಾ ಘೋಷಾಲ್ ಹಾಡಿದ್ದಾರೆ.

ಬಳಿಕ ಈ ಹಾಡಿಗೆ ಯಾರೂ ಚಪ್ಪಾಳೆ ತಟ್ಟಬೇಡಿ, ಮೃತಳ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸಿ ಎಂದು ಹೇಳಿದ್ದಾರೆ. ಈ ವೇಳೆ ಎಲ್ಲರೂ ವಿ ವಾಂಟ್ ಜಸ್ಟೀಸ್ ಎಂದು ಪ್ರತಿಭಟಿಸಿದ್ದು, ಈ ಕೂಗಿಗೆ ಶ್ರೇಯಾ ಕೂಡ ಸಾಥ್ ಕೊಟ್ಟರು. ಇನ್ನು ಈ ಮೊದಲು ಕೋಲ್ಕತ್ತಾದಲ್ಲಿ ಗಾಯಕ ಅರ್ಜಿತ್ ಸಿಂಗ್ ಕೂಡ ಕಾರ್ಯಕ್ರಮ ನಡೆಸಿ, ಈ ಘಟನೆಯನ್ನು ಖಂಡಿಸಿದ್ದರು.

- Advertisement -

Latest Posts

Don't Miss