ಬೆಳಿಗ್ಗೆ ಬೇಗ ಎದ್ದು ಶುಚಿರ್ಭೂತರಾಗಿ ಮಡಿ ಮೈಲಿಗೆಯಿಂದ, ದೇವರಿಗೆ ದೀಪ ಹಚ್ಚಿ, ಕರ್ಪೂರದಾರತಿ ಬೆಳಗಿ, ನೈವೇದ್ಯವನ್ನೆಲ್ಲ ಇಟ್ಟು, ಹೂವೆಲ್ಲ ಹಾಕಿ ಕೆಲವರು ಪ್ರತಿದಿನ ದೇವರಿಗೆ ಪೂಜೆ ಸಲ್ಲಿಸುತ್ತಾರೆ. ಆದ್ರೆ ಅವರ ಜೀವನದಲ್ಲಿ ಪ್ರಗತಿ ಅನ್ನೋದು ಇರೋದೇ ಇಲ್ಲ. ಹಣ ಕೂಡಿಡಲು ಸಾಧ್ಯವಾಗೋದೇ ಇಲ್ಲ. ಅಂದುಕೊಂಡ ಕೆಲಸ ಮಾಡಲು ಆಗೋದೇ ಇಲ್ಲ. ಯಾಕಂದ್ರೆ ಪೂಜಾ ಸಮಯದಲ್ಲಿ ಸಾವು ಮಾಡುವ ಕೆಲ ಕೆಲಸಗಳೇ ಇದಕ್ಕೆ ಕಾರಣವಾಗುತ್ತದೆ. ಯಾವುದು ಆ ತಪ್ಪುಗಳು ಅನ್ನೋದನ್ನ ನೋಡೋಣ.

ಪೂಜೆ ಮಾಡುವಾಗ ಹಣೆಗೆ ತಿಲಕವನ್ನಿರಿಸಬೇಕು. ಹೆಣ್ಣು ಮಕ್ಕಳಾದರೆ, ಹಣೆಗೆ ಕುಂಕುಮ, ಬಳೆಯನ್ನ ಹಾಕಿಕೊಂಡು ಪೂಜೆ ಮಾಡಬೇಕು. ಇಲ್ಲದಿದ್ದರೆ, ಪೂಜೆ ಮಾಡಿ ಉಪಯೋಗವಿಲ್ಲ.
ಕೆಲವರು ಬಟ್ಟೆ ಹಾಕದೇ, ಬೆತ್ತಲೆಯಾಗಿ ಪೂಜೆ ಮಾಡುತ್ತಾರೆ. ಆದ್ರೆ ಇದು ತಪ್ಪು, ಇದರಿಂದ ಅಶುಭ ಫಲ ಉಂಟಾಗುತ್ತದೆ. ಅಲ್ಲದೇ, ಬೆತ್ತಲೆಯಾಗಿ ಕೇವಲ ಕೆಲ ಸಾಧು ಸಂತರಷ್ಟೇ ಪೂಜೆ ಮಾಡ್ತಾರೆ. ಯಾಕಂದ್ರೆ ನಗ್ನ ಪೂಜಾ ವಿಧಾನಗಳೇ ಬೇರೆ ರೀತಿ ಇರುತ್ತದೆ. ವಿಧಾನ ತಿಳಿಯದೇ ಪೂಜೆ ಮಾಡಿದ್ರೆ, ಕಷ್ಟ ಕಟ್ಟಿಟ್ಟ ಬುತ್ತಿ.
ತಲೆಸ್ನಾನ ಮಾಡಿ ಪೂಜೆ ಮಾಡುವಾಗ ಕೂದಲು ಪೂರ್ತಿಯಾಗಿ ಒಣಗಿಸಿಕೊಂಡಿರಬೇಕು. ನೀರಿಳಿಯುತ್ತಿರುವ ಕೂದಲನ್ನು ಹೊತ್ತು ಪೂಜೆ ಮಾಡಿದ್ರೆ, ಪೂಜಾ ಫಲ ದೊರಕುವುದಿಲ್ಲ.
ಕೆಲ ಪುರುಷರು ಸ್ನಾನದ ಬಳಿಕ ಮೈ ಕೈ ಒರೆಸಿಕೊಂಡ ಟಾವೆಲನ್ನೇ ಮೈಗೆ ಸುತ್ತಿಕೊಂಡು ಬಂದು ಪೂಜೆಗೆ ಕೂರುತ್ತಾರೆ ಇದು ಶುಭವಲ್ಲ. ಪೂಜೆ ಮಾಡುವಾಗ, ಬೇರೆಯದೇ ಮಡಿ ಬಟ್ಟೆಯುಟ್ಟು ಪೂಜೆಗೆ ಕೂರಬೇಕು.

ಶ್ರೀ ಗಣಪತಿ ಜ್ಯೋತಿಷ್ಯ ಕೇಂದ್ರ
ಭಾರತದ ಪ್ರಖ್ಯಾತ ಜ್ಯೋತಿಷ್ಯರು ಪಂಡಿತ್ ಸಂತೋಷ್ ರಾವ್
ದೂರವಾಣಿ ಸಂಖ್ಯೆ: 9380683911
ಜ್ಯೋತಿಷ್ಯ ಶಾಸ್ತ್ರದಲ್ಲಿ 20 ವರ್ಷಗಳಿಗಿಂತಲೂ ಅಧಿಕ ಅನುಭವ, ನಿಮ್ಮ ಯಾವುದೇ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ಆರೋಗ್ಯ, ದಾಂಪತ್ಯ ಕಲಹ, ವ್ಯವಹಾರದಲ್ಲಿ ಸಮಸ್ಯೆ, ಕೋರ್ಟ್ ಕೇಸ್, ಸ್ತ್ರೀ- ಪುರುಶ ವಶೀಕರಣ, ಮಾಟ ಮಂತ್ರ ಇತರೇ ಯಾವುದೇ ಸಮಸ್ಯೆಗಳಿಗೆ ಪ್ರಾಚೀನ ಕಾಲದ ವೇದ ಶಾಸ್ತ್ರದ ಮೂಲಕ ಕೇವಲ 7 ದಿನಗಳಲ್ಲೇ ಶಾಶ್ವತ ಪರಿಹಾರ.
ಇಂದೇ ಸಂಪರ್ಕಿಸಿ ಶ್ರೀ ಪಂಡಿತ್ ಸಂತೋಷ್ ರಾವ್: 9380683911




