Devotional:
ಮಂಗಳವಾರ ಸಾಮಾನ್ಯವಾಗಿ ಹನುಮಂತನನ್ನು ಪೂಜಿಸುತ್ತಾರೆ,ಈ ದಿನ ಕೆಲವೊಂದು ಕೆಲಸಗಳನ್ನು ಮಾಡಬಾರದು ಎಂದು ಹೇಳಲಾಗುತ್ತದೆ. ಒಂದು ವೇಳೆ ಮಂಗಳವಾರ ಈ ಕೆಲಸಗಳನ್ನು ಮಾಡಿದರೆ ಅಂಜನೇಯ ಸ್ವಾಮಿ ನಮ್ಮ ಮೇಲೆ ಕೋಪಿಸಿಕೊಳ್ಳುತ್ತಾನೆ. ಹಾಗಾದರೆ ಮಂಗಳವಾರ ನಾವು ಯಾವ ಕೆಲಸಗಳನ್ನು ಮಾಡಬಾರದು..? ಎಂದು ತಿಳಿದು ಕೊಳ್ಳೋಣ .
ಮಂಗಳವಾರ ಮಂಗಳ ಗ್ರಹದ ಅಂಶವೆಂದು ಪರಿಗಣಿಸಲಾಗಿದೆ. ಈ ದಿನ ಹನುಮಂತನನ್ನು ಪೂಜಿಸುವುದರಿಂದ ಎಲ್ಲಾ ತೊಂದರೆಗಳು ದೂರವಾಗುತ್ತವೆ. ಇದರೊಂದಿಗೆ ಹನುಮಂತನ ಕೃಪೆಯೂ ಸಿಗುತ್ತದೆ. ಜಾತಕದಲ್ಲಿ ಮಂಗಳದೋಷ ಇರುವವರು ಈ ದಿನ ಹನುಮಂತನನ್ನು ಪೂಜಿಸಬೇಕು ಎಂದು ಹೇಳಲಾಗುತ್ತದೆ. ಮಂಗಳವಾರ ಕೆಲವು ಚಟುವಟಿಕೆಗಳು ಅಶುಭವೆಂದು ಪರಿಗಣಿಸಲಾಗಿದೆ.
1.ಮಂಗಳವಾರದಂದು ಹಣವನ್ನು ಕೊಡಬಾರದು ಹಾಗೂ ತೆಗೆದುಕೊಳ್ಳಬಾರದು. ಹೀಗೆ ಮಾಡುವುದರಿಂದ ನಿಮಗೆ ಹಣಕಾಸಿನ ತೊಂದರೆ ಮತ್ತು ನಷ್ಟ ಉಂಟಗಬಹುದು. ಆದರೆ ಈ ದಿನ ಸಾಲವನ್ನು ಮರುಪಾವತಿ ಮಾಡುವುದರಿಂದ ಸಾಲಬಾಧೆ ಆದಷ್ಟು ಬೇಗ ಕಳೆಯುತ್ತದೆ ಎನ್ನುವ ನಂಬಿಕೆಯಿದೆ.
2.ಮಂಗಳವಾರದಂದು ಅಪ್ಪಿತಪ್ಪಿಯೂ ಉದ್ದನ್ನು ಅಥವಾ ಉದ್ದಿನ ಬೇಳೆಯನ್ನು ಸೇವಿಸಬಾರದು. ಈ ದಿನ ಉದ್ದನ್ನು ತಿನ್ನುವುದರಿಂದ, ಶನಿ ಮತ್ತು ಮಂಗಳನ ಸಂಯೋಜನೆಯು ನಿಮ್ಮ ಆರೋಗ್ಯಕ್ಕೆ ತೊಂದರೆಯನ್ನುಂಟು ಮಾಡಬಹುದು. ಉದ್ದು ಶನಿಗೆ ಸಂಬಂಧಿಸಿದೆ.
3.ಮಂಗಳವಾರ ಮೀನು ಖರೀದಿಸಿ ತಿಂದವರ ಹಣ ನೀರಿನಂತೆ ಹರಿದು ಹೋಗುತ್ತದೆ ಎನ್ನುವ ನಂಬಿಕೆಯಿದೆ. ಈ ಕಾರಣದಿಂದ ಮಂಗಳವಾರದಂದು ಮೀನನ್ನು ಸೇವಿಸಬಾರದು.
4.ಮಂಗಳವಾರ ಹನುಮಂತನ ದಿನ ಈ ದಿನ ಸಾತ್ವಿಕರಾಗಿ ಉಳಿಯಬೇಕು. ಮದ್ಯ ಮತ್ತು ಮಾಂಸಾಹಾರದಿಂದ ದೂರವಿರಬೇಕು. ಇದರಿಂದ ದೇವರ ಆಶೀರ್ವಾದ ನಿಮ್ಮ ಮೇಲಿರುವುದು.
5.ಮಂಗಳವಾರದಂದು ಕೂದಲು ಮತ್ತು ಗಡ್ಡವನ್ನು ಕಟ್ ಮಾಡಬಾರದು ಹಾಗೂ ಉಗುರುಗಳನ್ನು ಕತ್ತರಿಸಬಾರದು. ಈ ದಿನ ಉಗುರುಗಳನ್ನು ಕತ್ತರಿಸುವುದು ಅಶುಭವೆಂದು ಪರಿಗಣಿಸಲಾಗುತ್ತದೆ. ಇದರಿಂದಾಗಿ ನೀವು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
6.ಮಂಗಳವಾರ ಮೇಕಪ್ ವಸ್ತುಗಳನ್ನು ಖರೀದಿಸಬೇಡಿ ಈ ದಿನದಂದು ಮೇಕಪ್ ವಸ್ತುಗಳನ್ನು ಖರೀದಿಸುವುದರಿಂದ ವೈವಾಹಿಕ ಸಂಬಂಧಗಳಲ್ಲಿ ಬಿರುಕು ಉಂಟಾಗುತ್ತದೆ ಎಂದು ನಂಬಲಾಗಿದೆ. ಸೋಮವಾರ ಮತ್ತು ಶುಕ್ರವಾರವನ್ನು ಇದಕ್ಕಾಗಿ ಅತ್ಯುತ್ತಮ ದಿನಗಳಾಗಿವೆ.
7.ಮಂಗಳವಾರದಂದು ಕಪ್ಪು ಬಣ್ಣದ ಬಟ್ಟೆಗಳನ್ನು ಖರೀದಿಸಬೇಡಿ ಅಥವಾ ಧರಿಸಬೇಡಿ. ಈ ದಿನ ಕೆಂಪು ಬಣ್ಣದ ಬಟ್ಟೆಗಳನ್ನು ಧರಿಸುವುದರಿಂದ ಮಂಗಳದೋಷದ ಪರಿಣಾಮ ಕಡಿಮೆಯಾಗುತ್ತದೆ.
8.ಮಂಗಳವಾರ ಸೋದರನೊಂದಿಗೆ ಜಗಳವಾಡಬೇಡಿ ಮಂಗಳವು ಅಣ್ಣನಿಗೆ ಸಂಬಂಧಿಸಿದೆ ಎನ್ನುವ ನಂಬಿಕೆಯಿದೆ. ಸಹೋದರನೊಂದಿಗಿನ ವಿವಾದವು ಮಂಗಳವನ್ನು ಹಾಳುಮಾಡುತ್ತದೆ, ಅಪಘಾತಗಳು ಮತ್ತು ದುಃಖಗಳಿಗೆ ಕಾರಣವಾಗುತ್ತದೆ. ಕೌಟುಂಬಿಕ ಜೀವನದಲ್ಲಿ ಸಮಸ್ಯೆಗಳು ಹೆಚ್ಚಾಗುತ್ತವೆ.
9.ಈ ದಿನ ಭೂಮಿಯನ್ನು ಅಗೆಯಬಾರದು. ಈ ರೀತಿ ಮಾಡುವುದರಿಂದ ಮಂಗಳನ ಅಶುಭ ಪರಿಣಾಮ ಹೆಚ್ಚಾಗುತ್ತದೆ. ಇದಕ್ಕೆ ಕಾರಣ ಮಂಗಳವನ್ನು ಭೂಮಿಯ ಮಗ ಎಂದು ಪರಿಗಣಿಸಲಾಗಿದೆ. ಆದ್ದರಿಂದ, ಮಂಗಳವಾರದಂದು ಮನೆಯ ಅಡಿಪಾಯವನ್ನು ಹಾಕುವುದು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ.