ನಾವು ಎಲ್ಲರಿಗೂ ಒಳ್ಳೆಯದನ್ನ ಬಯಸಿದ್ರೂ ಕೂಡ, ನಮಗೆ ಬೇರೆಯವರು ಒಳ್ಳೆಯದನ್ನೇ ಬಯಸುತ್ತಾರೆ ಅನ್ನೋದು ಭ್ರಮೆ. ನಮ್ಮ ಏಳಿಗೆ, ಖುಷಿ ಕಂಡ ನಮ್ಮ ಹತ್ತಿರದವರೇ ನಮಗೆ ಕುತ್ತು ಬರೋ ಕೆಲಸವನ್ನ ಮಾಡಲೂಬಹುದು. ಕೆಲವೆಡೆ ಮಾಟ ಮಂತ್ರ ಮಾಡಿಸ್ತಾರೆ, ಇನ್ನು ಕೆಲವೆಡೆ ಊಟಕ್ಕೆ ಕರೆದು ಊಟದಲ್ಲಿ ಮದ್ದು ಹಾಕಿ ಕೊಡ್ತಾರೆ. ಆಗ ನಮಗೆ ಗೊತ್ತಿಲ್ಲದೆಯೇ ಕ್ರಮೇಣವಾಗಿ ನಮ್ಮ ಆರೋಗ್ಯ ಕೆಡಲಾರಂಭಿಸುತ್ತದೆ. ಇದು ಸಾವಿನ ದವಡೆಗೂ ತೆಗೆದುಕೊಂಡು ಹೋಗಬಹುದು.

ಹೀಗೆಲ್ಲಾ ಮಾಡಿದಾಗ ನಾವು ಅದರದಿಂದ ಬಚಾವಾಗಲು ಏನು ಮಾಡಬೇಕು..? ಯಾವ ದಿನಗಳಲ್ಲಿ ಹೊರಗೆ ಊಟ ತಿಂಡಿ ಮಾಡಬಾರದು..? ಮದ್ದು ಹಾಕುವುದರ ಪರಿಣಾಮವೇನಾಗತ್ತೆ ಅನ್ನೋದರ ಬಗ್ಗೆ ನಾವಿವತ್ತು ತಿಳಿಸಿಕೊಡಲಿದ್ದೇವೆ.
ಮೊದಲನೆಯದಾಗಿ ಹುಣ್ಣಿಮೆ ಮತ್ತು ಅಮವಾಸ್ಯೆಯ ದಿನ ಯಾರ ಮನೆಯಲ್ಲೂ ಊಟ ಮಾಡಬೇಡಿ. ಎಷ್ಟೇ ಪ್ರೀತಿಯಿಂದ ಕಾಡಿ ಬೇಡಿ ಕರೆದರೂ ಕೂಡ ಹುಣ್ಣಿಮೆ ಮತ್ತು ಅಮವಾಸ್ಯೆಯ ದಿನ ಯಾರ ಮನೆಯಲ್ಲೂ ಊಟ ಮಾಡಬೇಡಿ.
ಯಾಕಂದ್ರೆ ಈ ದಿನಗಳಲ್ಲೇ ಊಟದಲ್ಲಿ ಮದ್ದು ಸೇರಿಸಿ ಕೊಡಲಾಗುತ್ತದೆ. ಈ ದಿನ ಊಟದಲ್ಲಿ ಮದ್ದು ಸೇರಿಸಿದರೆ ಅದರ ಪರಿಣಾಮ ಹೆಚ್ಚಾಗಿರತ್ತೆ. ಆದ್ರೆ ಬೇರೆ ದಿನಗಳಲ್ಲಿ ಮದ್ದಿನ ಪರಿಣಾಮ ಇರುವುದಿಲ್ಲ. ಹಾಗಾಗಿ ಹುಣ್ಣಿಮೆ ಮತ್ತು ಅಮವಾಸ್ಯೆಯ ದಿನ ಯಾರ ಮನೆಯಲ್ಲೂ ಊಟ ಮಾಡಬಾರದು.
ಇನ್ನು ಯಾವ ವ್ಯಕ್ತಿ ಮದ್ದು ತಿಂದಿರ್ತಾನೋ ಅಂತಹ ವ್ಯಕ್ತಿಯ ಆರೋಗ್ಯ ದಿನದಿಂದ ದಿನಕ್ಕೆ ಹದಗೆಡುತ್ತಾ ಬರುತ್ತದೆ. ಊಟ ಸೇರುವುದಿಲ್ಲ. ವಾಂತಿ ಬೇಧಿ ಶುರುವಾಗುತ್ತದೆ. ಊಟ ಮಾಡಬೇಕು, ಹಸಿವು ಇದೆ ಅಂತಾ ಅನ್ನಿಸಿದರೂ ಕೂಡ ಊಟ ತಿಂಡಿ ಕಂಡರೆ ವಾಕರಿಕೆ ಬರುವಂತಾಗುತ್ತದೆ. ಮೊದಲೆಲ್ಲ ಘಮ ಘಮ ಊಟದ ಪರಿಮಳ ಕಂಡರೆ ಖುಷಿ ಪಡುವ ವ್ಯಕ್ತಿ, ಮದ್ದಿನ ಪರಿಣಾಮವಾಗಿ ಊಟದ ಪರಿಮಳವನ್ನ ದ್ವೇಷಿಸುತ್ತ ಬರುತ್ತಾನೆ. ವೈದ್ಯರ ಬಳಿ ತೋರಿಸಿದರೂ ಇದಕ್ಕೆ ಪರಿಹಾರ ಸಿಗುವುದು ಅಷ್ಟು ಸುಲಭವಲ್ಲ.
ಇದಕ್ಕೆ ಪರಿಹಾರವಾಗಿ ಯಾರಿಗೆ ಮದ್ದು ಹಾಕಿದ್ದಾರೆ ಎಂಬ ಅನುಮಾನವಿರುತ್ತದೆಯೋ, ಅವರು ಬೆಳಿಗ್ಗೆ 5ರಿಂದ 6 ಗಂಟೆ ಸುಮಾರಿಗೆ ಎದ್ದ ತಕ್ಷಣ ನೀರು ಮುಟ್ಟದೇ ಸುಮ್ಮನೆ ಕೂರಬೇಕು. ನಂತರ ಅವರ ಅಕ್ಕ ತಂಗಿ ಅಪ್ಪ ಅಮ್ಮ ಯಾರಾದರೂ ಒಬ್ಬರು ನುಗ್ಗೇಸೊಪ್ಪಿನ ರಸವನ್ನ ಹಿಂಡಿ, ಮದ್ದು ಸೇರಿರುವ ಅನುಮಾನವಿರುವ ವ್ಯಕ್ತಿಯ ಎಡಗೈ ಮೇಲೆ ಹಾಕಬೇಕು. ಹಾಕಿದ ರಸ ರಸದಂತೆ ಇದ್ದರೆ ಮದ್ದು ಹಾಕಿಲ್ಲವೆಂದರ್ಥ. ಹಾಕಿದ ರಸ ಗಟ್ಟಿಗೊಂಡರೆ ಮದ್ದು ಹೊಟ್ಟೆಗೆ ಸೇರಿದೆ ಎಂದರ್ಥ.
ನಿಮಗೆ ಮದ್ದು ಬಿದ್ದಿದ್ದೇ ಆದರೆ ತಡಮಾಡದೇ ಮದ್ದು ತೆಗೆಸಿಕೊಳ್ಳಬೇಕು. ಕೆಲವೆಡೆ ಮದ್ದು ತೆಗಿಯುವವರು ಸಿಗುತ್ತಾರೆ. ಅಂಥವರನ್ನ ಪತ್ತೆ ಹಚ್ಚಿ ಮದ್ದು ತೆಗೆಸಿಕೊಳ್ಳಿ. ಅದರ ಬಗ್ಗೆ ನಿರ್ಲಕ್ಷ್ಯ ತೋರಿದರೆ, ಹಾಕಿದ ಮದ್ದು ದೇಹದ ಒಳಗೆ ಕೆಟ್ಟ ಪರಿಣಾಮ ಬೀರುತ್ತದೆ. ಅದರ ಮೇಲೆ ಕೂದಲು ಬೆಳೆದು ಜೀವ ಹೋಗುವ ಸಂಭವ ಕೂಡ ಇರುತ್ತದೆ. ಹಾಗಾಗಿ ಮದ್ದು ಹೊಟ್ಟೆ ಸೇರಿದಾಗ ಅದರ ಬಗ್ಗೆ ನಿರ್ಲಕ್ಷ್ಯ ತೋರಬೇಡಿ.

ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯ ಕೇಂದ್ರ, ಮಹೇಶ್ ಭಟ್ ಗುರೂಜಿ, 9686999517,
ವಿದ್ಯೆ, ಉದ್ಯೋಗ, ವ್ಯಾಪಾರ, ಶತ್ರುಕಾಟ, ಪ್ರೀತಿಯಲ್ಲಿ ನಂಬಿ ಮೋಸ, ಆರೋಗ್ಯ, ಹಣಕಾಸು ಮದುವೆ,ಸಂತಾನ, ಪ್ರೇಮ ವಿವಾಹ, ಮಾಟ- ಮಂತ್ರ ದೋಷ ನಿವಾರಣೆ, ಇನ್ನಿತರ ಯಾವುದೇ ಸಮಸ್ಯೆ ಇದ್ದರೂ ಕರೆ ಮಾಡಿ.

