Sunday, October 5, 2025

Latest Posts

ಈ ಆಹಾರವನ್ನು, ಹಣ್ಣು-ತರಕಾರಿಯನ್ನು ಪ್ರತಿದಿನ ತಿನ್ನಬಾರದು..

- Advertisement -

ಮನುಷ್ಯ ಆರೋಗ್ಯವಾಗಿರಬೇಕು ಅಂದ್ರೆ ಆಹಾರವನ್ನು ಸೇವಿಸಬೇಕು. ಆದ್ರೆ ಕೆಲ ಆಹಾರಗಳನ್ನ, ಹಣ್ಣು, ತರಕಾರಿಗಳನ್ನ ಅಗತ್ಯಕ್ಕಿಂತ ಹೆಚ್ಚು, ಪ್ರತಿದಿನ ಸೇವಿಸಬಾರದು. ಹೀಗೆ ಸೇವಿಸುವುದರಿಂದ ಆರೋಗ್ಯ ಹಾಳಾಗುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾದ್ರೆ ಯಾವ ಆಹಾರ, ಹಣ್ಣು, ತರಕಾರಿಯನ್ನ ನಾವು ಪ್ರತಿದಿನ ಸೇವಿಸಬಾರದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ನಾವು ನಿಮಗೆ ದೇಹದ ತೂಕ ಇಳಿಸೋಕ್ಕೆ ಯಾವ ಆಹಾರವನ್ನು ತಿನ್ನಬೇಕು ಅನ್ನೋ ಬಗ್ಗೆ ಈ ಮೊದಲು ಹೇಳಿದ್ದೆವು. ಆದ್ರೆ ಅದೇ ಆಹಾರವನ್ನ ಅಗತ್ಯಕ್ಕಿಂತ ಹೆಚ್ಚು ತಿಂದ್ರೆ ಏನಾಗತ್ತೆ ಅಂತಾ ಈಗ ಹೇಳಲಿದ್ದೇವೆ. ಭರಪೂರ ಪೋಶಕಾಂಶಗಳಿಂದ ಕೂಡಿದ ಹಣ್ಣುಗಳನ್ನ ಅತೀಯಾಗಿ ತಿಂದ್ರೂ ಕೂಡ, ಆರೋಗ್ಯಕ್ಕೆ ಒಳ್ಳೆಯದಲ್ಲ. ಇದರಿಂದ ಸಕ್ಕರೆ ಖಾಯಿಲೆ ಬರುವ ಸಾಧ್ಯತೆ ಇರುತ್ತದೆ. ಅದರಲ್ಲೂ ಬಾಳೆ ಹಣ್ಣು, ಖರ್ಜೂರ, ಅನಾನಸ್, ಮಾವಿನ ಹಣ್ಣು ಅಗತ್ಯಕ್ಕಿಂತ ಹೆಚ್ಚುತ್ತಿನಲೇಬಾರದು. ದಿನಕ್ಕೊಂದು ಬಾಳೆಹಣ್ಣು, ಎರಡರಿಂದ ಮೂರು ಖರ್ಜೂರ, ವಾರಕ್ಕೊಮ್ಮೆ ಅನಾನಸ್ ತಿಂದ್ರೆ ಓಕೆ. ಆದ್ರೆ ಅದಕ್ಕಿಂತ ಹೆಚ್ಚು ತಿನ್ನಲೇಬೇಡಿ.

ಇನ್ನು ಕಿತ್ತಳೆ ಹಣ್ಣು, ಟೊಮೆಟೋ, ನಿಂಬೆ ಹಣ್ಣುಗಳ ಸೇವನೆಯೂ ಮಿತವಾಗಿರಲಿ. ಬ್ರೋಕಲಿ, ಆಲಿವ್ ಎಣ್ಣೆ, ಓಟ್‌ಮೀಲ್ಸ್ ಇವನ್ನೆಲ್ಲ ನಾವು ದೇಹದ ತೂಕ ಇಳಿಸಿಕೊಳ್ಳೋಕ್ಕೆ ತಿಂತೀವಿ. ಆದ್ರೆ ಇದನ್ನ ಅತೀಯಾಗಿ ತಿಂದ್ರೆ ದೇಹದ ತೂಕವೇನೋ ಇಳಿಯುತ್ತೆ. ಜೊತೆಗೆ ಬೇರೆ ರೋಗವೂ ಬರುವ ಸಾಧ್ಯತೆ ಇದೆ. ಹಾಗಾಗಿ ಈ ಆಹಾರಗಳನ್ನ ಮಿತವಾಗಿ ತಿನ್ನಿ.

ಚೀಯಾ ಸೀಡ್ಸ್, ಪಾಲಕ್ ಸೊಪ್ಪು ಕೂಡ ಹೆಚ್ಚು ತಿಂದ್ರ ಆರೋಗ್ಯಕ್ಕೆ ಹಾನಿಯುಂಟು ಮಾಡತ್ತೆ. ಇದು ಆಶ್ಚರ್ಯವೆನ್ನಿಸಿದರೂ ನಿಜ. ಪಾಲಕ್ ಸೊಪ್ಪು ಪ್ರತಿನಿತ್ಯ ತಿಂದ್ರೆ ದೇಹದಲ್ಲಿ, ಕಬ್ಬಿಣಾಂಶ ಹೆಚ್ಚುತ್ತೆ. ಅದೇ ಕಬ್ಬಿಣಾಂಶ ಅತೀಯಾದ್ರೆ, ಬೇರೆ ಖಾಯಿಲೆಯೂ ಬರತ್ತೆ. ಹಾಗಾಗಿ ಕಬ್ಬಿಣಾಂಶ ಸಿಗುವ ಆಹಾರ ಸೇವನೆ ಮಿತವಾಗಿರಲಿ.

- Advertisement -

Latest Posts

Don't Miss