ವಿಘ್ನ ನಿವಾರಕ ಗಣೇಶ ಇನ್ನೇನು ಭಾದ್ರಪದ ಶುಕ್ಲ ಚೌತಿಯ ದಿನ ಭೂಮಿಗೆ ಬರಲಿದ್ದಾನೆ. ಈಗಾಗಲೇ ಊರೆಲ್ಲಾ ಗಣೇಶನ ಬರುವಿಕೆಗಾಗಿ ಕಾಯ್ತಾಯಿದೆ. ಗಣಪತಿಯನ್ನು ಪೂಜಿಸುವಾಗ ಕೆಲವೊಂದು ಆಚರಣೆಗಳನ್ನು ಪಾಲಿಸೋದು ಮುಖ್ಯ. ಅದರಲ್ಲೂ ಗಣೇಶ ಚತುರ್ಥಿಯಂದು ಗಣೇಶನಿಗೆ ಈ ವಸ್ತುಗಳನ್ನು ತಪ್ಪಿಯೂ ಅರ್ಪಿಸಬಾರದಂತೆ. ಒಂದು ವೇಳೆ ಅರ್ಪಿಸಿದ್ರೆ ಸಮಸ್ಯೆ ನಿಮ್ಮನ್ನ ಬಿಡೋದೇ ಇಲ್ವಂತೆ. ಹಾಗಿದ್ರೆ ಆ ವಸ್ತು ಯಾವುದು? ಗಣೇಶನಿಗೂ ಆ ವಸ್ತುವಿಗೂ ಏನು ಸಂಬಂಧ ಏನು ಅಂತಾ ಹೇಳ್ತೀವಿ.
ಗಣೇಶ ಹಬ್ಬದಂದು ವಿನಾಯಕನಿಗೆ ಗರಿಕೆ, ದಾಸವಾಳ, ಮೋದಕ ಸೇರಿದಂತೆ ಅತೀ ಪ್ರಿಯವಾದ ವಸ್ತುಗಳನ್ನು ಅರ್ಪಿಸಲಾಗುವುದು. ಆದರೆ, ಪೂಜೆ ವೇಳೆ ಅಪ್ಪಿ-ತಪ್ಪಿಯೂ ಕೆಲ ವಸ್ತುಗಳನ್ನು ಅರ್ಪಿಸಬಾರದಂತೆ..
ಹಿಂದೂ ಧರ್ಮದಲ್ಲಿ, ಶಿವ-ಗೌರಿಯ ಮಗ ಗಣೇಶನನ್ನು ಸಂತೋಷ, ಸಮೃದ್ಧಿ, ವೈಭವ ಮತ್ತು ಅದೃಷ್ಟದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಯಾವುದೇ ಶುಭ ಕಾರ್ಯವನ್ನು ಆರಂಭಿಸೋ ಮುನ್ನ ಗಣೇಶನನ್ನು ಪೂಜಿಸೋದು ಪದ್ಧತಿ. ಹೀಗಾಗಿನೇ ಶಾಸ್ತ್ರೋಕ್ತವಾಗಿ ಗಣಪತಿಯನ್ನು ಪೂಜಿಸೋದ್ರಿಂದ ,ಭಕ್ತರು ಎಲ್ಲಾ ತೊಂದರೆಗಳಿಂದ ದೂರ ಆಗ್ತಾರೆಂಬ ನಂಬಿಕೆ ಇದೆ.
ಆದ್ರೆ ಪೌರಾಣಿಕ ನಂಬಿಕೆಗಳ ಪ್ರಕಾರ, ಒಮ್ಮೆ ಗಣೇಶನು ಗಂಗಾ ನದಿಯ ದಡದಲ್ಲಿ ತಪಸ್ಸು ಮಾಡುತ್ತಿದ್ದನಂತೆ. ಈ ಸಮಯದಲ್ಲಿ ಧರ್ಮಾತ್ಮಜನ ಮಗಳು ತುಳಸಿ ಬರ್ತಾಳೆ. ಆಕೆ ಗಣೇಶನನ್ನು ಮೆಚ್ಚಿ ಮದುವೆಯ ಆಸೆಯನ್ನು ಪ್ರಸ್ತಾಪಿಸ್ತಾಳೆ. ಆದರೆ, ಗಣೇಶ ಸ್ವತಃ ಬ್ರಹ್ಮಚಾರಿಯಾಗಿದ್ದು ಮದುವೆ ಪ್ರಸ್ತಾಪವನ್ನು ನಿರಾಕರಿಸ್ತಾನೆ.
ಹೀಗಾಗಿ ತುಳಸಿಯು ಕೋಪಗೊಂಡು ತನ್ನ ಮದುವೆಯ ಪ್ರಸ್ತಾಪವನ್ನು ತಿರಸ್ಕರಿಸಿದ ಗಣೇಶನಿಗೆ , ನೀನು ಎಂದೆಂದಿಗೂ ಬ್ರಹ್ಮಚಾರಿಯಾಗಿರು ಎಂದು ಶಪಿಸಿತ್ತಾಳೆ. ಇದರಿಂದ ಕೋಪಗೊಂಡ ಗಣೇಶ ತುಳಸಿಗೂ, ಅಸುರನನ್ನು ಮದುವೆಯಾಗು ಎಂದು ಶಪಿಸ್ತಾನೆ. ರಾಕ್ಷಸನ ಹೆಂಡತಿಯಾಗು ಎಂಬ ಶಾಪಕ್ಕೆ ಭಯಗೊಂಡ ತುಳಸಿ ಗಣೇಶನಲ್ಲಿ ಕ್ಷಮೆ ಕೇಳ್ತಾಳೆ. ಆಗ ಗಣೇಶನು ತುಳಸಿಗೆ ಶಂಖಚೂರ್ಣ ಎಂಬ ರಾಕ್ಷಸನನ್ನು ಮದುವೆಯಾಗು ಎಂದು ಹೇಳ್ತಾನೆ.
ತುಳಸಿಯು ರಾಕ್ಷಸನನ್ನು ಮದುವೆ ಆದರೂ ನಂತರ ಕಲಿಯುಗದಲ್ಲಿ ಮೋಕ್ಷವನ್ನು ನೀಡುವ ವಿಷ್ಣುವಿಗೆ ನೀನು ಪ್ರಿಯ ಆಗುತ್ತೀಯ ಎಂದು ತುಳಸಿಗೆ ಹೇಳ್ತಾನೆ. ಇದೇ ವೇಳೆ ನನ್ನ ಪೂಜೆಯಲ್ಲಿ ಎಂದಿಗೂ ನೀನು ಅರ್ಪಣೆಯಾಗುವುದಿಲ್ಲ ಎನ್ನುತ್ತಾನೆ. ಇದೇ ಕಾರಣದಿಂದ ಗಣೇಶನನ್ನು ಪೂಜಿಸುವಾಗ ತುಳಸಿ ಎಲೆಗಳನ್ನು ಅರ್ಪಿಸಬಾರದು ಎಂದು ಹೇಳ್ತಾರೆ ಒಂದು ವೇಳೆ ಅರ್ಪಿಸಿದ್ದಲ್ಲಿ ವಿಘ್ನ ವಿನಾಶಕ ಕೋಪಗೊಳ್ಳುತ್ತಾನೆ. ಹೀಗಾಗಿ ಗಣೇಶನನ್ನು ಪೂಜಿಸುವಾಗ ಯಾವುದೇ ಕಾರಣಕ್ಕೂ ತುಳಸಿ ದಳವನ್ನು ಪೂಜೆಗೆ ಬಳಸಬೇಡಿ…