ಕೆಲ ವಸ್ತುಗಳನ್ನ ಯಾರಿಗೂ ಉಡುಗೊರೆಯಾಗೋ ಅಥವಾ ದಾನ ವಾಗಿಯೋ ನೀಡಬಾರದು. ಹೀಗೆ ಮಾಡಿದ್ದಲ್ಲಿ ನಿಮ್ಮ ಮನೆಯ ಅದೃಷ್ಟವೆಲ್ಲ ಆ ವಸ್ತುಗಳನ್ನು ಕೊಟ್ಟವರ ಮನೆಗೆ ಹೋಗುತ್ತದೆಯಂತೆ. ಅಲ್ಲದೇ ನಿಮಗೆ ಅತೀವ ನಷ್ಟ ಸಂಭವಿಸುವ ಸಾಧ್ಯತೆ ಇದೆ. ಹಾಗಾದ್ರೆ ಯಾವುದು ಆ ವಸ್ತು ಅನ್ನೋದನ್ನ ನೋಡೋಣ ಬನ್ನಿ..

ಒಡೆದು ಹೋದ ವಸ್ತುವನ್ನ ಬೇರೆಯವರಿಗೆ ನೀಡಬೇಡಿ. ಉದಾಹರಣೆಗೆ ಕನ್ನಡಿ, ಗಾಜಿನ ವಸ್ತು, ಡಬ್ಬಿ, ಪಾತ್ರೆ ಇಂತಹ ವಸ್ತು ಒಡೆದುಹೋಗಿದ್ದರೆ, ಅಂತಹ ವಸ್ತುವನ್ನು ದಾನವಾಗಿ ನೀಡಬೇಡಿ. ಇದರಿಂದ ನಿಮ್ಮ ಮನೆಗೆ ದಾರಿದ್ರ್ಯ ಬರುವ ಸಾಧ್ಯತೆ ಇದೆ.
ಹಳಸಿರುವ ಊಟವನ್ನ ಭಿಕ್ಷುಕರಿಗಾಗಲಿ, ಪ್ರಾಣಿ ಪಕ್ಷಿಗಳಿಗಾಗಲಿ ನೀಡಬೇಡಿ. ಹೀಗೆ ಮಾಡಿದ್ದಲ್ಲಿ ನಿಮ್ಮ ಮೇಲೆ ಅಪವಾದ ಬರುವ ಸಾಧ್ಯತೆ ಇದೆ.
ಹರಿದ ಬಟ್ಟೆಗಳನ್ನ ಬೇರೆಯವರಿಗೆ ಕೊಡಬೇಡಿ. ನಿರ್ಗತಿಕರಿಗೆ ಬಟ್ಟೆ ಕೊಡಬೇಕೆಂದು ಹಳೆಯ ಬಟ್ಟೆಗಳನ್ನ ಎತ್ತಿಟ್ಟಿರ್ತೀರಿ. ಆದ್ರೆ ಬಟ್ಟೆ ಹಳೆಯದಾದ್ರೂ ಅದೂ ಹರಿದಿಲ್ಲವೇ ಎಂದು ಒಮ್ಮೆ ನೋಡಿ. ಹರಿದ ಬಟ್ಟೆ ನೀವು ಬೇರೆಯವರಿಗೆ ನೀಡಿದ್ದಲ್ಲಿ, ಅವರ ದಟ್ಟ ದಾರಿದ್ರ್ಯ ನಿಮಗೆ ಬಂದು, ನಿಮ್ಮ ಅದೃಷ್ಟ ಅವರಿಗೆ ಹೋಗುತ್ತದೆ.
ಪೊರಕೆಯನ್ನ ಎಂದಿಗೂ ಯಾರಿಗೂ ದಾನವಾಗಿ ನೀಡಬೇಡಿ. ಪೊರಕೆಯನ್ನ ಮಹಾಲಕ್ಷ್ಮಿ ಎನ್ನಲಾಗುತ್ತದೆ. ಆದ್ದರಿಂದ ನೀವು ಪೊರಕೆಯನ್ನ ಬೇರೆಯವರಿಗೆ ನೀಡಿದ್ರೆ, ನಿಮ್ಮ ಮನೆ ಅದೃಷ್ಟವನ್ನ ನೀವೇ ಬೇರೆಯವರಿಗೆ ನೀಡಿದಂತಾಗುತ್ತದೆ.
ಪ್ರೇಮಿಗಳು ವಾಚ್ ಗಿಫ್ಟ್ ನೀಡಿದ್ರೆ ಬ್ರೇಕಪ್ ಆಗತ್ತೆ ಅನ್ನೋ ಮಾತಿದೆ. ಆದ್ರೆ ಬರೀ ಪ್ರೇಮಿಗಳಲ್ಲ, ಸ್ನೇಹಿತರು, ಸಂಬಂಧಿಕರಿಗೆ, ಮದುವೆ ಮುಂಜಿಗಳಿಗೆ ಗಿಫ್ಟ್ ನೀಡುವಾಗ, ಯಾವುದೇ ಕಾರಣಕ್ಕೂ ಕೈ ಗಡಿಯಾಗ ಅಥವಾ ಗೋಡೆ ಗಡಿಯಾರವನ್ನ ಉಡುಗೊರೆಯಾಗಿ ಕೊಡಬಾರದು.

ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯ ಕೇಂದ್ರ, ಮಹೇಶ್ ಭಟ್ ಗುರೂಜಿ, 9686999517,
ವಿದ್ಯೆ, ಉದ್ಯೋಗ, ವ್ಯಾಪಾರ, ಶತ್ರುಕಾಟ, ಪ್ರೀತಿಯಲ್ಲಿ ನಂಬಿ ಮೋಸ, ಆರೋಗ್ಯ, ಹಣಕಾಸು ಮದುವೆ,ಸಂತಾನ, ಪ್ರೇಮ ವಿವಾಹ, ಮಾಟ- ಮಂತ್ರ ದೋಷ ನಿವಾರಣೆ, ಇನ್ನಿತರ ಯಾವುದೇ ಸಮಸ್ಯೆ ಇದ್ದರೂ ಕರೆ ಮಾಡಿ.