ದುಡ್ಡಿಗೋಸ್ಕರ ಸಿನಿಮಾ ಮಾಡಲ್ಲ, ನೆನಪುಗಳು ಶಾಶ್ವತ! : Rajesh Dhruva Podcast

Sandalwood News: ನಟ ರಾಜೇಶ್ ಧ್ರುವ ಸಿರಿಯಲ್‌ ನಂತರ, ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ ಅನ್ನೋ ಸಿನಿಮಾ ಮಾಡಿದ್ರು. ಅದರಲ್ಲಿ ತಮ್ಮ ಜೀವನದ ಅನುಭವಗಳನ್ನೇ ತೋರಿಸಲಾಗಿದೆ. ಈ ಬಗ್ಗೆ ರಾಜೇಶ್ ಮಾತನಾಡಿದ್ದಾರೆ.

ಓರ್ನ ಮೂವಿ ಮೇಕರ್ ಆಗಿ ಶ್ರೀ ಬಾಲಾಜಿ ಸ್ಟುಡಿಯೋ ಸಿನಿಮಾ ಮಾಡಿದ್ದರ ಬಗ್ಗೆ ನನಗೆ ಸಮಾಧಾನವಿದೆ. ಅಲ್ಲಿ ನಾನು ಹೀರೋ ಆಗಿ ಇಲ್ಲ. ಅಲ್ಲಿ ನಾನು ಓರ್ವ ಕಲಾವಿದ. ಓರ್ವ ಫೋಟೋಗ್ರಾಫರ್. ಅದು ಚಿಕ್ಕ ವಯಸ್ಸಿನಿಂದಲೂ ನೋಡಿ ಇನ್ಫ್ಲುಯೆನ್ಸ್ ಆಗಿರುವ ಪಾತ್ರ. ಮುಂಚೆ ಎಲ್ಲಾ ಎಲ್ಲರ ಸಂಭ್ರಮದ ಕ್ಷಣಗಳು, ದುಃಖದ ಕ್ಷಣಗಳಿಗೆಲ್ಲ ಸಾಕ್ಷಿಯಾಗುತ್ತಿದ್ದುದ್ದೇ ಕ್ಯಾಮೆರಾ. ಫೋಟೋಗ್ರಾಫರ್ ಅನ್ನುವವನು ಊರಿನ ಎಲ್ಲ ಕಾರ್ಯಕ್ರಮಗಳಿಗೂ ಹೋಗುತ್ತಿದ್ದ. ಮದುವೆ-ಮುಂಜಿ, ತಿಥಿ, ಅಪಘಾತ ಹೀಗೆ ಏನೇ ಘಟನೆ ನಡೆದರೂ ಅಲ್ಲಿ ಫೋಟೋಗ್ರಾಫರ್ ಇರುತ್ತಿದ್ದ ಎಂದು ಹಳೆಯ ನೆನಪನ್ನು ಧ್ರುವ ಮೆಲುಕು ಹಾಕಿದ್ದಾರೆ.

ಇನ್ನು ಶೆಟ್ಟಿ ಗ್ಯಾಂಗ್ ಅನ್ನೋ ಬಗ್ಗೆ ಮಾತನಾಡಿರುವ ರಾಜೇಶ್ ಧ್ರುವ, ರಾಜ್.ಬಿ.ಶೆಟ್ಟಿ ಅವರು ಹೇಳಿದ್ದು ಸರಿಯಾಗಿಯೇ ಇದೆ. ಶೆಟ್ಟಿ ಗ್ಯಾಂಗ್ ಅಂತಾ ನಿಮಗೆ ಅನ್ನಿಸಿದರೆ, ನೀವೂ 1 ಗ್ಯಾಂಗ್ ಮಾಡಿ. ಅವರು ನೀಡಿದ ಸಿನಿಮಾಗಳು ಹಿಟ್ ಆಯಿತೆಂದ ತಕ್ಷಣ ನೀವು ಅದನ್ನ ಗ್ಯಾಂಗ್ ಅನ್ನೋದು, ನಿಮಗೆ ಬಿಟ್ಟಿದ್ದು. ನಿಮಗೂ ಗ್ಯಾಂಗ್ ಬೇಕಾಗಿದ್ದಲ್ಲಿ, ನೀವೂ ಗ್ಯಾಂಗ್ ಮಾಡಿ ಎಂದಿದ್ದಾರೆ. ಪೂರ್ತಿ ಸಂದರ್ಶನಕ್ಕಾಗಿ ವೀಡಿಯೋ ನೋಡಿ.

About The Author