ಹರಟೆ ಹೊಡಿಯೋದ್ರಲ್ಲಿ ಮಹಿಳೆಯರು ಎತ್ತಿದ ಕೈ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಷಯ. ಗಂಡಸರೂ ಏನು ಕಡಿಮೆ ಇಲ್ಲ. ಆದ್ರೆ ಮಾತಿನ ವಿಷಯದಲ್ಲಿ ಹೆಣ್ಮಕ್ಳು ಸ್ವಲ್ಪ ಮುಂದೆ. ಆದ್ರೆ ಅಕ್ಕ ಪಕ್ಕದ ಮನೆಯವರ ಜೊತೆ, ಸ್ನೇಹಿತರ ಜೊತೆ ಹರಟೆಗೆ ಕೂತಾಗ ಕೆಲ ತಪ್ಪುಗಳನ್ನು ಮಾಡಕೂಡದು. ಕೆಲ ವಿಷಯಗಳನ್ನ ಹೇಳಕೂಡದು. ಯಾವುದು ಆ ವಿಷಯ ಅನ್ನೋದನ್ನ ನೋಡೋಣ ಬನ್ನಿ..

ನಿಮಗೆ ಯಾರಾದರೂ ಮಂತ್ರ ಉಪದೇಶ ಮಾಡಿದ್ರೆ, ಅದರಿಂದ ನಿಮಗೆ ಲಾಭವಾಗುತ್ತಿದೆ ಎಂದಾದ್ರೆ ಅದನ್ನ ಯಾರ ಬಳಿಯೂ ಹೇಳಬಾರದು. ನನಗೆ ಒಳ್ಳೆಯದಾಗುತ್ತಿದೆ ನಿಮಗೂ ಒಳ್ಳೆಯದಾಗಬಹುದೆಂದು ಬೇರೆಯವರಿಗೆ ನೀವು ಮಂತ್ರ ಹೇಳಿದರೆ ನಿಮಗೆ ಆಗುತ್ತಿದ್ದ ಲಾಭ ಅವರಿಗೆ ಹೋಗಿ, ನಿಮ್ಮ ಮಂತ್ರ ಪಠಣೆ ಶಕ್ತಿ ಕಳೆದುಕೊಳ್ಳುತ್ತದೆ.
ನಮಗೆ ಯಾರಾದರೂ ಹೊಗಳಿದರೆ ಅಥವಾ ಅವಮಾನ ಮಾಡಿದ್ರೆ ಅದನ್ನ ಯಾರಲ್ಲೂ ಹೇಳಬಾರದು. ಅಲ್ಲದೇ ನಿಮ್ಮ ವಯಸ್ಸನ್ನ ಕೂಡ ಎಲ್ಲರಲ್ಲಿ ಹೇಳುವಂತಿಲ್ಲ.
ನೀವು ಬಡ ಬಗ್ಗರಿಗೆ ಅಥವಾ ನಿರ್ಗತಿಕರಿಗೆ ಹಣ, ಧವಸಧಾನ್ಯ, ಬಟ್ಟೆ ದಾನ ಮಾಡಿದ್ದರೆ, ಅದನ್ನ ಪ್ರಚಾರ ಮಾಡಬೇಡಿ.
ಎಲ್ಲರ ಮನೆಯಲ್ಲೂ ಜಗಳ ನಡಿಯುತ್ತದೆ. ಏಕೆಂದರೆ ಪ್ರೀತಿ ಇದ್ದಲ್ಲಿ ಜಗಳ ನಡೆಯುತ್ತದೆ. ಅದು ಕ್ಷಣಿಕವಾಗಿರಬೇಕು. ಅದನ್ನ ಸ್ನೇಹಿತರು, ಸಂಬಂಧಿಕರು, ಅಕ್ಕಪಕ್ಕದ ಮನೆಯವರೊಂದಿಗೆ ಎಂದೂ ಹೇಳಿಕೊಳ್ಳಬೇಡಿ. ನಿಮ್ಮ ಮನೆಯ ಗುಟ್ಟು ನೀವೇ ರಟ್ಟು ಮಾಡಿಕೊಳ್ಳಬಾರದು. ಹಾಗೇನಾದರೂ ನೀವು ಮಾಡಿದ್ರೆ ನೀವು ಹೇಳಿದ ಗುಟ್ಟು ತರಹ ತರಹದ ರೂಪ ಪಡೆದು ಪ್ರಚಾರವಾಗುತ್ತದೆ. ಆಗ ನಿಮಗೇ ಅವಮಾನವಾಗುತ್ತದೆ.
ಇನ್ನು ನಿಮ್ಮ ಕುಟುಂಬದವರು ಸುಖ ಶಾಂತಿ ನೆಮ್ಮದಿಯಿಂದಿದ್ದರೆ, ಅದನ್ನ ಊರಿನವರ ಮುಂದೆ ವೈಭವೀಕರಿಸಲು ಹೋಗಬೇಡಿ. ನಾವು ನೆಮ್ಮದಿಯಾಗಿದ್ದೇವೆ. ನಮ್ಮ ಕುಟುಂಬದಲ್ಲಿ ಎಲ್ಲಾ ಅನ್ಯೋನ್ಯತೆಯಿಂದಿದ್ದೇವೆ. ಹಬ್ಬಕ್ಕೆ ಬಟ್ಟೆ ಒಡವೆ ಖರೀದಿಸಿದ್ದೇವೆ. ಈ ಬಾರಿ ಅದ್ಧೂರಿ ಹಬ್ಬ ಆಚರಿಸಲಿದ್ದೇವೆ ಎಂದೆಲ್ಲ ಹೇಳಿದರೆ, ನಿಮ್ಮ ಖುಷಿಗೆ ದೃಷ್ಟಿ ತಾಗಿ, ಇರುವ ಸಂತೋಷವೆಲ್ಲ ಹಾಳಾಗಿ ಹೋಗುತ್ತದೆ. ಆದ್ದರಿಂದ ಸತಿ ಪತಿ ಖುಷಿಯಾಗಿರುವ, ಕುಟುಂಬದಲ್ಲಿ ಸಂತೋಷದಿಂದಿರುವ ವಿಷಯವನ್ನ ನಿಮ್ಮಲ್ಲೇ ಇಟ್ಟುಕೊಳ್ಳಿ.

ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯ ಕೇಂದ್ರ, ಮಹೇಶ್ ಭಟ್ ಗುರೂಜಿ, 9686999517,
ವಿದ್ಯೆ, ಉದ್ಯೋಗ, ವ್ಯಾಪಾರ, ಶತ್ರುಕಾಟ, ಪ್ರೀತಿಯಲ್ಲಿ ನಂಬಿ ಮೋಸ, ಆರೋಗ್ಯ, ಹಣಕಾಸು ಮದುವೆ,ಸಂತಾನ, ಪ್ರೇಮ ವಿವಾಹ, ಮಾಟ- ಮಂತ್ರ ದೋಷ ನಿವಾರಣೆ, ಇನ್ನಿತರ ಯಾವುದೇ ಸಮಸ್ಯೆ ಇದ್ದರೂ ಕರೆ ಮಾಡಿ.