Saturday, November 29, 2025

Latest Posts

ನಿಮ್ಮ ದೇವರ ಕೋಣೆಯಲ್ಲಿ ದೊಡ್ಡ ದೊಡ್ಡ ದೇವರ ವಿಗ್ರಹವಿದೆಯೇ..? ಹಾಗಾದ್ರೆ ಇದನ್ನೊಮ್ಮೆ ಓದಿ..

- Advertisement -

ದೇವರ ಕೋಣೆ ಎಷ್ಟು ಚಿಕ್ಕದಿರುತ್ತದೆಯೋ ನಮ್ಮ ಸಂಕಷ್ಟಗಳು ಕೂಡ ಅಷ್ಟೇ ಚಿಕ್ಕದಿರುತ್ತದೆ. ದೇವರ ಕೋಣೆ , ದೇವರ ಮೂರ್ತಿಗಳು ಚಿಕ್ಕ ಚಿಕ್ಕದಿದ್ದಾಗಲೇ ಮನೆಗೆ ಒಳಿತು, ಎಷ್ಟೇ ಶ್ರೀಮಂತರಾಗಿದ್ದರೂ ದೇವರ ಕೋಣೆ ಮಾತ್ರ ಬಡವರಂತೆ ಕಟ್ಟಬೇಕು ಎಂಬ ಮಾತಿದೆ. ಆ ಬಗ್ಗೆ ಚಿಕ್ಕ ಮಾಹಿತಿಯನ್ನ ನಾವಿಂದು ನಿಮಗೆ ನೀಡಲಿದ್ದೇವೆ.

ಕೆಲ ಶ್ರೀಮಂತರ ಮನೆಯಲ್ಲಿ ದೊಡ್ಡ ದೇವರ ಕೋಣೆ. ಅದರಲ್ಲಿ ದೊಡ್ಡ ದೊಡ್ಡ ದೇವರ ಮೂರ್ತಿಯನ್ನ ಇಟ್ಟಿರುವುದನ್ನ ನೋಡಿರುತ್ತೀರಿ. ಅದನ್ನ ಅವರು ಭಕ್ತಿಯಿಂದಲೇ ತಂದಿರಿಸಿದ್ದರೂ ಕೂಡ, ಆ ರೀತಿ ದೊಡ್ಡ ದೊಡ್ಡ ವಿಗ್ರಹಗಳ ಬಳಕೆ ಉತ್ತಮವಲ್ಲ ಎನ್ನಲಾಗಿದೆ.

ದೇವರ ಕೋಣೆ ಎಷ್ಟು ಚಿಕ್ಕದಿರುತ್ತದೆಯೋ ಅಷ್ಟು ಒಳ್ಳೆಯದು. ಅಂತೆಯೇ ದೇವರ ವಿಗ್ರಹ ಎಷ್ಟು ಕಡಿಮೆ ಮತ್ತು ಚಿಕ್ಕದಿರುತ್ತದೆಯೋ ಅಷ್ಟು ಒಳ್ಳೆಯದು.

ಅದೂ ಅಲ್ಲದೇ ದೇವರ ವಿಗ್ರಹವಿದ್ದ ಜಾಗದಲ್ಲಿ ಮಡಿಯನ್ನ ಪಾಲಿಸಬೇಕು. ಬೆಳಿಗ್ಗೆ ಮಧ್ಯಾಹ್ನ ರಾತ್ರಿ ಹೀಗೆ ಮೂರು ಹೊತ್ತು ಶುದ್ಧಗೊಂಡು ಪೂಜೆ ಮಾಡಿ, ಅದರ ನಿಯಮ ಪಾಲಿಸಬೇಕು. ಅದನ್ನು ಬಿಟ್ಟು ಬರೀ ಚಂದಕ್ಕಷ್ಟೇ ದೇವರ ವಿಗ್ರಹ ತಂದಿರಿಸಿದರೆ ಅದರಿಂದ ನಷ್ಟ, ಆರೋಗ್ಯದಲ್ಲಿ ಏರುಪೇರಾಗುವುದೇ ಹೊರತು ಲಾಭವಾಗುವುದಿಲ್ಲ.

ಇನ್ನು ದೇವರ ಕೋಣೆ ದೇವರ ಮನೆ ಶುದ್ಧವಾಗಿರುವಂತೆ ನೋಡಿಕೊಳ್ಳಬೇಕು. ದೇವರ ಮೂರ್ತಿಗೆ ಧೂಳು ತಾಗದಂತೆ ನೋಡಿಕೊಳ್ಳಬೇಕು. ದೇವರ ಕೋಣೆ, ದೇವರ ಮೂರ್ತಿ ಎಷ್ಟು ಶುದ್ಧವಾಗಿರುತ್ತದೆಯೋ ನಿಮ್ಮ ಬದುಕು ಕೂಡ ಶುದ್ಧವಾಗಿರುತ್ತದೆ. ಆದ್ದರಿಂದ ದೇವರ ಕೋಣೆ ಶುದ್ಧವಾಗಿರಿಸಿಕೊಳ್ಳಬೇಕು.

ಇನ್ನು ದೊಡ್ಡ ದೊಡ್ಡ ಮೂರ್ತಿಯನ್ನು ತಂದಿರಿಸಿದ್ದಲ್ಲಿ, ಅದಕ್ಕೆ ದಿನಕ್ಕೆ ಮೂರು ಬಾರಿ ಸ್ನಾನ ಮಾಡಿ ಮಡಿಯಿಂದ ಪೂಜೆ, ನೈವೆದ್ಯ ಮಾಡಬೇಕಾಗುತ್ತದೆ. ಇದನ್ನೆಲ್ಲ ಮಾಡಲಾಗದಿದ್ದರೆ, ಹೆಚ್ಚಿನ ದೇವರ ಮೂರ್ತಿಯನ್ನ ಮನೆಯಲ್ಲಿರಿಸಕೂಡದು.

ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯ ಕೇಂದ್ರ, ಮಹೇಶ್ ಭಟ್ ಗುರೂಜಿ, 9686999517,
ವಿದ್ಯೆ, ಉದ್ಯೋಗ, ವ್ಯಾಪಾರ, ಶತ್ರುಕಾಟ, ಪ್ರೀತಿಯಲ್ಲಿ ನಂಬಿ ಮೋಸ, ಆರೋಗ್ಯ, ಹಣಕಾಸು ಮದುವೆ,ಸಂತಾನ, ಪ್ರೇಮ ವಿವಾಹ, ಮಾಟ- ಮಂತ್ರ ದೋಷ ನಿವಾರಣೆ, ಇನ್ನಿತರ ಯಾವುದೇ ಸಮಸ್ಯೆ ಇದ್ದರೂ ಕರೆ ಮಾಡಿ.

- Advertisement -

Latest Posts

Don't Miss