Sunday, April 13, 2025

Latest Posts

ಗಂಡನ ಮನೆಯಲ್ಲಿ ಮಹಿಳೆಯ ಕೊಲೆ ಪತಿ ಸೇರಿದಂತೆ ನಾಲ್ವರ ಬಂಧನ..!

- Advertisement -

ಧಾರವಾಡ:ಕಲಘಟಗಿ ತಾಲೂಕಿನ ಭೋಗೆನಾಗರಕೊಪ್ಪ ಗ್ರಾಮದಲ್ಲಿ ಶುಕ್ರವಾರ ಸುಮಂಗಲ ಪ್ರವೀಣ್ ತಿಪ್ಪಣ್ಣವರ (30) ಅವರನ್ನು ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ ಈ ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಸುಮಂಗಲ ಅವರ ಪತಿ ಪ್ರವೀಣ್ ಬಸವಣ್ಣಪ್ಪ ತಿಪ್ಪಣ್ಣವರ್ (35) ಬಸವಣ್ಣಪ್ಪ ತಿಪ್ಪಣ್ಣವರ್ (65) ಚೆನ್ನವ್ವ ತಿಪ್ಪಣ್ಣವರ್ (55) ಮಹೇಶ್ ತಿಪ್ಪನ್ನವರ್ (38) ಅವರು ಬಂದಿತರು.

ಆರೋಪಿಗಳು ಸುಮಂಗಲ ಅವರನ್ನು ಕೊಲೆ ಮಾಡಿ ಬಳಿಕ ಅನುಮಾನ ಬರಬಾರದು ಎಂದು ನೇಣು ಹಾಕಿದ್ದರು. ಈ ಬಗ್ಗೆ ಕುಟುಂಬದವರು ನೀಡಿದ ದೂರಿನ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರವೀಣ್ ತಿಪ್ಪಣ್ಣವರ್ ಮತ್ತು ಅವರ ಕುಟುಂಬದವರು ನಾಲ್ಕು ವರ್ಷಗಳಿಂದ ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು ಎಂದು ಸುಮಂಗಲ ಅವರ ಕುಟುಂಬದವರು ದೂರಿನಲ್ಲಿ ತಿಳಿಸಿದ್ದಾರೆ. ಕಲಘಟಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ನಾಟಕ ಟಿವಿ ಬಿಗ್ ಇಂಪ್ಯಾಕ್ಟ್ ಪೋಲಿಸಪ್ಪ ಸಸ್ಪೆಂಡ್

ಹೆಬ್ಬಾಳ್ಕರ್‌ ಲಿಂಗಾಯತ ಲೀಡರ್ ಅಂತಾ ಹೇಳೋ ಅವಶ್ಯಕತೆ ಇದೆಯಾ? ಸಂತೋಷ ಲಾಡ್…..!

ಲೋಕಸಭೆ ಚುನಾವಣೆ ಹಿನ್ನೆಲೆ ಡಿಕೆಶಿ ಮನೆಗೆ ಸವದಿ ಭೇಟಿ: ರಾಜಕೀಯ ಬೆಳವಣಿಗೆ ಬಗ್ಗೆ ಚರ್ಚೆ

- Advertisement -

Latest Posts

Don't Miss