Thursday, September 19, 2024

Latest Posts

ಬಿಗ್​​ಬಾಸ್ ಬಗ್ಗೆ Dr Bro ಶಾಕಿಂಗ್ ಹೇಳಿಕೆ

- Advertisement -

ಗಗನ್ ಶ್ರೀನಿವಾಸ್, ಅಲಿಯಾಸ್ ಡಾ.ಬ್ರೋ.. ಡಾ.ಬ್ರೋ ಕಳೆದಬಾರಿಯೇ ಬಿಗ್​​ಬಾಸ್​​ಗೆ ಬರಬೇಕು ಅನ್ನೋ ಮಾತುಗಳಿತ್ತು. ಕನ್ನಡದ ಬಿಗ್​​ಬಾಸ್ ಸೀಸನ್ 10ರಲ್ಲಿ ಗಗನ್ ಕಾಣಿಸಿಕೊಳ್ಬೇಕು ಅಂತ ಅದೆಷ್ಟೋ ಕನ್ನಡಿಗರು ಆಸೆ ಪಟ್ಟಿದ್ರು. ಆದ್ರೆ ಆ ಚಾನ್ಸ್​ ಡಾ.ಬ್ರೋಗೆ ಸಿಗಲಿಲ್ಲ.. ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲೂ ಗಗನ್ ಬರಬೇಕು ಅನ್ನೋ ಮಾತುಗಳಿದ್ವು. ಆದರೀಗ ಬಿಗ್​​ ಬಾಸ್​​​ ಸೀಸನ್ ಬಗ್ಗೆ ಗಗನ್ ಶ್ರೀನಿವಾಸ್ ಶಾಕಿಂಗ್ ಹೇಳಿಕೆಯೊಂದನ್ನ ನೀಡಿದ್ದಾರೆ.

ಫೇಸ್​​ಬುಕ್​​​ನಲ್ಲಿ ಲೈವ್ ಬಂದಿದ್ದ ಡಾ.ಬ್ರೋ ಅವರ ಅಭಿಮಾನಿಗಳ ಸಾಕಷ್ಟು ಪ್ರಶ್ನೆಗಳಿಗೆ ಉತ್ತರಿಸಿದ್ರು. ಇದೇ ಟೈಮಲ್ಲಿ ಈ ಬಾರಿ ಬಿಗ್ ಬಾಸ್​​ಗೆ ಬರ್ತೀರಾ ಅನ್ನೋ ಪ್ರಶ್ನೆಗೆ ಇಲ್ಲ ಅಂತ ಉತ್ತರಿಸಿದ್ದಾರೆ. ಬಿಗ್​​ಬಾಸ್​​ಗೆ ಬಂದು 3 ತಿಂಗಳು ಆ ಮನೆಯಲ್ಲಿ ಇರೋಕ್ಕಿಂತ 5 ದೇಶ ಸುತ್ತಬಹುದು ಅಂದಿದ್ದಾರೆ.. ಗಗನ್ ಹೇಳಿರೋ ಮಾತುಗಳು ನಿಜಕ್ಕೂ ಸತ್ಯ. ಬಿಗ್ ಬಾಸ್ ಮನೆಯಲ್ಲಿ 100 ದಿನ ಜೈಲಿನಲ್ಲಿದ್ದಂತೆ ಕಳೆಯೋ ಬದಲು, ಐದಾರು ದೇಶ ಸುತ್ತಬಹುದು. ಅಲ್ಲಿನ ವಿಶೇಷತೆಗಳ ಬಗ್ಗೆ ಜನರ ಮುಂದಿಡಬಹುದು ಅನ್ನೋದು ಡಾ.ಬ್ರೋ ಲೆಕ್ಕಾಚಾರ

- Advertisement -

Latest Posts

Don't Miss