Friday, October 24, 2025

Latest Posts

ಕೊಲೆ ಬಳಿಕ 6 ತಿಂಗಳು ಮಹೇಂದ್ರ ಹೋಗಿದ್ದೆಲ್ಲಿ?

- Advertisement -

ಬೆಂಗಳೂರಲ್ಲಿ ಡಾ. ಕೃತಿಕಾ ರೆಡ್ಡಿ ಕೊಲೆ ಪ್ರಕರಣಕ್ಕೆ ದಿನಕ್ಕೊಂದು ತಿರುವು ಸಿಗುತ್ತಾ ಇದೆ. ಇದೀಗ ಪೊಲೀಸ್ ವಿಚಾರಣೆ ವೇಳೆ ಅಚ್ಚರಿಯ ಸಂಗತಿಯೊಂದು ಬೆಳಕಿಗೆ ಬಂದಿದೆ. ಕೊಲೆ ಆರೋಪಿಯಾದ ಡಾ. ಮಹೇಂದ್ರ ರೆಡ್ಡಿ, ಪಶ್ಚಾತ್ತಾಪದಿಂದ ದೇವಸ್ಥಾನಗಳನ್ನು ಸುತ್ತಿ ಬಂದಿದ್ದ ಎಂಬ ವಿಷಯ ಬಯಲಾಗಿದೆ.

ಆರೋಪಿ ಪತಿ ಮಹೇಂದ್ರ ರೆಡ್ಡಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡು, ತನಿಖೆ ವೇಳೆ ಹಲವಾರು ಸತ್ಯಗಳನ್ನು ಬಿಚ್ಚಿಟ್ಟಿದ್ದಾನೆ. ಮಹೇಂದ್ರ ತನ್ನ ಪತ್ನಿಯ ಆರೋಗ್ಯ ಸಮಸ್ಯೆಯಿಂದ ಬೇಸತ್ತು, ಆಕೆಯನ್ನು ಕೊಂದು ಸಹಜ ಸಾವು ಎಂದು ಬಿಂಬಿಸಲು ಯತ್ನಿಸಿದ್ದ. ಮರಣೋತ್ತರ ಪರೀಕ್ಷೆ ನಡೆಸಿದಾಗ ಆರೋಪಿ ಕೃತಿಕಾಗೆ ಮಿತಿ ಮೀರಿ ಅನಸ್ತೇಶಿಯಾ ನೀಡಿರುವ ವಿಚಾರ ಬಹಿರಂಗವಾಗಿತ್ತು. ಇದೀಗ ಪೊಲೀಸರ ಮುಂದೆ ಆರೋಪಿ ಮತ್ತೊಂದು ಸತ್ಯ ಬಿಚ್ಚಿಟ್ಟಿದ್ದಾನೆ.

ಕೊಲೆ ಮಾಡಿ ಪಾಪಪ್ರಜ್ಞೆಯಿಂದ ಬಳಲುತ್ತಿದ್ದ ಆರೋಪಿ ಮಹೇಂದ್ರ, ದೇವಸ್ಥಾನಗಳ ಮೊರೆ ಹೋಗಿದ್ದ ಎನ್ನುವುದು ತನಿಖೆಯ ವೇಳೆ ಬಯಲಾಗಿದೆ. ಪತ್ನಿ ಸಾವಿನಿಂದ ತೀವ್ರ ಆತಂಕಕ್ಕೊಳಗಾಗಿದ್ದ ಮಹೇಂದ್ರ ರೆಡ್ಡಿ, ಆರು ತಿಂಗಳ ಕಾಲ ರಾಜ್ಯದ ಪ್ರಮುಖ ತೀರ್ಥ ಕ್ಷೇತ್ರಗಳಿಗೆ ಭೇಟಿ ನೀಡಿದ್ದ. ಆರೋಪಿ ತಾನು ಮಾಡಿದ ಹೇಯ ಕೃತ್ಯದಿಂದ ಎಲ್ಲಿ ಪೊಲೀಸರ ಕೈಗೆ ಸಿಕ್ಕಿ ಬೀಳುತ್ತೀನೋ ಎಂಬ ಭಯದಿಂದ ಹಾಗೂ ಮಾನಸಿಕ ನೆಮ್ಮದಿಗೋಸ್ಕರ ಸುಮಾರು 15ಕ್ಕೂ ಹೆಚ್ಚು ದೇವಸ್ಥಾನಗಳನ್ನು ಸುತ್ತಿ ಬಂದಿದ್ದನಂತೆ.

ಕೊಲೆಗೆ ಯೋಚಿಸುತ್ತಿರುವಾಗ ಆತನಿಗೆ ನೆನಪಿಗೆ ಬಂದಿದ್ದು ಆಕೆಯ ಅನಾರೋಗ್ಯ. ಕೃತಿಕಾ ರೆಡ್ಡಿ ಆರೋಗ್ಯ ಸಮಸ್ಯೆಯನ್ನೇ ಬಂಡವಾಳವಾಗಿ ಮಾಡಿಕೊಂಡು ಸಂಚು ರೂಪಿಸಿದ್ದ. ಸಹಜ ಸಾವು ಎಂದು ನಂಬಿಸಿದರೆ ಮರಣೋತ್ತರ ಪರೀಕ್ಷೆ ನಡೆಯುವುದಿಲ್ಲ. ಆಗ ಕೊಲೆಯ ರಹಸ್ಯ ಹೊರಬರುವುದಿಲ್ಲ ಎಂದು ಯೋಚಿಸಿದ್ದನಂತೆ. ವೈದ್ಯಕೀಯ ನಿಯಮಗಳ ಪ್ರಕಾರ, ಕೃತಿಕಾ ದೇಹದ ತೂಕಕ್ಕೆ ಅನುಗುಣವಾಗಿ ಕೇವಲ 7ರಿಂದ 8 ಎಂ.ಎಲ್. ಅನಸ್ತೇಶಿಯಾ ನೀಡಬೇಕಿತ್ತು. ಆದರೆ, ಆತ ಉದ್ದೇಶಪೂರ್ವಕವಾಗಿ 15ML ನೀಡಿರುವುದು ವೈಜ್ಞಾನಿಕ ಸಾಕ್ಷ್ಯಗಳಿಂದ

- Advertisement -

Latest Posts

Don't Miss