Sandalwood: ಡ್ರಾಮಾ ಜೂನಿಯರ್ಸ್ ಖ್ಯಾತಿಯ ಸೂರಜ್ ನಾಯ್ಕ್ ಜತೆಗೆ ರೀಲ್ಸ್‌ನಲ್ಲಿ ನಟಿಸಿ ಸೈ ಅನ್ನಿಸಿಕ“ಂಡು, ರೀಲ್ಸ್ ಅಜ್ಜಿ ಎಂದೇ ಖ್ಯಾತರಾಗಿದ್ದ ಲಕ್ಷ್ಮೀ ಅಜ್ಜಿ ಇಂದು ನಿಧನರಾಗಿದ್ದಾರೆ.
ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಕೆರೆಹ“ಸಹಳ್ಳಿಯ ನಿವಾಸಿಯಾಗಿರುವ 93 ವರ್ಷದ ಲಕ್ಷ್ಮೀ ನಾಯಕ್ ವಯೋಸಹಜ ಖಾಯಿಲೆಯಿಂದ ನಿಧನರಾಗಿದ್ದು, ಇವರು ಇವರ ಮರಿಮೊಮ್ಮಗ, ಡ್ರಾಮಾ ಜೂನಿಯರ್ಸ್ ಖ್ಯಾತಿಯ ಸೂರಜ್ ಜತೆ ರೀಲ್ಸ್ ಮಾೠುತ್ತಿದ್ದರು.
ಸಾಮಾಜಿಕ ಜಾಲತಾಣದಲ್ಲಿ ಫೇಮಸ್ ಆಗಿದ್ದ ಇವರನ್ನು ಜನ ರೀಲ್ಸ್ ಅಜ್ಜಿ ಅಂತಲೇ ಕರೆಯುತ್ತಿದ್ದರು. ಕೆಲ ದಿನಗಳಿಂದ ಸೂರಜ್ ಜತೆ ಇವರು ರೀಲ್ಸ್‌ನಲ್ಲಿ ಕಾಣಿಸಿರಲಿಲ್ಲ. ಆಗ ಜನ ಅಜ್ಜಿ ಎಲ್ಲಿ ಅಂತಾ ಕೇಳಲು ಶುರು ಮಾಡಿದ್ದರು. ಅಲ್ಲದೇ, ಅವರ ಆರೋಗ್ಯದ ಬಗ್ಗೆ ಹಲವರು ಅಂದಾಜಿಸಿದ್ದರು. ಆದರೆ ಇಂದು ಸೂರಜ್ ಅವರೇ ಸಾಮಾಜಿಕ ಜಾಲತಾಣದ ಮೂಲಕ ಅಜ್ಜಿಯ ನಿಧನದ ಸುದ್ದಿ ಸ್ಪಷ್ಟಪಡಿಸಿದ್ದಾರೆ.




