Wednesday, April 16, 2025

Latest Posts

ಭಾರತ ತಂಡದ ಕೋಚ್ ಆಗಿ ದ್ರಾವಿಡ್ ನೇಮಕ..!

- Advertisement -

www.karnatakatv.net: ಭಾರತ ಪುರುಷ ತಂಡಕ್ಕೆ ಪೂರ್ಣ ಪ್ರಮಾಣದ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ನೇಮಕಗೊಂಡಿದ್ದಾರೆ.

ಹಂಗಾಮಿ ಕೋಚ್ ಆಗಿ ರಾಹುಲ್ ದ್ರಾವಿಡ್ ಕಾರ್ಯನಿರ್ವಹಿಸಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಈಗ ವಿಶ್ವಕಪ್ ನಂತರ ಪೂರ್ಣ ಪ್ರಮಾಣದ ಕೋಚ್ ಆಗಿ ನೇಮಕಗೊಂಡಿದ್ದಾರೆ. ಈ ಬಗೆಗಿನ ಬಿಸಿಸಿಐ ಕೋರಿಕೆಗೆ ದ್ರಾವಿಡ್ ಒಪ್ಪಿಗೆ ಸೂಚಿಸಿದ್ದಾರೆ ಎಂದು ಅನೇಕ ಮಾಧ್ಯಮಗಳು ವರದಿ ಮಾಡಿವೆ. ಈ ಮೂಲಕ ಅಂಡರ್ 19 ರಾಷ್ಟ್ರೀಯ ತಂಡದ ಕೋಚ್ ಆಗಿದ್ದ ರಾಹುಲ್ ಮತ್ತೊಂದು ಹೊಸ ಇನ್ನಿಂಗ್ಸ್ ಆರಂಭವಾಗುವುದು ಖಚಿತವಾಗಿದೆ.

ಪ್ರಸ್ತುತ ಕೋಚ್ ಆಗಿರುವ ರವಿಶಾಸ್ತಿç ಒಪ್ಪಂದ ಅಂತ್ಯವಾಗಿದೆ. ಅವರ ಸ್ಥಾನಕ್ಕೆ ಹೊಸ ಕೋಚ್ ನೇಮಕ ಮಾಡಬೇಕಾಗಿರುವುದು ಬಿಸಿಸಿಐ ಗೆ ಅನಿವಾರ್ಯತೆವಾಗಿದೆ. ಆದಕಾರಣ ಬಿಸಿಸಿಐ ರಾಹುಲ್ ಅವರನ್ನು ನೇಮಕಮಾಡಿಕೊಳ್ಳಲು ನಿರ್ಧರಿಸಿದೆ. ಇಷ್ಟು ದಿನ ಹಿರಿಯ ಪುರುಷ ತಂಡಕ್ಕೆ ಕೋಚ್ ಆಗಲು ಒಪ್ಪದ ರಾಹುಲ್ ದ್ರಾವಿಡ್ ಕೊನೆಗೂ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಪ್ರಸ್ತುತ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥರಾಗಿರುವ ರಾಹುಲ್ ಅ.17 ರಿಂದ ನ.14 ರವರೆಗೆ ನಡೆಯಲಿರುವ ಟಿ-20 ವಿಶ್ವಕಪ್ ನಂತರ ಭಾರತ ತಂಡದ ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

- Advertisement -

Latest Posts

Don't Miss