Health tips:
ಸಾಮಾನ್ಯವಾಗಿ ಮನುಷ್ಯರು ಎಣ್ಣೆಯ ಪದಾರ್ಥಗಳನ್ನು ,ಜಂಕ್ ಫುಡ್ಅನ್ನು, ಕರಿದ ಆಹಾರ ಮತ್ತು ಸಿಹಿ ತಿಂಡಿ,ತಿನಸುಗಳನ್ನು ತಿನ್ನುವುದರಿಂದ ತಮ್ಮ ದೇಹದ ತೂಕ ಹೆಚ್ಚಾಗುತ್ತದೆ. ನಂತರ ತೂಕವನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ, ಎಲ್ಲಾರೀತಿಯ ಪ್ರಯತ್ನಗಳನ್ನು ಮಾಡುತ್ತಿರುತ್ತಾರೆ, ಆದರೆ ಯಾವುದು ಪರಿಣಾಮಕಾರಿ ಯಾಗುವುದಿಲ್ಲ,ನಿಮ್ಮ ಚಯಾಪಚಯವನ್ನು ವೇಗಗೊಳಿಸಲು ಸಮತೂಲನ ಪೋಷಕಾಂಶಗಳ ಅಗತ್ಯವಿರುತ್ತದೆ. ನೀವು ತೂಕವನ್ನು ಇಳಿಸಿಕೊಳ್ಳುವ ಬಗ್ಗೆ ಯೋಚಿಸುತ್ತಿದ್ದರೆ, ನಾವು ನೀಡುವ ಕೆಲವು ಶರೀರದ ಡಿಟಾಕ್ಸ್ ಪಾನೀಯಗಳನ್ನು ನಿಮ್ಮ ದಿನ ನಿತ್ಯದ ಆಹಾರದಲ್ಲಿ ಸೇರಿಸಿ ಕೊಂಡರೆ ಖಂಡಿತ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು .ಹಾಗಾದರೆ ಯಾವ ಪಾನೀಯಗಳನ್ನು ಸೇವಿಸಬೇಕು ಎಂದು ತಿಳಿದು ಕೊಳ್ಳೋಣ .
ಎಳೆನೀರು ದೇಹಕ್ಕೆ ಅತ್ಯತ್ತಮ ಪದಾರ್ಥವಾಗಿದೆ. ದೇಹದ ತೂಕ ಇಳಿಕೆಗೆ ಪ್ರತಿದಿನ ಒಂದು ಎಳೆನೀರನ್ನು ಸೇವಿಸಿ.ದಾಳಿಂಬೆ ಮತ್ತು ಬೀಟ್ರೂಟ್ ಜ್ಯೂಸ್ ,ದಾಳಿಂಬೆ ಮತ್ತು ಬೀಟ್ರೂಟ್ ರಸವು ದೇಹವನ್ನು ನಿರ್ವಿಷಗೊಳಿಸಲು ಸಹಾಯ ಮಾಡುತ್ತದೆ. ನೀವು ಈ ಜ್ಯೂಸ್ ಅನ್ನು ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಕುಡಿಯಬಹುದು.
ಕಿತ್ತಳೆ, ಮತ್ತು ಕ್ಯಾರೆಟ್ ಜ್ಯೂಸ್ ,ಕಿತ್ತಳೆಯಲ್ಲಿ ಆಂಟಿಆಕ್ಸಿಡೆಂಟ್ ಮತ್ತು ವಿಟಮಿನ್ “ಸಿ” ಸಮೃದ್ಧವಾಗಿದೆ. ಕ್ಯಾರೆಟ್‌ನಲ್ಲಿ ಫೈಬರ್ ಅಧಿಕವಾಗಿದ್ದು ತೂಕ ಇಳಿಕೆ ಮತ್ತು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ನೀವು ತೂಕ ಇಳಿಸಿಕೊಳ್ಳಲು ಬಯಸುತ್ತಿದ್ದರೆ, ಪ್ರತಿದಿನ ಈ ರಸವನ್ನು ಸೇವಿಸಿ .
ಆಮ್ಲಾ ಜ್ಯೂಸ್, ಆಮ್ಲಾದಲ್ಲಿ ವಿಟಮಿನ್ “ಸಿ” ಹೇರಳವಾಗಿ ಕಂಡುಬರುತ್ತದೆ. ಇದು ದೇಹದ ಚಯಾಪಚಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ, ಆಮ್ಲಾ ಜ್ಯೂಸ್‌ನಲ್ಲಿರುವ ಪೋಷಕಾಂಶಗಳು ದೇಹದ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಆದ್ದರಿಂದ ನೀವು ನೆಲ್ಲಿಕಾಯಿ ಜ್ಯೂಸ್‌ಅನ್ನು ಸೇವಿಸುವುದರಿಂದ ತೂಕ ಕಡಿಮೆ ಮಾಡಿ ಕೊಳ್ಳಬಹುದು .
ಟೊಮೇಟೋ ಹಣ್ಣನ್ನು ಜ್ಯೂಸ್ ಮಾಡಿ ಅದಕ್ಕೆ ಒಂದು ಚಮಚ ನಿಂಬು ರಸವನ್ನು ಮಿಶ್ರಣ ಮಾಡಿ ಸೇವಿಸಿ ಗ್ರೀನ್ ಟೀ ಮತ್ತು ಪುದೀನಾ, ಗ್ರೀನ್ ಟೀ ತಯಾರಿಯ ವೇಳೆ ಒಂದೆರಡು ಪುದೀನಾ ಎಲೆಗಳನ್ನು ಹಾಕಿ ಕುದಿಸಿ, ಇದರ ಸೇವನೆಯಿಂದ ದೇಹದ ಅತಿಯಾದ ತೂಕವನ್ನು ಕಳೆದುಕೊಳ್ಳಬಹುದು.

