Health Tips: ಹಾಲು ಕುಡಿಯೋದು ಆರೋಗ್ಯಕ್ಕೆ ಉತ್ತಮ. ಆದರೆ ನಾವು ಯಾವ ಸಮಯದಲ್ಲಿ ಯಾವ ರೀತಿ ಹಾಲು ಕುಡಿತೀವಿ ಅನ್ನೋದು ಮುಖ್ಯ. ಹಾಗಾದ್ರೆ ನಾವು ಯಾವ ರೀತಿ ಹಾಲು ಕುಡಿಯಬೇಕು ಮತ್ತು ಯಾವ ರೀತಿ ಹಾಲು ಕುಡಿಯಬಾರದು ಅಂತಾ ತಿಳಿಯೋಣ ಬನ್ನಿ.
ಊಟವಾದ ತಕ್ಷಣ ಹಾಲು ಕುಡಿಯಬಾರದು. ನೀವು ಆಗ ತಾನೇ ತಿಂಡಿ ತಿಂದಿರುತ್ತೀರಿ. ಊಟ ಮಾಡಿರುತ್ತೀರಿ. ಆದರೆ ತಕ್ಷಣವೇ ಹಾಲು ಕುಡಿದರೆ, ನಿಮ್ಮ ಜೀರ್ಣಾಂಗದ ಮೇಲೆ ಭಾರ ಬೀಳುತ್ತದೆ. ಆಗ ಜೀರ್ಣಕ್ರಿಯೆ ಪ್ರಕ್ರಿಯೆಯಲ್ಲಿ ಏರುಪೇರಾಗಿ, ತಿಂದ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ.
ಇದರಿಂದ ಗ್ಯಾಸ್ಟಿಕ್ ಸಮಸ್ಯೆ ಸೇರಿ ಹಲವು ಆರೋಗ್ಯ ಸಮಸ್ಯೆ ಉದ್ಭವಿಸುತ್ತದೆ. ಏಕೆಂದರೆ ಹಾಲು ಹೆವಿ ಪೇಯ. ಈ ಹೆವಿ ಪೇಯ ಮಾತ್ರ ಕುಡಿದರೂ ನಮ್ಮ ಹೊಟ್ಟೆ ತುಂಬುತ್ತದೆ. ಹಾಗಾಗಿ ನಾವು ಊಟ- ತಿಂಡಿ ತಿಂದ ತಕ್ಷಣವೇ ಹಾಲು ಕುಡಿಯಬಾರದು. ಊಟವಾಗಿ ಅರ್ಧ ಗಂಟೆ ಬಳಿಕ ಹಾಲು ಕುಡಿಯಬಹುದು. ಅದರಲ್ಲೂ ರಾತ್ರಿ ವೇಳೆ ಊಟವಾದ ಬಳಿಕ, 2 ತಾಸು ಬಿಟ್ಟು ಬಿಸಿ ಹಾಲು ಕುಡಿಯಿರಿ. ಇದರಿಂದ ಆರೋಗ್ಯವೂ ಚೆನ್ನಾಗಿರುತ್ತದೆ. ಶಕ್ತಿಯೂ ಬರುತ್ತದೆ.
ನಾವು ಪಾಲಕ್ ಪನೀರ್ ಸೇವಿಸುತ್ತೇವೆ. ರೋಟಿ, ಚಪಾತಿ ಜತೆ ಇದು ಸೂಪರ್ ಕಾಂಬಿನೇಷನ್ಯ. ರುಚಿ ರುಚಿ ಭೋಜನವಾಗಿರುತ್ತದೆ. ಆದರೆ ಇದು ಆರೋಗ್ಯಕ್ಕೆ ಉತ್ತಮವಲ್ಲ. ಏಕೆಂದರೆ, ನೀವು ಹಾಲಿನಿಂದ ಮಾಡಿದ ಪನೀರ್‌ನ್ನು ಮತ್ತು ಪಾಲಕ್‌ನ್ನು ಮಿಕ್ಸ್ ಮಾಡಿದರೆ, ನಿಮ್ಮ ದೇಹ ಕಬ್ಬಿಣದ ಸತ್ವವನ್ನು ಹೀರಿಕ“ಳ್ಳುವುದಿಲ್ಲ. ಅದರಿಂದ ನಿಮ್ಮ ಶಕ್ತಿಯೂ ಕಡಿಮೆಯಾಗುತ್ತದೆ. ಹಾಗಾಗಿ ಯಾವುದೇ ಸೊಪ್ಪಿನ ಜತೆ ನೀವು ಹಾಲು, ಹಾಲಿನಿಂದ ಮಾಡಿದ ಯಾವುದೇ ವಸ್ತುಗಳನ್ನು ಬಳಸಬಾರದು.
ಇನ್ನು ಖಾರಾ ತಿಂಡಿ ತಿಂದ ಬಳಿಕ, ಐಸ್‌ಕ್ರೀಮ್ ಸೇವನೆ ಮಾಡಬೇಡಿ. ಊಟ, ತಿಂಡಿ ತಿಂದ ತಕ್ಷಣ ಐಸ್‌ಕ್ರೀಮ್ ತಿನ್ನಬೇಡಿ. ಸ್ವಲ್ಪ ಸಮಯ ಬಿಟ್ಟು ಸೇವಿಸಿ. ಇಲ್ಲವಾದಲ್ಲಿ ಜೀರ್ಣಕ್ರಿಯೆ ಸಮಸ್ಯೆಯಾಗುತ್ತದೆ. ಅಲ್ಲದೇ ಹಾಲನ್ನು ಪದೇ ಪದೇ ಬಿಸಿ ಮಾಡಬಾರದು. ಇದರಿಂದ ಅದರಲ್ಲಿರುವ ಸತ್ವವೂ ಹಾಳಾಗುತ್ತದೆ.