Saturday, October 19, 2024

Latest Posts

Drought: ಬರಗಾಲ ಘೋಷಣೆಗೆ ಒತ್ತಾಯಿಸಿ ಹಸಿರು ಸೇನೆ ವತಿಯಿಂದ ಪ್ರತಿಭಟನೆ..!

- Advertisement -

ಹುಬ್ಬಳ್ಳಿ: ಮುಂಗಾರು ಹಂಗಾಮು ಅರ್ಧ ಕಾಲ ಕಳೆಯುತ್ತಾ ಬಂದರೂ ಇಲ್ಲಿಯವರೆಗೂ ಸಮರ್ಪಕ ಮಳೆಯಾಗಿಲ್ಲ ಹಾಗಾಗಿ ಹುಬ್ಬಳ್ಳಿ ತಾಲೂಕನ್ನು ಸಂಪೂರ್ಣ ಬರಗಾಲ ಪ್ರದೇಶವೆಂದು ಘೋಷಿಸಲು ಒತ್ತಾಯಿಸಿ ರೈತರು ಪ್ರತಿಭಟನೆಯನ್ನು ಕೈಗೊಂಡರು.

ಧಾರವಾಡ ಜಿಲ್ಲೆಯಲ್ಲಿ ಸಂಪೂರ್ಣ ಬರಗಾಲ ಆವರಿಸಿದೆ, ಕಳೆದ 15 ದಿನಗಳ ಹಿಂದೆ ಕೆಲವೊಂದು ಭಾಗದಲ್ಲಿ ಮಾತ್ರ ಅಲ್ಪ ಸ್ವಲ್ಪ ಮಳೆಯಾಗಿದ್ದು ಬಿಟ್ಟರೆ ಬಹುತೇಕ ತಾಲೂಕಗಳಲ್ಲಿ ಸಮರ್ಪಕ ಮಳೆಯಾಗಿಲ್ಲ ಹೀಗಾಗಿ ಹುಬ್ಬಳ್ಳಿ ತಾಲೂಕನ್ನು ಸಂಪೂರ್ಣ ಬರಗಾಲ ಪ್ರದೇಶವೆಂದು ಘೋಷಿಸಬೇಕೆಂದು ಕರ್ನಾಟಕ ರಾಜ್ಯ ರೈತ ಹಾಗೂ ಹಸಿರು ಸೇನೆ ನಗರದಲ್ಲಿಂದು ಸರ್ಕಾರಕ್ಕೆ ತಹಶಿಲ್ದಾರ ಮೂಲಕ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.

ಈ ವೇಳೆ ಜನರಿಗೆ ಹಾಗೂ ಜಾನುವರುಗಳಿಗೆ ಕುಡಿಯುವ ನೀರು ಪೂರೈಸಬೇಕು, ರೈತರ ಸಾಲ ಮನ್ನಾ ಮಾಡಿ, ಹೊಸ ಸಾಲ ನೀಡಬೇಕು, ಕನಿಷ್ಠ ಧಾರವಾಡ ಜಿಲ್ಲೆ ಹಾಗೂ ಹುಬ್ಬಳ್ಳಿ ತಾಲೂಕನ್ನು ಭೀಕರ ಬರಗಾಲ ಪ್ರದೇಶವೆಂದು ಘೋಷಣೆ ಮಾಡಬೇಕು. ಬೆಳೆವಿಮೆಯನ್ನು ತಕ್ಷಣ ರೈತರ ಖಾತೆಗೆ ಸೇರ್ಪಡೆ ಮಾಡಬೇಕು. ಕಬ್ಬಿನ ವಿಮೆ ಯೋಜನೆ ಜಾರಿಗೆ ತರುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ರೈತ ಮುಖಂಡರು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಮುದಕಪ್ಪ,ಗುರು ರಾಯನಗೌಡ್ರ, ಕಲ್ಮೇಶ ಲಿಗಾಡಿ, ಬಸವರಾಜ ಗುಮ್ಮಗೋಳ, ಗುರುಸಿದ್ದಪ್ಪ ಗೌರಿ, ನಾಗಪ್ಪ ಬಡಿಗೇರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Tiger Steps: ಜಮೀನಲ್ಲಿ ಹುಲಿ ಹೆಜ್ಜೆಗುರುತು ರೈತರಲ್ಲಿ ಆತಂಕ

ಗ್ರಾಮ ವಾಸ್ತವ್ಯದ ಮೂಲಕ ಜನರ ಸಮಸ್ಯೆ ಆಲಿಸಿ ಚಕ್ಕಡಿ ರಸ್ತೆ ಸರದಾರ ಎನಿಸಿಕೊಂಡ ಶಾಸಕ ಕೋನರಡ್ಡಿ

Lokasabha Election: ಬಿಜೆಪಿಗೆ ಲೋಕಸಭೆಯಲ್ಲಿ ಜನ ಮತ್ತೊಮ್ಮೆ ಉತ್ತರ ಕೊಡುತ್ತಾರೆ; ಪರಮೇಶ್ವರ್..!

- Advertisement -

Latest Posts

Don't Miss