Health Tips: ಓರ್ವ ಹೆಣ್ಣು ಗರ್ಭಿಣಿಯಾಗುತ್ತಿದ್ದಾಳೆ ಎಂದರೆ, ಆಕೆಗೆ ಅದೊಂದು ಅದೃಷ್ಟದ ಮಾತೇ ಸರಿ. ಆರೋಗ್ಯಕರವಾದ, ಚುರುಕಾದ ಮಗುವನ್ನು ಎಲ್ಲರೂ ಬಯಸುತ್ತಾರೆ. ಅದೇ ರೀತಿ ಆಕೆ ಆಹಾರ ಸೇವಿಸುವ ಬಗ್ಗೆ, ತನ್ನ ಆರೋಗ್ಯದ ಕಾಳಜಿ ಮಾಡುವ ಬಗ್ಗೆ ಗಮನಹರಿಸಬೇಕು. ಇದರೊಂದಿಗೆ ಕಾಲ ಕಾಲಕ್ಕೆ ವೈದ್ಯರ ಸಲಹೆ, ಸ್ಕ್ಯಾನಿಂಗ್ ಎಲ್ಲವೂ ಮಾಡಬೇಕು. ಹಾಗಾದ್ರೆ ಗರ್ಭಿಣಿಯರು ತಿಂಗಳಿಗೊಮ್ಮೆ ಸ್ಕ್ಯಾನಿಂಗ್ ಯಾಕೆ ಮಾಡಿಸಿಕೊಳ್ಳಬೇಕು ಅಂತಾ ತಿಳಿಯೋಣ ಬನ್ನಿ..
ಗರ್ಭಿಣಿಯರು ತಿಂಗಳಿಗೊಮ್ಮೆ ಯಾಕೆ ಸ್ಕ್ಯಾನಿಂಗ್ ಮಾಡಿಸಿಕೊಳ್ಳಬೇಕು ಅನ್ನೋ ಬಗ್ಗೆ ಮಕ್ಕಳ ತಜ್ಞರಾದ ಡಾಕ್ಟರ್ ಸುರೇಂದ್ರ ಅವರು ಮಾತನಾಡಿದ್ದಾರೆ. ಸ್ಕ್ಯಾನಿಂಗ್ ಮಾಡುವಾಗ ಮಗುವಿನ ಹಾರ್ಟ್ ಬೀಟ್ ಸರಿಯಾಗಿ ಇದೆಯಾ, ಮೆದುಳಿನ ಬೆಳವಣಿಗೆ ಸರಿಯಾಗಿ ಇದೆಯಾ ಅನ್ನೋದನ್ನ ಚೆಕ್ ಮಾಡಲಾಗುತ್ತದೆ. 20 ವಾರದ ಬಳಿಕ ಸ್ಕ್ಯಾನಿಂಗ್ ಮಾಡುವಾಗ ಮಗುವಿನ ಕಿಡ್ನಿ, ಹೃದಯ, ಮೆದುಳು ಇಂಥ ಸ್ಥಳದಲ್ಲಿ ಏನಾದರೂ ಸಮಸ್ಯೆ ಇದ್ದರೆ, ಗೊತ್ತಾಗುತ್ತದೆ. ಹಾಗಾಗಿ ತಿಂಗಳಿಗೊಮ್ಮೆ ಗರ್ಭಿಣಿಯರು ಸ್ಕ್ಯಾನಿಂಗ್ ಮಾಡಿಸಿಕೊಳ್ಳಲೇಬೇಕು.
ಈ ವೇಳೆ ಮಗುವಿಗೆ ಯಾವುದೇ ಆರೋಗ್ಯ ಸಮಸ್ಯೆ ಇದೆ ಎಂದು ಗೊತ್ತಾದಾಗ, ಚಿಕಿತ್ಸೆ ಬಗ್ಗೆ ವೈದ್ಯರು ನಿಮಗೆ ಸೂಚಿಸುತ್ತಾರೆ. ಆಗ ನೀವು ಉತ್ತಮ ಚಿಕಿತ್ಸೆ ಪಡೆದು ನಿಮ್ಮ ಮಗುವಿನ ಆರೋಗ್ಯವನ್ನ ಕಾಪಾಡಿಕೊಳ್ಳಬಹುದು. ಆರೋಗ್ಯಕರ ಮಗುವನ್ನು ಪಡೆಯಬಹುದು. ಅಲ್ಲದೇ ಸ್ಕ್ಯಾನಿಂಗ್ ಮಾಡುವುದರಿಂದ ಮಗುವಿನ ಬೆಳವಣಿಗೆ ಹೇಗೆ ಆಗುತ್ತಿದೆ. ಮಗು ಹೊಟ್ಟೆಯಲ್ಲಿ ಹೇಗೆ ಮೂಮೆಂಟ್ ಮಾಡುತ್ತದೆ. ಅದಕ್ಕೇನೂ ಸಮಸ್ಯೆ ಆಗುತ್ತಿಲ್ಲ ಅಲ್ಲವೇ ಎಂಬ ಬಗ್ಗೆ ವೈದ್ಯರು ಚೆಕ್ ಮಾಡುತ್ತಾರೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೋ ನೋಡಿ..