www.karnatakatv.net: ಬೆಂಗಳೂರು : ಡ್ರಗ್ಸ್ ಸೇವನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿಯರಾದ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿಗೆ ಮತ್ತೆ ಸಂಕಷ್ಟ ಎದುರಾಗಿದೆ. ಪ್ರಕರಣದ ಆರೋಪಿಗಳನ್ನು ಬಂಧಿಸಿದ್ದ ಸಿಸಿಬಿ ಪೊಲೀಸರಿಗೆ ಇದೀಗ ಫಾರಿನ್ ಸಿಕ್ ರಿಪೋರ್ಟ ಡ್ರಗ್ಸ್ ಸೇವಿಸಿರೋ ವಿಚಾರವನ್ನ ಖಚಿತಪಡಿಸಿದೆ.
ಇನ್ನು ಕಳೆದ ವರ್ಷದಿಂದಲೂ ತನಿಖಾ ಹಂತದಲ್ಲಿದ್ದ ಈ ಡ್ರಗ್ಸ್ ಸ್ಕ್ಯಾಂಡಲ್ ಪ್ರಕರಣಕ್ಕೆ ಇದೀಗ ಎಫ್ ಎಸ್ ಎಲ್ ವರದಿಯಿಂದಾಗಿ ಮತ್ತಷ್ಟು ಪುಷ್ಟಿ ಸಿಕ್ಕಿದೆ. ಹೀಗಾಗಿ ಸಂಜನಾ, ರಾಗಿಣಿ , ವೀರೇನ್ ಖನ್ನಾ ಸೇರಿದಂತೆ ಪ್ರಕರಣದ ಎಲ್ಲಾ ಆರೋಪಿಗಳೂ ಡ್ರಗ್ಸ್ ಸೇವಿಸಿರೋದು ಪಕ್ಕಾ ಆಗಿದೆ. ಅಷ್ಟೇ ಅಲ್ಲದೆ ಇವರೆಲ್ಲರೂ ವೀಕೆಂಡ್ ಶುರುವಾಗ್ತಿದ್ದಂತೆ ಎಂಡಿಎಂ ಹಾಗೂ ಇನ್ನಿತರ ದುಬಾರಿ ಬೆಲೆಯ ಡ್ರಗ್ಸ್ ನ ನಶೆಯಲ್ಲಿ ತೇಲಾಡುತ್ತಿದ್ರು ಅಂತ ತಿಳಿದಬಂದಿದೆ. ಶುಕ್ರವಾರ, ಶನಿವಾರ ಮತ್ತು ಭಾನುವಾರಗಳಂದು ತಪ್ಪದೇ ಡ್ರಗ್ಸ್ ಸೇವಿಸ್ತಿದ್ದ ಆರೋಪಿಗಳಿಗೆ ಇದೀಗ ಮತ್ತೆ ಬಂಧನದ ಭೀತಿ ಎದುರಾಗಿದೆ.
ಇನ್ನು10 ಕ್ಕೂ ಹೆಚ್ಚು ಮಂದಿ ಆರೋಪಿಗಳ ತಲೆಕೂದಲ ಸ್ಯಾಂಪಲ್ ಪಡೆದಿದ್ದ ಎಫ್ ಎಸ್ ಎಲ್ ತಂಡ ಅತ್ಯಾಧುನಿಕ ತಂತ್ರಜ್ಞಾನದ ನೆರವಿನಿಂದ ಪರೀಕ್ಷೆ ನಡೆಸಿ ಡ್ರಗ್ಸ್ ಸೇವಿಸಿರೋದನ್ನ ಖಚಿತಪಡಿಸಿದೆ.
ಸದ್ಯ ವರದಿ ಆಧರಿಸಿ ಸಿಸಿಬಿ ತನಿಖಾ ತಂಡ ನ್ಯಾಯಾಲಯಕ್ಕೆ ಸೆಕೆಂಡರಿ ಚಾರ್ಜ್ ಶೀಟ್ ಸಲ್ಲಿಸಲಿದೆ. ಇಷ್ಟೂ ದಿನ ಅಲ್ಪ ವಿರಾಮ ತೆಗೆದುಕೊಂಡಿದ್ದ ತನಿಖಾ ಪ್ರಕ್ರಿಯೆ ಮತ್ತೆ ಚುರುಕಾಗಲಿದೆ. ಇನ್ನು ಈ ಹೈ ಪ್ರೊಫೈಲ್ ಡ್ರಗ್ಸ್ ಜಾಲದ ಬೆನ್ನು ಹತ್ತಿದ್ದ ಸಿಸಿಬಿ ಪೊಲೀಸರ ದಕ್ಷ ಹಾಗೂ ಪ್ರಾಮಾಣಿಕ ತನಿಖೆಯಿಂದಾಗಿ ವರ್ಷದ ಬಳಿಕವೂ ಸತ್ಯಾಂಶ ಬೆಳಕಿಗೆ ಬಂದಿದೆ ಅಂತ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತನಿಖಾ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
ಒಟ್ಟಾರೆ ನಶೆ ಜಾಲದಲ್ಲಿ ಸಿಕ್ಕಿಬಿದ್ದು ಜೈಲು ಪಾಲಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ನಟಿ ಸಂಜನಾ, ರಾಗಿಣಿ ದ್ವಿವೇದಿ ಸೇರಿದಂತೆ ಇತರೆ ಆರೋಪಿಗಳಲ್ಲಿ ಇದೀಗ ನಡುಕ ಶುರುವಾಗಿದೆ. ಯಾವುದೇ ಕ್ಷಣದಲ್ಲಾದ್ರೂ ಸಿಸಿಬಿ ತಂಡ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ವಶಕ್ಕೆ ಪಡೆಯೋ ಸಾಧ್ಯತೆಯಿದೆ.
ಕರ್ನಾಟಕ ಟಿವಿ- ಬೆಂಗಳೂರು