ದುಬೈನಲ್ಲಿ ಕೊರೊನಾ ಚಿಕಿತ್ಸೆ ಪಡೆಯುತ್ತಿದ್ದ ಭಾರತದ ವ್ಯಕ್ತಿಗೆ ಅಲ್ಲಿನ ಆಸ್ಪತ್ರೆ 1.52 ಕೋಟಿ ಬಿಲ್ ಮಾಡಿದೆ. ತೆಲಂಗಾಣದವರಾದ ಒಡ್ನಾಲಾ ರಾಜೇಶ್(42) ಎಂಬುವರಿಗೆ ಕೊರೊನಾ ಸೋಂಕು ಹರಡಿದ್ದು, ಏಪ್ರಿಲ್ 23ರಂದು ದುಬೈನ ಆಸ್ಪತ್ರೆಗೆ ಸೇರಿಕೊಂಡಿದ್ದಾರೆ.

80 ದಿನಗಳ ಕಾಲ ಇವರಿಗೆ ಕೊರೊನಾ ಟ್ರೀಟ್‌ಮೆಂಟ್ ನೀಡಲಾಗಿದೆ. ಇದೀಗ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದ್ದು, 1.52 ಕೋಟಿ ಬಿಲ್ ಮಾಡಿದ್ದಾರೆ.
ಕನಸ್ಟ್ರಕ್ಷನ್ ಲೇಬರರ್ ಆಗಿ ಕೆಲಸ ಮಾಡುತ್ತಿದ್ದ ರಾಜೇಶ್, ಈ ಬಿಲ್ ಕೊಡುವಷ್ಟು ಶಕ್ತಿ ಹೊಂದಿಲ್ಲ. ಅದಕ್ಕಾಗಿ ದುಬೈನಲ್ಲಿರುವ ಭಾರತೀಯ ಅಂಬಾಸೀಡರ್ ಗ್ರೂಪ್‌ನ ಕೆಲಸಗಾರರು ಸೇರಿ ಈತನ ಬಿಲ್ ಭರಿಸಲು ಸಹಾಯ ಮಾಡಿದ್ದಾರೆ.
ಈ ಬಗ್ಗೆ ಹರ್ಜೀತ್ ಸಿಂಗ್ ಎಂಬುವವರು ಈತನಿಗೆ ಚಿಕಿತ್ಸೆ ನೀಡಿದ್ದ ಆಸ್ಪತ್ರೆಗೆ ಚಿಕಿತ್ಸೆ ವೆಚ್ಚ ಕಡಿಮೆ ಮಾಡುವಂತೆ ಕೋರಿದ್ದು, ಇವರ ಕೋರಿಕೆಗೆ ಓಗೊಟ್ಟ ಆಸ್ಪತ್ರೆ ಚಿಕಿತ್ಸೆ ವೆಚ್ಚ ಕಡಿಮೆ ಮಾಡಿದೆ.
ಇನ್ನು ತಮ್ಮ ಕಡೆಯಿಂದ ಆದಷ್ಟು ವೆಚ್ಚ ಭರಿಸಲು ಪ್ರಯತ್ನಿಸಿದ ರಾಜೇಶ್ 10 ಸಾವಿರ ರೂಪಾಯಿ ನೀಡಿದ್ದಾರೆ. ಅಲ್ಲದೇ ಚಿಕಿತ್ಸೆ ಪಡೆದ ಬಳಿಕ ತೆಲಂಗಾಣಕ್ಕೆ ಆಗಮಿಸಿ, ತಮ್ಮ ಮನೆ ಸೇರಿದ್ದಾರೆ. ಇವರನ್ನ 14 ದಿನಗಳ ಕಾಲ ಹೋಮ್ ಕ್ವಾರಂಟೈನ್‌ನಲ್ಲಿ ಇರಲು ಸೂಚಿಸಲಾಗಿದೆ.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.

