Sunday, September 8, 2024

Latest Posts

ಈ ಹೂಗಳನ್ನು ದೇವರಿಗೆ ಅರ್ಪಿಸಬಾರದು :

- Advertisement -

devotional story:

ಹಿಂದೂ ಧರ್ಮದಲ್ಲಿ ದೇವರ ವಿಗ್ರಹಕ್ಕೆ ಮಾಡುವ ಪೂಜೆಗೆ ಹೆಚ್ಚಿನ ಮಹತ್ವವಿದೆ ಮನೆಯಲ್ಲಿಯೇ ಆಗಲಿ ದೇವಲಯದಲ್ಲಿಆಗಲಿ ಪೂಜೆಯಲ್ಲಿ ವಿವಿದ ವಿಧದ ಹೂವುಗಳನ್ನು ದೇವರಿಗೆ ಅರ್ಪಿಸುತ್ತಾರೆ ಹಾಗು ಪೂಜೆಯ ಬಳಿಕ ಪ್ರಸಾದ ರೂಪದಲ್ಲಿ ಹೂವುಗಳನ್ನು ಭಕ್ತರಿಗೆ ನೀಡಲಾಗುತ್ತದೆ ಇದು ಭಕ್ತರ ಮತ್ತು ದೇವರ ನಡುವಿನ ಸಂವಹನ ಮಾಧ್ಯಮ ಎಂಬುವುದಾಗಿಯೂ  ಭಾವಿಸಲಾಗುತ್ತದೆ. ಹಾಗು ದೇವಾಲಯದ ಒಳಗಡೆ ಹೋದಾಗ ಬಗೆಬಗೆಯ ಹೂವುಗಳ ಪರಿಮಳ ಭಕ್ತರ ಪರವಶತೆಯನ್ನು ಹೆಚ್ಚಿಸುತ್ತದೆ. ಹಿಂದೂ ಧರ್ಮದಲ್ಲಿ ವಿವಿಧ ದೇವರುಗಳಿಗೆ ವಿವಿಧ ಹೂವುಗಳಿಂದ ಪೂಜೆ ಸಲ್ಲಿಸುವುದು ಶ್ರೇಯಸ್ಕರ ಎಂಬ ಭಾವನೆ ಮತ್ತು ನಂಬಿಕೆಯಿದೆ. ಹಾಗಾದರೆ ಯಾವ ದೇವರಿಗೆ ಯಾವ ಹೂವಿನ ಮೂಲಕ ಪೂಜೆ ಸಲ್ಲಿಸಿದರೆ ಹೆಚ್ಚು ಫಲಕಾರಿ ಎಂಬುದನ್ನು ನೋಡೊಣ.

ದೇವರ ಪೂಜೆಯಲ್ಲಿ ಮುಖ್ಯವಾಗಿ ಬಳಸುವ ವಸ್ತು ಎಂದರೆ  ಹೂ . ನಾವು ದೇವರಿಗೆ ಪ್ರತಿನಿತ್ಯ ಹೂವನ್ನು ಬಳಸುವುದರಿಂದ ನಮ್ಮ ಇಷ್ಟಾರ್ಥಗಳು ನೆರವೇರುತ್ತದೆ ಹಾಗು ನಮಗೆ ಮುಖ್ಯವಾಗಿ ದೈವ ಬಲವು ಜೊತೆಗೊಡುತ್ತದೆ .ಹೂವಿಲ್ಲದ ಪೂಜೆಯನ್ನು ಪೂಜೆ ಎಂದು ಪರಿಗಣಿಸುವುದಿಲ್ಲ. ಆದರೆ ದಿನನಿತ್ಯ ಪೂಜೆಮಾಡುವವರು ಕೆಲವೊಂದು ನಿಯಮಗಳನ್ನು ತಪದ್ದೇ ತಿಳಿದುಕೊಳ್ಳಬೇಕು ,ಪುಷ್ಪವಿಲ್ಲದ ಪೂಜೆ ಹೇಗೆ ಫಲ ಕೊಡುವುದಿಲ್ಲವೋ ಹಾಗೆಯೆ ಪುಷ್ಪಗಳಿಲ್ಲದೆ ದೇವಾಲಯಕ್ಕೆ ಹೋಗಬಾರದೆಂದು ನಮ್ಮ ಪುರಾಣ ಹೇಳುತ್ತದೆ. ಹಾಗು ಇದು ನಮ್ಮ ಸಂಪ್ರದಾಯವಲ್ಲ ಶ್ರೀಕೃಷ್ಣನು ಭಗದ್ಗೀಗಿತೆಯಲ್ಲಿ ದೇವರಿಗೆ ಮುಡಿಸುವ ಹೊವಿನ ಬಗ್ಗೆ ಹಾಗು ನಾವು ಮಾಡುವ ಪೂಜೆಯ ಬಗ್ಗೆ ಪ್ರಸ್ತಾವನೆಯನ್ನು ಈ ರೀತಿಯಾಗಿ ಹೇಳುತ್ತಾರೆ, ಭಕ್ತಿಯಿಂದ ದೇವರಿಗೆ ಹೂವನ್ನು ಯಾರು ಅರ್ಪಿಸುತ್ತಾರೋ ಅವರಿಗೆ ಬೇಗ ಪೂಜೆಯ ಫಲಗಳು ದೊರೆಯುತ್ತದೆ ಎಂದು ಹೇಳಿದರು . ನಾವು ದೇವರಿಗೆ ಅರ್ಪಿಸುವಂಥಹ ಪುಷ್ಪಗಳು ಬಹಳ ಪವಿತ್ರವಾಗಿರಬೇಕು ವಾಸನೆ ನೋಡಿರುವಂಥಹ ಹೂವನ್ನು ಹಾಗು ನೆಲಕ್ಕೆ ಬಿದ್ದಂತಹ ಹೂವನ್ನು ಯಾವುದೇ ಕಾರಣಕ್ಕೂ ನಾವು ದೇವರಿಗೆ ಅರ್ಪಿಸಬಾರದು ಏಕೆಂದರೆ ಅದು ದೋಷಪೂರಿತವಾಗುತ್ತದೆ ಹಾಗು ಬಾಡಿಹೋದ ಹೂ, ಅಪರಿಶುದ್ದವಾದ ಹೂವನ್ನು ನೀವು ದೇವರ ಪೂಜೆಗೆ ಬಳಸ ಬಾರದು ,ಹಾಗು ಮುಳ್ಳಿನಿಂದ ಕೂಡಿರುವಂಥಹ ಹೂವನ್ನು ಪೂಜೆಗೆ ಬಳಸಿದರೆ ಪುಣ್ಯಕ್ಕಿತ ದೋಷಗಳು ಹೆಚ್ಚಾಗುತ್ತದೆ ಸ್ನಾನ ಮಾಡದೇ ದೇವರಿಗೆ ನಿಮ್ಮ ಮನೆಯಬಳಿ ಇರುವ ಗಿಡದ ಹೂವನ್ನು ಕೀಳಬಾರದು ಇದು ಅಪವಿತ್ರ ಎಂದು ಭಾವಿಸಲಾಗಿದೆ ಹಾಗೆಯೆ ಕೆಲವೊಂದು ಪುಷ್ಪಗಳು ದೇವರ ಪೂಜೆಗೆ ನಿಷೇದಿಸಲಾಗಿದೆ.

ಒಂದೊಂದು ದೇವರಿಗೆ ಒಂದೊಂದು ಪುಷ್ಪಗಳೆದ೦ರೆ ಇಷ್ಟವಾಗಿರುತ್ತದೆ ಸಾಮಾನ್ಯವಾಗಿ ಸೂರ್ಯದೇವರಿಗೆ ಬಿಳಿಎಕ್ಕದ ಹೂ ಎಂದರೆ ಬಹಳಪ್ರೀತಿ ಹಾಗೆ ವಿಷ್ಣುದೇವರಿಗೆ ತುಳಸಿ ,ಲಕ್ಷ್ಮೀದೇವಿಗೆ ತಾವರೆ ,ಶಿವನಿಗೆ ಬಿಲ್ವಪತ್ರೆ , ಹನುಮಂತನಿಗೆ ಕೆಂಪು ಬಣ್ಣದ ಗುಲಾಬಿ‌ ಅಥವಾ ಇನ್ನಿತರ ಕೆಂಪು ಬಣ್ಣದ ಹೂವುಗಳನ್ನು ಅರ್ಪಿಸಬಹುದು. ಕಾಳಿಮಾತೆಗೆ ಕೆಂಪು ದಾಸವಾಳ ಎಂದರೆ ಬಹಳ ಪ್ರಿಯ.ಹಾಗಾಗಿ 108 ದಾಸವಾಳವನ್ನು ಕಾಳಿಮಾತೆಗೆ ಅರ್ಪಿಸಿದರೆ ನಿಮ್ಮ ಇಷ್ಟಾರ್ಥ ನೆರವೇರಬಹುದು. ಈ ರೀತಿ ಒಂದೊಂದು ದೇವರಿಗೆ ಒಂದೊಂದು ಹೂ ಎಂದರೆ ಇಷ್ಟ ಆದರೆ ಈಗಿನ ಕಾಲದಲ್ಲಿ ಕೆಲವರು ಪ್ಲಾಸ್ಟಿಕ್ ಹೂವಿನಿಂದ ದೇವರಿಗೆ ಅಲಂಕಾರ ಮಾಡುತ್ತಾರೆ. ಯಾವುದೇ ಕಾರಣಕ್ಕೂ ಇಂತಹ ತಪ್ಪುಗಳನ್ನು ಮಾಡಬಾರದು ,ಪ್ಲಾಸ್ಟಿಕ್ ಹೂವನ್ನು ಬಳಸಿ ಪೂಜೆಮಾಡಿದರೆ ದೋಷಗಳು ಉಂಟಾಗುತ್ತದೆ ಹಾಗು ಇದರಿಂದ ಯಾವ ಫಲವು ನಿಮಗೆ ಸಿಗುವುದಿಲ್ಲ ,ಪ್ರಕೃತಿಯಲ್ಲಿ ಸಿಗುವಂತಹ ಸಹಜವಾದ ಹೂಗಳಿಂದ ಪೂಜಿಸಿದರೆ ಮಾತ್ರ ನಿಮಗೆ ಫಲಗಳು ದೊರೆಯುತ್ತದೆ ಹಾಗು ಇದರಲ್ಲಿ ದೈವಬಲವಿರುತ್ತದೆ.

ಪ್ರತಿನಿತ್ಯ ಮನೆಯಲ್ಲಿ ಪೂಜೆ ಮಾಡುವಾಗ ಈ ವಿಷಯಗಳ ಬಗ್ಗೆ ಎಚ್ಚರವಹಿಸಿ..!

ಹನುಮಾನ್ ಚಾಲೀಸಾ ಹುಟ್ಟಿದ್ದು ಹೇಗೆ ಗೊತ್ತಾ?

ಮನುಕುಲಕ್ಕೆ ವರದಾನ ಶ್ರೀ ಲಕ್ಷ್ಮಿಕನಕ ಧಾರಾಸ್ತೋತ್ರ೦:

- Advertisement -

Latest Posts

Don't Miss