Health Tips: ಮಲಬದ್ಧತೆ ಸಮಸ್ಯೆ ಅನ್ನೋದು ಕಾಮನ್. ನಾವು ಸೇವಿಸಿದರೆ ಆಹಾರದಲ್ಲಿ ಉಷ್ಣತೆ ಹೆಚ್ಚಾಗಿದ್ದರೆ, ಅಥವಾ ತಂಪಾದ ಆಹಾರ ಸೇವನೆಯೇ ನಿಲ್ಲಿಸಿದಾಗ, ನೀರು ಹೆಚ್ಚು ಕುಡಿಯದಿದ್ದಾಗ, ನಮಗೆ ಮಲಬದ್ಧತೆ ಸಮಸ್ಯೆ ಉಂಟಾಗುತ್ತದೆ. ಹೀಗಿದ್ದಾಗ, ನಾವು ಅದಕ್ಕೆ ತಕ್ಕ ಹಾಗೆ ಮನೆ ಮದ್ದು ಮಾಡಿ, ಸಮಸ್ಯೆಗೆ ಪರಿಹಾರ ಹುಡುಕಬೇಕು. ಆದರೆ ಎಷ್ಟೇ ಪ್ರಯತ್ನಿಸಿದರೂ ಸಮಸ್ಯೆಗೆ ಪರಿಹಾರ ಸಿಗದಿದ್ದಲ್ಲಿ ಮಾತ್ರ ವೈದ್ಯರ ಬಳಿ ಹೋಗಬೇಕು. ಹಾಗಾದ್ರೆ ಮಲಬದ್ಧತೆ ಸಮಸ್ಯೆ ಇದ್ದಲ್ಲಿ ನಾವೇನು ಮಾಡಬೇಕು ಅಂತಾ ತಿಳಿಯೋಣ ಬನ್ನಿ.
ಮಲಬದ್ಧತೆ ದೂರವಾಗಿಸಲು ಇರುವ ಹಣ್ಣು ಅಂದ್ರೆ ಪ್ರೂನ್ಸ್. ಅಂದ್ರೆ ಪ್ಲಮ್ ಹಣ್ಣು. ಪ್ಲಮ್ ಹಣ್ಣನ್ನು ಡ್ರೈ ಮಾಡಿದಾಗ, ಅದು ಪ್ರೂನ್ಸ್ ಆಗುತ್ತದೆ. ನಿಮಗೆ ಡ್ರೈಫ್ರೂಟ್ಸ್ ಶಾಪ್‌ನಲ್ಲಿ ಈಸಿಯಾಗಿ ಸಿಗುತ್ತದೆ. ಇದರಲ್ಲಿ ಸೋರ್ಬಿಟಾಲ್ ಅನ್ನೋ ಅಂಶವಿದ್ದು, ಈ ಅಂಶದಿಂದ ತಿಂದ ಆಹಾರ ಚೆನ್ನಾಗಿ ಜೀರ್ಣವಾಗಿ, ಮಲಬದ್ಧತೆ ಸಮಸ್ಯೆ ದೂರವಾಗುತ್ತದೆ. ಹಾಗಾಗಿ ಈ ಹಣ್ಣನ್ನು ಪ್ರತಿದಿನ 1 ಸೇವಿಸಿದರೂ ಸಾಕು. ನಿಮ್ಮ ಮಲಬದ್ಧತೆ ಸಮಸ್ಯೆ ದೂರವಾಗುತ್ತದೆ.
ಇದರ ಜತೆಗೆ ನೀವು ದೇಹಕ್ಕೆ ತಂಪು ನೀಡುವ ಹಣ್ಣುಗಳಾದ ಆರೇಂಜ್, ಬಾಳೆಹಣ್ಣು ಸೇರಿ ಹಲವು ಹಣ್ಣುಗಳ ಸೇವನೆ ಮಾಡಿದರೂ ಉತ್ತಮ. ಜತೆಗೆ ಚೆನ್ನಾಗಿ ನೀರು ಕುಡಿಯಬೇಕು. ದೇಹದಲ್ಲಿ ನೀರಿನ ಅಂಶ ಕಡಿಮೆಯಾದಾಗ ಮಲಬದ್ಧತೆ ಸಮಸ್ಯೆ ಶುರುವಾಗುತ್ತದೆ.