Monday, October 13, 2025

Latest Posts

ದಿನಕ್ಕೆ 1 ಬಾರಿ ಊಟ, ಡಿವೋರ್ಸ್ ನೀಡಿದ್ದ ಪತ್ನಿ ಜತೆ ಮತ್ತೆ ಲವ್: ಇದು ಕುಲಶೇಖರನ ಕುತೂಹಲಕಾರಿ ಕಹಾನಿ

- Advertisement -

Sandalwood: ಸದ್ಯ ಎಲ್ಲೆಡೆ ಸದ್ದು ಮಾಡುತ್ತಿರುವ ಸಿನಿಮಾ ಅಂದ್ರೆ ಅದು ಕಾಂತಾರ. ಬರೀ ಭಾರತದಲ್ಲಿ ಮಾತ್ರವಲ್ಲದೇ, ವಿದೇಶದಲ್ಲೂ ಜನ ಕಾಂತಾರ ಕಂಡು ಖುಷಿ ಪಡುತ್ತಿದ್ದಾರೆ. ಈ ಸಿನಿಮಾದಲ್ಲಿ ರಿಷಬ್-ರುಕ್ಮಿಣಿ ಜತೆ, ತಮ್ಮದೇ ಆದ ವಿಭಿನ್ನ ಪಾತ್ರದಲ್ಲಿ ಕಾಣಿಸಿರೋದು ನಟ ಗುಲ್ಶನ್ ದೇವಯ್ಯಾ.

ಗುಲ್ಶನ್ ಬಾಲಿವುಡ್ ನಟರಾಗಿದ್ದರೂ, ಅವರ ಮೂಲ ಮಡಿಕೇರಿ. ಕರ್ನಾಟಕದವರೇ ಆಗಿರುವ ಗುಲ್ಶನ್, ಫ್ಯಾಷನ್, ಮಾಡಲಿಂಗ್ ಮಾಡಿ, ಬಾಲಿವುಡ್‌ ಅಂಗಳಕ್ಕಿಳಿದವರು. ಇದೀಗ ಕನ್ನಡದ ಕಾಂತಾರದ ಮೂಲಕ ಮನೆ ಮಾತಾಗಿದ್ದಾರೆ.

ಈ ಗುಲ್ಶನ್ ಜೀವನ ಸಖತ್ ಡಿಫ್ರೆಂಟ್ ಆಗಿದೆ. ಗುಲ್ಶನ್ ತಮ್ಮ ಆರೋಗ್ಯ ಮತ್ತು ಸೌಂದರ್ಯದ ಬಗ್ಗೆ ಹೆಚ್ಚು ಕಾಳಜಿ ಮಾಡುವವರಾಗಿದ್ದು, ಇವರ ಡಯಟ್ ಸಖತ್ ಡಿಫ್ರೆಂಟ್ ಆಗಿದೆ. ಇವರು ದಿನಕ್ಕೆ 1 ಬಾರಿ ಮಾತ್ರ ಊಟ ಮಾಡುತ್ತಾರೆ. ಹೀಗೆ ಊಟ ಮಾಡಲು ಅವರು 1 ತಾಸು ಸಮಯ ತೆಗೆದುಕ“ಳ್ಳುತ್ತಾರಂತೆ. ಏಕೆಂದರೆ, ಅದರಲ್ಲಿ ಎಲ್ಲ ರೀತಿಯ ಹಣ್ಣು, ತರಕಾರಿ, ಎಗ್, ಮಾಂಸ ಹೀಗೆ ಕ್ಯಾಲೋರಿ, ಪ್ರೋಟೀನ್ ಸೇರಿ ಹಲವು ಪೋಷಕಾಂಶವುಳ್ಳ ಆಹಾರವಿರುತ್ತದೆ. ಈ ರೀತಿ ಆಹಾರ ಸೇವಿಸಿ, ಅವರು ತಮ್ಮ ಯವ್ವನವನ್ನು ಮೆಂಟೇನ್ ಮಾಡಿದ್ದಾರೆ.

ಇನ್ನು ವಿವಾಹದ ವಿಚಾರಕ್ಕೆ ಬಂದ್ರೆ, ಗುಲ್ಶನ್ ಗ್ರೀಸ್‌ನ ಪ್ರಜೆಯನ್ನು ವಿವಾಹವಾಗಿದ್ದರು. ಆಕೆ ಭಾರತಕ್ಕೆ ಪ್ರವಾಸಕ್ಕೆ ಬಂದಾಗ, ಇವರಿಬ್ಬರ ಮಧ್ಯೆ ಪ್ರೇಮ ಶುರುವಾಗಿ, ಆ ಪ್ರೇಮ ವಿವಾಹಕ್ಕೆ ತಿರುಗಿ, 2012ರಲ್ಲಿ ಕೊಡವ ಸಂಪ್ರದಾಾಯದಂತೆ ಗುಲ್ಶನ್ ಗ್ರೀಸ್‌ನ ಕಲ್ಲಿರಾಯ್ ಜತೆ ವಿವಾಹವಾಗಿದ್ದರು.

ಆದರೆ 2020ರಲ್ಲಿ ಇಬ್ಬರ ನಡುವೆ ಸಾಮರಸ್ಯ ಕಡಿಮೆಯಾಗಿ ಇಬ್ಬರು ಡಿವೋರ್ಸ್ ಪಡೆದರು. ಹಾಗಂತ ಎಲ್ಲ ಸೆಲೆಬ್ರಿಟಿಗಳ ರೀತಿ ಇನ್ಯಾರನ್ನು ಹುಡುಕಿ ಹೋಗಿಲ್ಲ ಗುಲ್ಶನ್. ಅಲ್ಲದೇ ಈಗಿನ ಕೆಲ ಸೆಲೆಬ್ರಿಟಿಗಳ ರೀತಿ ಅವರ ಪತ್ನಿ ಕೂಡ ಹಣಕ್ಕಾಗಿ ಬೇಡಿಕೆ ಇಡಲಿಲ್ಲ. ಬದಲಾಗಿ ಮೂರು ವರ್ಷಗಳ ಬಳಿಕ ಅಂದ್ರೆ 2023ರಲ್ಲಿ ಗುಲ್ಶನ್ ಮತ್ತು ಕಲ್ಲಿರಾಯ್ ಮತ್ತೆ ಡೇಟ್ ಮಾಡಲು ಶುರು ಮಾಡಿದರು. ಇದೀಗ ಮುಂಚೆಗಿಂತಲೂ ನಮ್ಮ ಪ್ರೀತಿ ಹೆಚ್ಚಾಗಿದೆ ಅಂತಾರೆ ಗುಲ್ಶನ್.

- Advertisement -

Latest Posts

Don't Miss