Friday, August 29, 2025

Latest Posts

Recipe: ಆಲೂ ಟಿಕ್ಕಿ ಸ್ಯಾಂಡ್‌ವಿಚ್ ರೆಸಿಪಿ

- Advertisement -

Recipe: ಬೇಕಾಗುವ ಸಾಮಗ್ರಿ: ಬ್ರೆಡ್, ಸೇವು, 1 ಸ್ಪೂನ್ ಎಣ್ಣೆ, 1 ಸ್ಪೂನ್ ಜೀರಿಗೆ, ಸ್ವಲ್ಪ ಹಿಂಗು, ಅರಿಶಿನ, ಬೇಯಿಸಿದ 4 ಆಲೂಗಡ್ಡೆ, ಕೊತ್ತೊಂಬರಿ ಸೊಪ್ಪು, 4 ಮೆಣಸು, 10 ಎಸಳು ಬೆಳ್ಳುಳ್ಳಿ, ಅರ್ಧ ಸ್ಪೂನ್ ಕಪ್ಪುಪ್ಪು, 1 ಸ್ಪೂನ್ ಜೀರಿಗೆ ಪುಡಿ, ಸ್ವಲ್ಪ ಪುದೀನಾ, ಕ್ಲೀನ್ ಮಾಡಿ, ಬಿಸಿ ನೀರಿಗೆ ಹಾಕಿ ತೆಗೆದ ಪಾಲಕ್, ಶುಂಠಿ, ಸೌತೆ, ಈರುಳ್ಳಿ, ಕ್ಯಾಪ್ಸಿಕಂ, ಚಾಟ್ ಮಸಾಲೆ ಪುಡಿ, ಉಪ್ಪು.

ಮಾಡುವ ವಿಧಾನ: ಪ್ಯಾನ್ ಬಿಸಿ ಮಾಡಿ, ಎಣ್ಣೆ, ಜೀರಿಗೆ, ಹಿಂಗ್, ಶುಂಠಿ, ಹಸಿಮೆಣಸು ಹಾಕಿ ಹುರಿಯಿರಿ. ಬಳಿಕ ಅರಿಶಿ, ಬೇಯಿಸಿ, ಸ್ಮ್ಯಾಶ್ ಮಾಡಿದ ಆಲೂಗಡ್ಡೆ, ಉಪ್ಪು ಹಾಕಿ ಮಿಕ್ಸ್ ಮಾಡಿ. ಕೊತ್ತೊಂಬರಿ ಸೊಪ್ಪು ಉದುರಿಸಿದರೆ, ಮಸಾಲೆ ರೆಡಿ.

ಈಗ ಮಿಕ್ಸಿ ಜಾರ್‌ನಲ್ಲಿ 4 ಮೆಣಸು, ಬೆಳ್ಳುಳ್ಳಿ, ಜೀರಿಗೆ ಪುಡಿ, ಕಪ್ಪುಪ್ಪು, ಉಪ್ಪು, ನೀರು ಹಾಕಿ ಪೇಸ್ಟ್ ತಯಾರಿಸಿ. ಈಗ ರೆಡ್ ಚಟ್ನಿ ರೆಡಿ. ಈಗ ಮಿಕ್ಸಿ ಜಾರ್‌ಗೆ ಪುದೀನಾ, ಕೊತ್ತೊಂಬರಿ ಸೊಪ್ಪು, ಪಾಲಕ್, ಬೆಳ್ಳುಳ್ಳಿ, ಹಸಿಮೆಣಸು, ಜೀರಿಗೆ, ಶುಂಠಿ ಹಾಕಿ ರುಬ್ಬಿದ್ರೆ ಗ್ರೀನ್ ಚಟ್ನಿ ರೆಡಿ.

ಈಗ ಬ್ರೆಡ್‌ ಮೇಲೆ ಗ್ರೀನ್ ಮತ್ತು ಕೆಂಪು ಚಟ್ನಿ ಸವರಿ, 1 ಕಡೆ ಆಲೂ ಮಸಾಲೆ ಹಾಕಿ ಅದರ ಮೇಲೆ ಸೇವು, ಸೌತೆ, ಈರುಳ್ಳಿ, ಕ್ಯಾಪ್ಸಿಕಂ ಸ್ಲೈಸ್, ಚಾಟ್ ಮಸಾಲೆ ಹಾಕಿ ಅದರ ಮೇಲೆ ಬ್ರೆಡ್ ಇಟ್ಟರೆ ಸ್ಯಾಂಡವಿಚ್ ರೆಡಿ. ನೀವು ಬೇಕಾದ್ರೆ ಇದನ್ನು ಗ್ರಿಲ್ ಮಾಡಬಹುದು.

- Advertisement -

Latest Posts

Don't Miss