www.karnatakatv.net :ಮೂವರು ಆರ್ಥಿಕ ತಜ್ಞರಿಗೆ 2021 ರ ಅರ್ಥಶಾಸ್ತ್ರ ನೊಬೆಲ್ ಪ್ರಶಸ್ತಿಯನ್ನು ನೀಡಲಾಗಿದೆ.
ಅಮೆರಿಕದವರಾದ ಮೂವರು ಆರ್ಥಿಕ ತಜ್ಞರಿಗೆ 2021 ನೇ ಸಾಲಿನ ಅರ್ಥಶಾಸ್ತ್ರ ನೊಬೆಲ್ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿದೆ. ಜೋಶುವಾಡಿ ಅಂಗ್ರಿಸ್ಟ್ ಮತ್ತು ಗ್ವಿಡೊ ಡಬ್ಲ್ಯೂ ಇಂಬೆನ್ಸ್ ಗೆ ಪ್ರಶಸ್ತಿ ದೊರಕಿದೆ ಎಂದು ತಿಳಿಸಿದ್ದಾರೆ. ಅಮೆರಿಕದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ ಡೇವಿಡ್ ಕಾರ್ಡ್ಗೆ ಕಾರ್ಮಿಕರ ಆರ್ಥಿಕತೆಗೆ ಸಂಬಂಧಿಸಿದ ನೊಬೆಲ್ ಪಶಸ್ತಿ ಲಭಿಸಿದೆ.
2021 ರ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಜಪಾನ್, ಜರ್ಮನಿ ಮತ್ತು ಇಟಲಿ ಸೇರಿದಂತೆ ಮೂವರು ವಿಜ್ಞಾನಿಗಳಿಗೆ ನೀಡಲಾಗಿದೆ. ಜಪಾನ್ ವಿಜ್ಞಾನಿ ಸಿಯುಕುರೊ ಮನಾಬೆ, ಜರ್ಮನಿ ವಿಜ್ಞಾನಿ ಕ್ಲಾಸ್ ಹ್ಯಾಸೆಲ್‌ಮನ್ ಮತ್ತು ಇಟಲಿ ವಿಜ್ಞಾನಿ ಜಾರ್ಜಿಯೊ ಪ್ಯಾರಿಸಿ ೨೦೨೧ರ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ತಮ್ಮ “ಸಂಕೀರ್ಣ ಭೌತಿಕ ವ್ಯವಸ್ಥೆಗಳ ತಿಳುವಳಿಕೆಗೆ ಮಹತ್ವದ ಕೊಡುಗೆಗಳಿಗಾಗಿ’ ವಿಜೇತರಾಗಿದ್ದಾರೆ. ಆ ಬಳಿಕ ಕಳೆದ ಬುಧವಾರ ರಸಾಯನ ಶಾಸ್ತ್ರ ವಿಭಾಗದಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತರ ಹೆಸರನ್ನು ಘೋಷಣೆ ಮಾಡಲಾಗಿದೆ.