Wednesday, September 11, 2024

Latest Posts

ಧಾರವಾಡ ಕೆಐಎಡಿಬಿ ಕಚೇರಿ ಮೇಲೆ ಇಡಿ ದಾಳಿ: ಓರ್ವ ವಶಕ್ಕೆ

- Advertisement -

Dharwad News: ಧಾರವಾಡ: ಧಾರವಾಡದಲ್ಲಿ ಇ.ಡಿ. ತನಿಖೆ ಮುಂದುವರೆದಿದ್ದು, ಓರ್ವ ಏಜೆಂಟ್‌ನನ್ನು ಇಡಿ ತಂಡ ವಶಕ್ಕೆ ಪಡೆದಿದೆ. ರವಿ ಕುಬರೇಟ್ ಎನ್ನುವವನನ್ನು ತಂಡ ವಿಚಾರಣೆಗಾಗಿ ವಶಕ್ಕೆ ಪಡೆದಿದೆ.

ಧಾರವಾಡ ಕೆಐಎಡಿಬಿ ಕಚೇರಿ ಮೇಲೆ ಇಡಿ ದಾಳಿ ಮಾಡಿದ್ದು, ಬೆಂಗಳೂರಿನ ಅಧಿಕಾರಿಗಳು, ಧಾರವಾಡದ ಲಕ್ಕಮನಹಳ್ಳಿಯಲ್ಲಿರುವ ಕಚೇರಿ ಮೇಲೆ ದಾಳಿ ಮಾಡಿದ್ದರು.

ಹಿಂದಿನ ಕೆಐಎಡಿಬಿ ವಿಶೇಷಾಧಿಕಾರಿ ವಿ.ಡಿ. ಸಜ್ಜನ್ ಸೇರಿ ಅನೇಕರ ಮೇಲೆ ಎಫ್‌ಐಆರ್ ದಾಖಲಾಗಿತ್ತು. ಡಬಲ್ ಪೇಮೆಂಟ್ ವಿಚಾರವಾಗಿ ಈ ಪ್ರಕರಣ ದಾಖಲಾಗಿದ್ದು, ಅಧಿಕಾರಿಗಳು ಒಂದು ಸಲ ಭೂಸ್ವಾಧೀನ ಆಗಿದ್ದ ರೈತರ ಖಾತೆಗೆ ಪುನಃ ಹಣ ಹಾಕಿದ್ದಾರೆಂಬ ಆರೋಪವಿತ್ತು. ರೈತರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿದ್ದ ಹಗರಣ ಇದಾಗಿತ್ತು.

ಈ ಸಂಬಂಧ ಈ ಹಿಂದೆ ಸಿಐಡಿಯಿಂದ ಈ ಬಗ್ಗೆ ತನಿಖೆ ನಡೆದಿತ್ತು. ಈ ತನಿಖೆಯಲ್ಲಿ 20 ಕೋಟಿ ಹಗರಣ ನಡೆದ ವಿಚಾರ ಪತ್ತೆಯಾಗಿತ್ತು.  ಬಳಿಕ ಅಧಿಕಾರಿಗಳನ್ನು ಅರೆಸ್ಟ್ ಮಾಡಲಾಗಿತ್ತು. ಇದೀಗ ಪ್ರಕರಣದಲ್ಲಿ ಇಡಿ ಎಂಟ್ರಿಯಾಗಿದ್ದು, ಕಚೇರಿಯ ದಾಖಲೆಗಳನ್ನು ಇಡಿ ತಂಡ ಪರಿಶೀಲಿಸುತ್ತಿದೆ.

- Advertisement -

Latest Posts

Don't Miss