Hubli News: ಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗದ ಕ್ರಿಕೆಟ್ ಪ್ರತಿಭೆಗಳಿಗೆ ಪೂರಕವಾಗಬೇಕಿದ್ದ ಹುಬ್ಬಳ್ಳಿಯ ಕೆ.ಎಸ್.ಸಿ.ಎ ಈಗ ಸುದ್ಧಿಯಾಗುತ್ತಿದೆ. ಕನ್ವೇನರ್ ನಿಖಿಲ್ ಭೂಸದ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ಉತ್ತರ ಕರ್ನಾಟಕದ ಮಕ್ಕಳ ಭವಿಷ್ಯಕ್ಕೆ ಕೆ.ಎಸ್.ಸಿ.ಎ ಕನ್ವೇನರ್ ಕಂಟಕವಾಗಿದ್ದಾರೆ ಎಂಬುವಂತ ಮಾತು ಸಾಕಷ್ಟು ಸದ್ದು ಮಾಡಿದೆ. ಇಂತಹದೊಂದು ಗಂಭೀರ ಆರೋಪದ ಬೆನ್ನಲ್ಲೇ ಹೋರಾಟಕ್ಕೆ ಮುಂದಾಗಿದ್ದಾರೆ ಅಕಾಡೆಮಿಯ ಸದಸ್ಯರು.
ಕ್ರಿಕೆಟ್ ತರಬೇತಿ ಪಡೆದ ಮಕ್ಕಳಿಗೆ ಘೋರ ಅನ್ಯಾಯ. ಕ್ರಿಕೆಟ್‌ನ್ನೆ ನಂಬಿದ ಮಕ್ಕಳ ಭವಿಷ್ಯದ ಜೊತೆಗೆ ಹುಬ್ಬಳ್ಳಿಯ ಕೆ.ಎಸ್.ಸಿ.ಎ ಕನ್ವೇನರ್ ನಿಖಿಲ್ ಭೂಸದ ಹುಡುಗಾಟದ ಆರೋಪ. ಹೌದು.. ಕೆಎಸ್ ಸಿಎ ನಿಮಂತ್ರಕ ಹುದ್ದೆ ಸ್ಥಾನ ಒಂದೇ ಕುಟುಂಬಕ್ಕೆ ಮೀಸಲಾಗಿದ್ದು, ಹುಬ್ಬಳ್ಳಿಯ ಕೆಎಸ್ ಸಿಎ ಹಿಡಿತ ಭೂಸದ ಕುಟುಂಬದಲ್ಲಿರುವುದು ಅಕಾಡೆಮಿ ಸದಸ್ಯರ ಕೆಂಗಣ್ಣಿಗೆ ಗುರಿಯಾಗಿದೆ. ಕಳೆದ 18 ವರ್ಷದಿಂದ ಭೂಸೂದ ಕುಟುಂಬದವರೇ ನಿಮಂತ್ರಕರಾಗಿ ಆಯ್ಕೆಯಾಗಿದ್ದು, ಕಳೆದ ಎರಡೂ ವರ್ಷಗಳ ಹಿಂದೆ ನಿಮಂತ್ರಕರಾಗಿ ಆಯ್ಕೆಯಾದ ನಿಖಿಲ್ ಭೂಸದ್ ವಿರುದ್ದ ಅಕಾಡೆಮಿ ಸದಸ್ಯರು ಅಸಮಾಧಾನ ಹೊರಹಾಕಿದ್ದಾರೆ. ನಿಖಿಲ್ ಹಠಾವೋ ಕೆಎಸ್ ಸಿಎ ಬಚಾವೋ ಎಂದು ಅಕಾಡೆಮಿ ಸದಸ್ಯರು ಹೋರಾಟಕ್ಕೆ ಮುಂದಾಗಿದ್ದಾರೆ.
ಇನ್ನೂ ಕೆ.ಎಸ್.ಸಿ.ಎ ಗೆ ಮಕ್ಕಳನ್ನ ಪಾರದರ್ಶಕವಾಗಿ ಆಯ್ಕೆ ಮಾಡುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದ್ದು, ಕ್ರಿಕೆಟ್ ಅಕಾಡೆಮಿಯಲ್ಲಿ ಬಹುದೊಡ್ಡ ರಾಜಕೀಯ ನಡೆಯುತ್ತಿದೆ. ಇದರಿಂದ ಪ್ರತಿಭಾವಂತ ಕ್ರೀಡಾಪಟುಗಳಿಗೆ ಸೂಕ್ತ ಅವಕಾಶ ಸಿಗುತ್ತಿಲ್ಲ. ಅರ್ಹ ಕ್ರೀಡಾಪಟುಗಳು ಆಯ್ಕೆ ನಡೆಯುತ್ತಿಲ್ಲ. ನಿಖಿಲ್ ಭೂಸದ ಮಾಡ್ತಿರುವ ರಾಜಕಾರಣದಿಂದ ಉತ್ತರ ಕರ್ನಾಟಕದ ಅದೆಷ್ಟೋ ಉದೋನ್ಮುಖ ಕ್ರೀಡಾಪಟುಗಳು ಅವಕಾಶದಿಂದ ವಂಚಿತರಾಗುತ್ತಿದ್ದಾರೆ ಎಂಬುವಂತ ಆರೋಪ ಸಾಕಷ್ಟು ಸದ್ದು ಮಾಡುತ್ತಿದೆ. ಕ್ರಿಕೆಟ್ ತಂಡಕ್ಕೆ 15 ಮತ್ತು 19 ವಯೋಮಿತಿಯ ಕ್ರೀಡಾಪಟುಗಳನ್ನು ಆಯ್ಕೆ ಮಾಡಲಾಗುತ್ತದೆ. ಈ ಆಯ್ಕೆಯಲ್ಲಿ ತಮಗೆ ಬೇಕಾದವರನ್ನ ನಿಖಿಲ್ ಭೂಸದ ಆಯ್ಕೆ ಮಾಡುತ್ತಿದ್ದಾರಂತೆ.
ಒಟ್ಟಿನಲ್ಲಿ ಅರ್ಹ ಕ್ರೀಡಾಪಟುಗಳನ್ನು ಬಿಟ್ಟು, ಯಾವುದೇ ಅರ್ಹತೆ ಇಲ್ಲದ ಮಕ್ಕಳನ್ನ ಆಯ್ಕೆ ಮಾಡುತ್ತಿದ್ದು, ಸಮಿತಿಗಳಿಗೆ ನಿಖಿಲ್ ಭೂಸದ ತಿಲಾಂಜಲಿ ನೀಡುತ್ತಿದ್ದಾರೆ. ಕೂಡಲೇ ಈ ಬಗ್ಗೆ ಸೂಕ್ತ ಕ್ರಮಗಳನ್ನು ಜರುಗಿಸಿ ನಿಖಿಲ್ ಭೂಸದನನ್ನು ಕನ್ವೇನರ್ ಸ್ಥಾನದ ತೆಗೆದು ನ್ಯಾಯ ಒದಗಿಸಿಕೊಡಬೇಕು ಎಂದು ಕ್ರಿಕೆಟ್ ಪ್ರೇಮಿಗಳು ಒತ್ತಾಯಿಸಿದ್ದಾರೆ.