Hubballi News : ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆ ವಿಚಾರವಾಗಿ ಶುಕ್ರವಾರ ರಾತ್ರಿ ಗಣೇಶ ಪ್ರತಿಷ್ಠಾಪನೆಗೆ ಪಾಲಿಕೆ ಆಯುಕ್ತರು ಅನುಮತಿ ನೀಡಿದ್ದರು.
ಹು-ಧಾ ಮಹಾನಗರ ಪಾಲಕೆ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ ಅನುಮತಿ ನೀಡಿದ್ದರು ಈ ನಿಟ್ಟಿನಲ್ಲಿ ಈದ್ಗಾ ಮೈದಾನದ ಸುತ್ತಲು ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಮೈದಾನದ ಸುತ್ತಲೂ ಪೊಲೀಸ್ ಬಂದೋಬಸ್ತ್ ಗೆ ಪೊಲೀಸ್ ಆಯುಕ್ತೆ ಆದೇಶ ನೀಡಿದ್ದಾರೆ.
ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಮೈದಾನದಲ್ಲಿ ಯಾವುದೆ ಖಾಸಗಿ ವಾಹನಕ್ಕೆ ನೋ ಏಂಟ್ರಿ. ಪಾರ್ಕಿಂಗ್ ಮಾಡಿದ್ದ ವಾಹನಗಳನ್ನು ಪಾಲಿಕೆ ತೆರವುಗೊಳಿಸಿದೆ. ಹು-ಧಾ ಪಾಲಿಕೆಯಿಂದ ಮೈದಾನ ಸ್ವಚ್ಚತಾ ಕಾರ್ಯ ನಡೆದಿದೆ.
ಪಾಲಿಕೆ ಕಾರ್ಮಿಕರು ಮೈದಾನ ಸ್ವಚ್ಛ ಮಾಡುವಲ್ಲಿ ನಿರತರಾಗಿದ್ದಾರೆ. ಸೆ. 19 ರಿಂದ ಮೂರುದಿನಗಳ ಕಾಲ ಗಣೇಶ ಪ್ರತಿಷ್ಠಾಪನೆ ಮಾಡಲಾಗುವುದು.
Siddaramaiah : ಪೊಲೀಸ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ ಸಿಎಂ ಸಿದ್ದರಾಮಯ್ಯ
Edga Ground : ಗಣೇಶ ಪ್ರತಿಷ್ಠಾಪನೆಗೆ ಅನುಮತಿಗೆ ಆಯುಕ್ತರ ವಿಳಂಬ : ಬೀದಿಗಿಳಿದ ಪ್ರತಿಭಟನಾಕಾರರು
Ganesha Fest : ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಕೂಡುವ ಧಾರವಾಡ ಗಣಪ ಇದುವೆ ನೋಡಿ…!