Haveri News: ಹಾವೇರಿ: ಹಾವೇರಿಯಲ್ಲಿ ಹೋರಿ ಬೆದರಿಸುವ ಸ್ಪರ್ಧೆ ಮತ್ತು ದುಶ್ಚಟ ಬಿಡಿ ಅಭಿಯಾನ ನಡೆದಿದ್ದರ ಪರಿಣಾಮ, ಮದ್ಯಪಾನ ಮಾರಾಟದ ಮೇಲೂ ಬಿದ್ದಿದೆ.
ಹೋರಾಟದ ಪರಿಣಾಮವಾಗಿ, ಹಾವೇರಿ ಜಿಲ್ಲೆಯಲ್ಲಿ ಇತಿಹಾಸದಲ್ಲೇ ಎಂದೂ ಆಗದಷ್ಟು ಮದ್ಯ ಮಾರಾಟದಲ್ಲಿ ಲಾಸ್ ಆಗಿದೆ. ಇಟ್ಟಲ್ಲೇ ಮದ್ಯ ಎಕ್ಸ್‌ಪೈರ್ ಆಗುವಷ್ಟು, ಎಫೆಕ್ಟ್ ಆಗಿದ್ದು, ಹಾವೇರಿ ಡಿಪೋದಲ್ಲಿ 76 ಲಕ್ಷ ಮೌಲ್ಯದ ಮದ್ಯವನ್ನು ಅಬಕಾರಿ ಇಲಾಖೆಯವರು ನೆಲಸಮ ಮಾಡಿದ್ದಾರೆ.
ಜಿಲ್ಲೆಯಲ್ಲಿ ಶ್ರೀಗಳು ದುಶ್ಚಟ ಬಿಡಿ ಅಭಿಯಾನ ಮಾಡಿದ್ದು, ಜೋಳಿಗೆ ಬಿಡಿದು ಗ್ರಾಮ ಗ್ರಾಮಕ್ಕೂ ತೆರಳಿ ಜಾಗೃತಿ ಮೂಡಿಸಿದ್ದರು. ಈ ಪರಿಣಾಮವಾಗಿ ಮದ್ಯ ಮಾರಾಟ ಕುಸಿದಿದೆ. ಹಬ್ಬದ ಸಂಭ್ರಮದಲ್ಲಿ ಹಲವರು ಮದ್ಯ ಪಾನ ಸೇವನೆ ಮಾಡುತ್ತಿದ್ದರು. ಆದರೆ ಈ ಬಾರಿ ಜನ ಹಬ್ಬವನ್ನು ಸಾತ್ವಿಕವಾಗಿ ಆಚರಿಸಿದ್ದು, ಮದ್ಯ ಖರೀದಿ ಕಡಿಮೆ ಮಾಡಿದ್ದಾರೆ. ಇನ್ನು ಹೋರಿ ಬೆದರಿಸುವ ಸ್ಪರ್ಧೆಗೆ ಜಿಲ್ಲಾಡಳಿತ ಕಟ್ಟು ನಿಟ್ಟಿನ ನಿಯಮ ಜಾರಿ ಮಾಡಿದೆ.




