ಕೇವರ ಆರೋಗ್ಯವಷ್ಟೇ ಅಲ್ಲದೆ ಜ್ಯೋತಿಷ್ಯದಲ್ಲಿ ಹಾಗೂ ತಾಂತ್ರಿಕ ಪೂಜೆಯಲ್ಲೂ ಕೂಡ ನಿಂಬೆಹಣ್ಣನ್ನು ಬಳಸಲಾಗುತ್ತದೆ . ಸಾಮಾನ್ಯವಾಗಿ ತಾಂತ್ರಿಕ ಪೂಜೆಗಳಲ್ಲಿ ಕೆಟ್ಟ ಉದ್ದೇಶದಿಂದ ನಿಂಬೆಹಣ್ಣನ್ನು ಬಳಸಲಾಗುತ್ತದೆ ಆದರೆ ಜ್ಯೋತಿಷ್ಯದಲ್ಲಿ ಕೆಲವು ಸಮಸ್ಯೆಗಳಿಂದ ಪಾರಾಗುವುದಕ್ಕೆ ನಿಂಬೆಹಣ್ಣನ್ನು ಬಳಸಲಾಗುತ್ತದೆ . ಹಾಗಾದರೆ ನಿಂಬೆಹಣ್ಣನ್ನು ಹೇಗೆ ಬಳಸಿದರೆ ನಿಮ್ಮ ಸಮಸ್ಯೆಗಳಿಂದ ಮುಕ್ತಿ ಹೊಂದಬಹುದು ಅನ್ನುವುದನ್ನು ತಿಳಿದುಕೊಳ್ಳೋಣ .
ದೃಷ್ಟಿ ತೆಗಿಯೋಕ್ಕೆ :
ಯಾರಿಗಾದರೂ ದೃಷ್ಟಿ ಆಗಿದೆ ಅನಿಸಿದರೆ ಆ ವ್ಯಕ್ತಿಯ ತಲೆಯಿಂದ ಪದದ ವರಗೆ ೭ಬಾರಿ ನಿಂಬೆಹಣ್ಣನ್ನು ಸುತ್ತು ಬರೆಸಿ ಆ ನಂತರ ಮೂರೂ ದಾರಿ ಸೇರುವಲ್ಲಿ ಆ ನಿಂಬೆ ಹಣ್ಣನ್ನು ನಾಲಕ್ಕು ಹೋಳುಗಳಾಗಿ ಕತ್ತರಿಸಿ ಎಸೆಯಿರಿ . ಹೀಗೆ ಮಾಡಿದನಂತರ ಹಿಂತಿರುಗಿ ನೋಡದೆ ಅಲ್ಲಿಂದ ಬಂದು ಬಿಡಬೇಕು .
ಚಿಕ್ಕ ಮಕ್ಕಳಿಗೆ ಕಣ್ಣಿನ ದೃಷ್ಟಿ ಬಿದ್ದಿದ್ದರೆ ಅವರಿಗೆ ಒಂದು ನಿಂಬೆ ಹಣ್ಣಿನಿಂದ ಕೆಳಗಿನಿಂದ ಮೇಲಕ್ಕೆ ಮತ್ತು ಮೇಲಿನಿಂದ ಕೆಳಕ್ಕೆ ಮೂರುಬಾರಿ ನಿವಾಳಿಸಿ ಆ ನಿಂಬೆ ಹಣ್ಣನ್ನು ನಾಲ್ಕು ಹೋಳುಗಳಾಗಿ ಕತ್ತರಿಸಿ ಯಾರು ಇಲ್ಲದ ಜಾಗದಲ್ಲಿ ಅಥವಾ ಮೂರೂ ದಾರಿಗಳು ಸೇರುವ ಜಾಗದಲ್ಲಿ ಯಾರಿಗೂ ಕಾಣದಂತೆ ಎಸೆದು ಹಿಂದೆ ತಿರುಗಿ ನೋಡದೆ ಬರಬೇಕು .
ವ್ಯಾಪಾರ ಪ್ರಗತಿಗಾಗಿ :
ನಿಂಬೆ ಹಣ್ಣನ್ನು ಕೆಟ್ಟ ಕಣ್ಣು ನಿವಾರಣೆಗೆ ಬಳಸೋ ರೀತಿಯಲ್ಲೇ ವ್ಯಾಪಾರದ ಪ್ರಗತಿಗಾಗಿ ಬಳಸಲಾಗುತ್ತದೆ .ಒಂದು ನಿಂಬೆ ಹಣ್ಣನ್ನು ತೆಗೆದುಕೊಂಡು ಅದನ್ನು ಅಂಗಡಿಯ ಸುತ್ತಲೂ ಸುತ್ತಿಸಿ ನಂತರ ನಿಮ್ಮ ವ್ಯಾಪಾರವು ಸರಿಯಾಗಿ ನಡಿಯದೇ ಇದ್ದರೆ ಅದನ್ನು ನಾಲಕ್ಕು ತುಂಡುಗಳಾಗಿ ಕತ್ತರಿಸಿ ಪ್ರತಿ ನಾಲಕ್ಕು ದಿಕ್ಕುಗಳಲ್ಲಿ ನಿಂಬೆ ತುಂಡುಗಳನ್ನು ಹೆಸೆಯಿರಿ, ಏಳು ಶನಿವಾರಗಳಕಾಲ ಪ್ರತಿದಿನ ಈ ಪರಿಹಾರವನ್ನು ಪುನರಾವರ್ತಿಸಿ .
ವೃತ್ತಿಜೀವನದ ಯಶಸ್ಸಿಗಾಗಿ:
ನಿಮ್ಮ ಉತ್ತಮ ಪ್ರಯತ್ನಗಳ ಹೊರತಾಗಿಯೂ ನಿಮ್ಮ ವೃತ್ತಿ ಜೀವನದಲ್ಲಿ ಯಶಸ್ವಿ ಯಾಗದೆ ಇದ್ದರೆ ನೀವು ನಿಂಬೆ ಹಣ್ಣಿನ ಮೇಲೆ ನಾಲ್ಕು ಲವಂಗವನ್ನು ಇಟ್ಟು ೧೦೮ ಬಾರಿ , ಓಂ ಶ್ರೀ ಅನುಮತೇಯೇನಮಃ ಎಂದು ಹೇಳಬೇಕು , ಮತ್ತು ಕೆಲಸಕ್ಕೆ ಹೋಗುವಾಗ ನಿಮ್ಮ ಜೊತೆ ಈ ನಿಂಬೆಹಣ್ಣು ತೆಗೆದುಕೊಂಡು ಹೋಗಬೇಕು ,ಇದರಿಂದ ನಿಸಂದೇಹವಾಗಿ ವೃತ್ತಿಪರ ಯಶಸ್ಸನ್ನು ಸಾಧಿಸುತ್ತೀರಿ .
ಉದ್ಯೋಗ ಪಡೆಯೋಕ್ಕೆ :
ಎಷ್ಟೇ ಪ್ರಯತ್ನ ಪಟ್ಟರು ಕೆಲಸ ಸಿಗುತ್ತಿಲ್ಲ ಎಂದರೆ ಮದ್ಯ ರಾತ್ರಿಯ ಸಮಯದಲ್ಲಿ ಒಂದು ಕಲೆಗಳಿಲ್ಲದ ನಿಂಬೆಹಣ್ಣು ತೆಗೆದುಕೊಂಡು ಸ್ವಚ್ಛವಾಗಿ ತೊಳೆಯಬೇಕು ನಂತರ ಅದನ್ನು ನಾಲ್ಕು ತುಂಡುಗಳಾಗಿ ಕತ್ತರಿಸಿ ನಾಲ್ಕು ದಾರಿ ಸೇರುವಲ್ಲಿ ನಾಲ್ಕು ಮೂಲೆಗಳಲ್ಲಿ ಎಸೆಯಬೇಕು, ಎಸಿಯೋ ಸಂದರ್ಭದಲ್ಲಿ ಉದ್ಯೋಗ ಸಿಗಲಿ ಎಂದು ಮನಸ್ಸಲಿ ಅದುಕೊಳ್ಳಬೇಕು ಇದರ ಪರಿಣಾಮವಾಗಿ ನಿಮ್ಮ ನಿರುದ್ಯೋಗ ತೊಲಗಿ ಉತ್ತಮ ಉದ್ಯೋಗ ಪ್ರಾಪ್ತಿಯಾಗುತ್ತದೆ. ಜೋತಿಷ್ಯ ಶಾಸ್ತ್ರದ ಪ್ರಕಾರ ಇದನ್ನು ಶುಕ್ಲ ಪಕ್ಷದ ಯಾವುದೇ ದಿನ ಮಾಡಬಹುದು . ಸತತ ಏಳು ದಿನಗಳ ಕಾಲ ಈ ಪ್ರಯೋಗವನ್ನು ಮಾಡಿ .
ಸಂತೋಷ ಮತ್ತು ಸಮೃದ್ಧಿಗಾಗಿ :
ಕೆಲವೊಮ್ಮೆ ನಿಮ್ಮ ಸಂತೋಷ ಮತ್ತು ಸಮೃದ್ಧಿಯಾ ಮಾರ್ಗಗಗಳು ಮುಚಲ್ಪಡುತ್ತದೆ ,ಇಂತಹ ಸಂದರ್ಭದಲ್ಲಿ ಈ ಪರಿಹಾರ ಮಾಡಿಕೊಳ್ಳಿ ,ಒಂದು ನಿಂಬೆ ಹಣ್ಣನ್ನು ತೆಗೆದುಕೊಳ್ಳಿ ಮತ್ತು ಮೂರೂ ದಾರಿ ಸೇರುವಲ್ಲಿ ಹೋಗಿ ನಿಂಬೆಯಿಂದ ಏಳು ಬಾರಿ ನಿವಾಳಿ ತೆಗೆದು ನಂತರ ಆ ನಿಂಬೆಹಣ್ಣನ್ನು ಎರಡು ತುಂಡುಗಳಾಗಿ ಕತ್ತರಿಸಿ ,ಒಂದು ತುಂಡನ್ನ ನಿಮ್ಮ ಹಿಂದೆ ಮತ್ತು ಇನ್ನೊಂದು ತುಂಡನ್ನ ನಿಮ್ಮ ಮುಂದೆ ಎಸೆದು ಹಿಂತಿರುಗಿ ನೋಡದೆ ಬರಬೇಕು
ವ್ಯಾಪಾರದಲ್ಲಿ ಲಾಭ ಪಡೆಯೋಕ್ಕೆ:
ಗುರುವಾರದ ದಿನ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ನಾಲ್ಕು ನಿಂಬೆ ಹಣ್ಣು ಮತ್ತು ಲವಂಗವನ್ನು ಕೊಟ್ಟು ಪೂಜೆಮಾಡಿಸಿಕೊಂಡು ಬರಬೇಕು. ವ್ಯಾಪಾರ ನಷ್ಟದಲ್ಲಿ ಸಾಗಿದರೆ ಒಂದು ನಿಂಬೆಹಣ್ಣನ್ನು ತೆಗೆದುಕೊಂಡು ವ್ಯಾಪಾರ ಸ್ಥಳದ ನಾಲ್ಕು ಮೂಲೆಗಳಿಗೂ ಒಂದೊಂದು ಸಲ ಮುಟ್ಟಿಸಿ ನಂತರ ಆ ನಿಂಬೆ ಹಣ್ನನ ನಾಲ್ಕು ತುಂಡುಗಳಾಗಿ ಮಾಡಿ ನಾಲ್ಕು ದಿಕ್ಕಿನಲ್ಲಿ ಇಡಬೇಕು , ಇದರಿಂದ ಶನಿದೋಷ ದೂರವಾಗುತ್ತದೆ .
ನಿಮ್ಮ ಮನೆಯ ಮುಂದೆ ನಿಂಬೆಹಣ್ಣಿನ ಗಿಡ ಇದ್ದರೆ ಅದು ದುಷ್ಟ ಶಕ್ತಿಯನ್ನು ಮನೆಯ ಹತ್ತಿರ ಸುಳಿಯದಂತೆ ಮನೆಯವರನ್ನು ರಕ್ಷಿಸುತ್ತದೆ . ಅಷ್ಟೇ ಅಲ್ಲದೆ ವಾಸ್ತು ದೋಷಗಳನ್ನು ದೂರಮಾಡುತ್ತದೆ. ನಿಮ್ಮ ಮನೆ ಅಥವಾ ಕಚೇರಿಯಲ್ಲಿ ಒಂದು ಗಾಜಿನ ಲೋಟಕ್ಕೆ ಅರ್ದ ನೀರು ತುಂಬಿಸಿ ಒಂದು ನಿಂಬೆ ಹಣ್ಣನ್ನು ಇಡಬೇಕು ಇದರಿಂದ ಆ ಜಾಗದಲ್ಲಿರುವ ನಕಾರಾತ್ಮಕ ಶಕ್ತಿ ದೂರವಾಗುತ್ತದೆ , ಅದನ್ನು ನೀವು ವಾರಕ್ಕೆ ಒಂದು ಬಾರಿ ಬದಲಿಸಬೇಕು. ಈ ಪರಿಹಾರ ಮಾಡಿಕೊಂಡರೆ ಎಲ್ಲಾ ಕೆಟ್ಟ ಶಕ್ತಿಯೂ ಆ ಸ್ಥಳದಿಂದ ದೂರವಾಗುತ್ತದೆ .
ಶುಕ್ರವಾರದ ದಿನ ಯಾವುದಾದರು ದೇವಿಯ ದೇವಸ್ಥಾನ ಅಂದರೆ ದುರ್ಗಾ ದೇವಿ ದೇವಸ್ಥಾನಕ್ಕೆ ಹೋಗಿ ನಿಂಬೆ ಹಣ್ಣಿನ ದೀಪವನ್ನು ಹಚ್ಚಬೇಕು , ಆದರೆ ಯಾವುದೇ ಕಾರಣಕ್ಕೂ ಸರಸ್ವತಿ ಹಾಗೂ ಲಕ್ಷ್ಮೀದೇವಿಯ ದೇವಾಲಯದಲ್ಲಿ ನಿಂಬೆಹಣ್ಣಿನ ದೀಪವನ್ನು ಹಚ್ಚಬಾರದು. ಈ ದೀಪವನ್ನು ಹಚ್ಚುವಾಗ ಕೆಲವೊಂದು ನಿಯಮಗಳನ್ನು ಅನುಸರಿಸಬೇಕು .ಏನೆಂದರೆ ಮನೆಯಲ್ಲಿ ಒಬ್ಬರಿಗಿಂತ ಹೆಚ್ಚು ಜನ ದೀಪಗಳನ್ನು ಹಚ್ಚಬಾರದು , ಅದರಲ್ಲೂ ಮನೆಯ ಹೆಣ್ಣು ಮಕ್ಕಳೆ ದೀಪ ಹಚ್ಚುವುದು ಸೂಕ್ತ ಹಾಗೂ ನಿಮ್ಮ ಮನೆಯಲ್ಲಿ ನಿಂಬೆಹಣ್ಣಿನ ದೀಪವನ್ನು ಹಚ್ಚಬಾರದು ಎಂದು ನೆನಪಿನಲ್ಲಿಡಿ .
ದಂಪತಿಗಳ ನಡುವೆ ನಿರಂತರ ಜಗಳವೇ..? ಮನೆಯಲ್ಲಿ ಈ ಬದಲಾವಣೆಗಳನ್ನು ಪ್ರಯತ್ನಿಸಿ…!
ಸಮಸ್ಯೆ ಏನೇ ಇರಲಿ..ದೇವರು ನಮ್ಮನ್ನು ಕಾಪಾಡಲು ಪ್ರಯತ್ನಿಸುತ್ತಾನೆ.. ಈ ಕಥೆ ಕೇಳಿದರೆ ನಿಮಗೇ ಅರ್ಥವಾಗುತ್ತದೆ…
ಹೊಸ ವರ್ಷದಲ್ಲಿ 9 ಗ್ರಹಗಳು ಹೇಗೆ ಚಲಿಸುತ್ತವೆ.? ಯಾವ ರಾಶಿಚಕ್ರದ ಚಿಹ್ನೆಗಳು ಅದೃಷ್ಟವಂತರು..?