Health Tips: ಕೋಳಿ ಮೊಟ್ಟೆ ಸೇವನೆಯಿಂದ ನಮ್ಮ ದೇಹಕ್ಕೆ ಅತೀ ಹೆಚ್ಚು ಲಾಭವಿದೆ. ದಿನಕ್ಕೆ 1 ಎಗ್ ತಿಂದ್ರೆ, ನಮ್ಮ ಆರೋಗ್ಯ ಅಭಿವೃದ್ಧಿಯಾಗುತ್ತದೆ. ಹಾಗಾಗಿ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಪ್ರತಿದಿನ ತತ್ತಿ ನೀಡಲಾಗುತ್ತದೆ. ಹಾಗಾದ್ರೆ ಪ್ರತಿದಿನ 1 ಮೊಟ್ಟೆ ತಿಂದ್ರೆ ಆರೋಗ್ಯಕ್ಕೇನು ಲಾಭ ಎಂದು ವೈದ್ಯರಾಗಿರುವ ಡಾ.ಆಂಜೀನಪ್ಪ ಅವರು ವಿವರಿಸಿದ್ದಾರೆ ನೋಡಿ.
ಮೊಟ್ಟೆ ತಿನ್ನುವಾಗ ಪೂರ್ತಿಯಾಗಿ, ಸರಿಯಾಗಿ ಬೇಯಿಸಿ ತಿಂದರೆ, ಆರೋಗ್ಯಕ್ಕೆ ತುಂಬಾ ಉತ್ತಮ ಅಂತಾರೆ ವೈದ್ಯರು. ಆದರೆ ಮೊಟ್ಟೆಯನ್ನು ಎಂದಿಗೂ ಹಸಿಯಾಗಿ ತಿನ್ನಬಾರದು. ಅದೇ ರೀತಿ ಹಸಿ ಹಾಲನ್ನು ಕುಡಿಯಬಾರದು. ಏಕೆಂದರೆ, ಅದರಲ್ಲಿ ಬ್ಯಾಕ್ಟಿರಿಯಾ ಇರುತ್ತದೆ. ಹಾಗಾಗಿ ಮೊಟ್ಟೆ, ಹಾಲು ಎರಡನ್ನೂ ಕಾಯಿಸಿ, ಬೇಯಿಸಿಯೇ ಸೇವಿಸಬೇಕು ಅಂತಾರೆ ವೈದ್ಯರು.
ಇನ್ನು ನಾಟಿ ಕೋಳಿ ಮೊಟ್ಟೆ, ಫಾರಂ ಮೊಟ್ಟೆ ಮಧ್ಯೆ ಏನು ಡಿಫ್ರೆನ್ಸ್ ಎಂದರೆ, ಕಲರ್ ಡಿಫ್ರೆನ್ಸ್ ಅಂತಾರೆ ಡಾ.ಆಂಜೀನಪ್ಪ. ಅಲ್ಲದೇ ರುಚಿಯಲ್ಲಿ ಸ್ವಲ್ಪ ವ್ಯತ್ಯಾಸವಿರಬಹದು. ಆದರೆ ಎರಡೂ ಆರೋಗ್ಯಕ್ಕೆ ಉತ್ತಮ ಅಂತಾರೆ ವೈದ್ಯರು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.