Political News:
Feb:28:ಚುನಾವಣೆ ಹತ್ತಿರವಾಗುತ್ತಿದ್ದಂತೆ ಕೈ ಕಮಲದ ಟಿಕೆಟ್ ಸಮರ ಜೋರಾಗಿದೆ. ಇದೀಗ 4 ನೇ ಬಾರಿ ಶಾಸಕರಾಗೋ ತವಕದಲ್ಲಿದ್ದಾರೆ ಹಾಲಿ ಶಾಸಕ ರೇಣುಕಾಚಾರ್ಯ. ಆದರೆ ಈಗ ಇವರ ಎದುರಾಳಿ ಯಾರು ಎಂಬ ಪ್ರಶ್ನೆ ಎದುರಾಗಿದೆ. ಬಿಜೆಪಿಯಿಂದ ರೇಣುಕಾಚಾರ್ಯ ಅವರ ಸ್ಪರ್ಧೆ ಬಹುತೇಕ ಖಚಿತವಾದರೆ, ಕಾಂಗ್ರೆಸ್‌ನಲ್ಲಿ ಟಿಕೆಟ್‌ಗಾಗಿ ಶೀತಲ ಸಮರ ಏರ್ಪಟ್ಟಿದೆ. ಶಾಂತನಗೌಡ ಮತ್ತೆ ಸ್ಪರ್ಧಿಸುವ ಉತ್ಸಾಹದಲ್ಲಿದ್ದರೆ, ಒಂದು ಕಾಲದಲ್ಲಿ ಶಾಂತನಗೌಡರ ನೆರಳಾಗಿ ನಿಲ್ಲುತ್ತಿದ್ದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ, ಟಿಕೆಟ್ ಪಡೆಯಲು ತೀವ್ರ ಕಸರತ್ತು ನಡೆಸಿದ್ದಾರೆ ಎನ್ನಲಾಗಿದೆ.ಕ್ಷೇತ್ರದಲ್ಲಿ ವೀರಶೈವ-ಲಿಂಗಾಯತರು ಜನಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿದ್ದರೆ, ಕುರುಬ ಸಮಾಜದವರು 2ನೇ ಸ್ಥಾನದಲ್ಲಿದ್ದಾರೆ. ಹೀಗಾಗಿ, ಲಿಂಗಾಯತ ಸಮುದಾಯದ ಶಾಂತನಗೌಡರನ್ನು ಕಣಕ್ಕಿಳಿಸಬೇಕೋ ಅಥವಾ ಕಳೆದ ಲೋಕಸಭಾ ಚುನಾವಣೆಯಲ್ಲಿ ಪರಸಿದ್ಧ ಕುರುಬ ಸಮಾಜದ ಎಚ್.ಬಿ.ಮಂಜಪ್ಪರನ್ನು ಅಖಾಡಕ್ಕಿಳಿಸಬೇಕೋ ಎಂಬ ಲೆಕ್ಕಾಚಾರದಲ್ಲಿ ಕೈಪಾಳೆಯವಿದೆ ಎಂದು ಹೇಳಲಾಗುತ್ತಿದೆ.
ಕಾಂಗ್ರೆಸ್ ಗೆ ಬಿಗ್ ಶಾಕ್..! ರಾಜಕೀಯ ನಿವೃತ್ತಿ ಘೋಷಿಸಿದ ಮಹಾ ನಾಯಕ..?!
ಅನ್ನ ಹಳಸಿತ್ತು ನಾಯಿ ಕಾದಿತ್ತು..?! ಸಿದ್ದು ಬಾಯಲ್ಲಿ ಯಾಕೀ ಮಾತು..?!