ಬೆಂಗಳೂರು: ದಿನಾಂಕ 13-06-2022ರಂದು 2 ಪದವೀಧರ, 2 ಶಿಕ್ಷಕರ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಅಂದು ಮತದಾನ ನಡೆಯಲು ಅನುಕೂಲವಾಗುವ ನಿಟ್ಟಿನಲ್ಲಿ, ಶಾಲಾ-ಕಾಲೇಜು, ಖಾಸಗಿ ಸಂಸ್ಧೆಗಳು ಸೇರಿದಂತೆ ಎಲ್ಲದಕ್ಕು ರಜೆಯನ್ನು ಘೋಷಿಸಿ, ರಾಜ್ಯ ಸರ್ಕಾರ ಆದೇಶಿಸಿದೆ.
ಈ ಬಗ್ಗೆ ಅಧಿಸೂಚನೆ ಹೊರಡಿಸಿದ್ದು, ದಿನಾಂಕ 13-06-2022ರಂದು ವಾಯುವ್ಯ ಪದವೀಧರ ಕ್ಷೇತ್ರ, ದಕ್ಷಿಣ ಪದವೀಧರ ಕ್ಷೇತ್ರಗಳು ಹಾಗೂ ವಾಯುವ್ಯ ಶಿಕ್ಷಕರ ಕ್ಷೇತ್ರ ಮತ್ತು ಪಶ್ಚಿಮ ಶಿಕ್ಷಕರ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಈ ಮತದಾನ ನಡೆಯುವಂತ ಜಿಲ್ಲೆಗಳಾದ ವಿಜಯಪುರ, ಬಾಗಲಕೋಟೆ, ಬೆಳಗಾವಿ, ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ, ಧಾರವಾಡ, ಹಾವೇರಿ, ಗದಗ ಮತ್ತು ಉತ್ತರ ಕನ್ನಡ ಜಿಲ್ಲೆಗಳ ವ್ಯಾಪ್ತಿಯಲ್ಲಿ ರಜೆ ಘೋಷಣೆ ಮಾಡಲಾಗಿದೆ.
ಈ ಜಿಲ್ಲೆಗಳ ವ್ಯಾಪ್ತಿಯ ಶಾಲಾ-ಕಾಲೇಜು, ಬ್ಯಾಂಕ್, ಸಂಘ-ಸಂಸ್ಥೆ, ಸಹಕಾರಿ ಸಂಘ ಸೇರಿದಂತೆ ಖಾಸಗಿ ಕಾರ್ಖಾನೆ, ಕೈಗಾರಿಕೆಗಳಿಗೂ ಮತದಾನಕ್ಕೆ ಅನುಕೂಲ ಆಗುವ ನಿಟ್ಟಿಲನಲ್ಲಿ ವಿಶೇಷ ಸಾಂದರ್ಭಿಕ ರಜೆಯನ್ನು, ದಿನಾಂಕ 13-06-2022ರಂದು ನೀಡಲಾಗಿದೆ ಎಂದು ತಿಳಿಸಿದ್ದಾರೆ.