Friday, October 18, 2024

Latest Posts

ಮೊದಲ ಬಾರಿಗೆ ರಿಬಾಕಿನಾ ವಿಂಬಲ್ಡನ್ ಚಾಂಪಿಯನ್

- Advertisement -

ಲಂಡನ್:  ಕಜಕಿಸ್ಥಾನದ  ಎಲೆನಾ ರಿಬಾಕಿನಾ ವಿಂಬಲ್ಡನ್ ಪ್ರಶಸ್ತಿ ಗೆಲ್ಲುವ ಮೂಲಕ ಹೊಸ ಇತಿಹಾಸ ಬರೆದಿದ್ದಾರೆ.

ಅವರು ಕಜಕಿಸ್ಥಾನದಿಂದ  ವಿಂಬಲ್ಡನ್ ಪ್ರಶಸ್ತಿ ಗೆದ್ದ ಪ್ರಪ್ರಥಮ ಮಹಿಳೆಯಾಗಿ ಮೂಡಿಬಂದಿದ್ದಾರೆ. ರಶ್ಯಾದಲ್ಲಿ ಜನಿಸಿದವರಾದ ರಿಬಾಕಿನಾ 2018ರಲ್ಲಿ ಕಜಕಿಸ್ಥಾನದ ಪರವಾಗಿ ಆಡಲು ನಿರ್ಧರಿಸಿದ್ದರು. ಈ ವರ್ಷ ರಷ್ಯಾ ಮತ್ತು ಬೆಲಾರಸ್‍ನ ಆಟಗಾರರನ್ನು ನಿಷೇಧಿಸಲಾಗಿದ್ದು, ರಿಬಾಕಿನಾ ಕಜಕಿಸ್ಥಾನಕ್ಕೆ ನಿಷ್ಠಾಂತರ ಮಾಡಿರದಿದ್ದರೆ ಅವರು ವಿಂಬಲ್ಡನ್‍ನಲ್ಲಿ ಭಾಗವಹಿಸುವುದಕ್ಕೇ ಸಾಧ್ಯವಾಗುತ್ತಿರಲಿಲ್ಲ.

ರಿಬಾಕಿನಾ  ಫೈನಲಿನಲ್ಲಿ ಟ್ಯುನಿಷಿಯಾದ ಆನ್ಸ್ ಜಬೇರ್ ಅವರನ್ನು  3-6, 6-2, 6-2 ಸೆಟ್‍ಗಳಿಂದ ಸೋಲಿಸಿ ತಮ್ಮ ಪ್ರಥಮ ಗ್ರಾನ್‍ಸ್ಲಾಮ್ ಪ್ರಶಸ್ತಿಗೆ ಭಾಜನರಾದರು.

ಮೊದಲ ಸೆಟ್ ನ್ನು ಜಬೇರ್ ಅತ್ಯಂತ ಸುಲಭದಲ್ಲಿ ಗೆದ್ದರು. ಆದರೆ ಎರಡನೇ ಸೆಟ್ ನಲ್ಲಿ ತಿರುಗೇಟು ನೀಡಿದ ರಿಬಾಕಿನಾ ಆ ಸೆಟ್ 6-2 ರಿಂದ ಜಯಿಸಿದರು.

ಮೂರನೇ ಸೆಟ್ ಅತ್ಯಂತ ಪೈಪೋಟಿಯುತವಾಗಿ ಸಾಗುವ ಲಕ್ಷಣ ತೋರಿತಾದರೂ ರಿಬಾಕಿನಾ ಬಳಿಕ ಮೇಲುಗೈ ಸಾಧಿಸಿದರು. ನಾಲ್ಕನೆ ಗೇಮ್ ನಲ್ಲಿ 0-40 ರಿಂದ ಹಿಂದೆ ಬಿದ್ದಿದ್ದರೂ ಬಳಿಕ ಆ ಗೇಮ್ ಗೆಲ್ಲಲು ಸಫಲರಾದರು.

ಅರಬ್ ಜಗತ್ತಿನ ಮತ್ತು ಆಫ್ರಿಕನ್ ಖಂಡದ ಪ್ರಥಮ ಮಹಿಳೆಯಾಗಿ ಫೈನಲ್ ಪ್ರವೇಶಿಸಿದ ಜಬೇರ್ ರನ್ನರ್ ಅಪ್ ಗೆ ತೃಪ್ತಿ ಪಡಬೇಕಾಯಿತು.

 

 

- Advertisement -

Latest Posts

Don't Miss