- Advertisement -
ಹಾಸನ: ಗುಂಪಿನಲ್ಲಿ ಬಂದ ಕಾಡಾನೆಯೊಂದು ಕಾಲಿಗೆ ಗಾಯ ಮಾಡಿಕೊಂಡು ಬೇರ್ಪಟ್ಟಿದೆ. ಕಾಫಿ ತೋಟದಲ್ಲಿ ಓಡಾಡಲು ಆಗದೆ ಒಂಟಿ ಸಲಗವೊಂದು ನಿಂತು ನರಳಾಡುತ್ತಿದ್ದು, ಕಾಲಿಗೆ ಗಾಯವಾಗಿರುವುದರಿಂದ ಒಂದೇ ಕಡೆ ನಿಂತುಕೊಂಡಿದೆ. ಬೇಲೂರು ತಾಲ್ಲೂಕಿನ, ಬಿಕ್ಕೋಡು ಗ್ರಾಮದಲ್ಲಿ ಘಟನೆ ನಡೆದಿದೆ. ಕಾಫಿ ತೋಟದಲ್ಲಿ ನಿತ್ರಾಣಗೊಂಡು ಕಾಡಾನೆ ನರಳಾಡುತ್ತಿರುವುದನ್ನು ಸ್ಥಳೀಯರು ನೋಡಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಿಕ್ಕೋಡು ಸುತ್ತಮುತ್ತ ಎಂಟು ಕಾಡಾನೆಗಳ ಹಿಂಡು ಬೀಡುಬಿಟ್ಟಿವೆ. ಆನೆಯ ಕಾಲು ಗಾಯಗೊಂಡಿದ್ದರಿಂದ ಗುಂಪಿನಿಂದ ಬೇರ್ಪಟ್ಟಿದೆ. ಕಾಡಾನೆಗಳು ಇರುವ ಬಗ್ಗೆ ಸ್ಥಳೀಯರಿಗೆ ಅರಣ್ಯ ಇಲಾಖೆ ಆರ್‌ಆರ್‌ಟಿ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.
- Advertisement -