ಮ್ಯಾನೇಜರ್ ಮೇಲಿನ ಕೋಪಕ್ಕೆ ಬ್ಯಾಂಕ್ ಎದುರು ಗೋಮಾಂಸ ಉತ್ಸವ ಮಾಡಿದ ಉದ್ಯೋಗಿಗಳು

Kerala: ದೇವರ ನಾಡು ಎಂದೇ ಖ್ಯಾತವಾಗಿರುವ ರಾಜ್ಯ ಅಂದ್ರೆ, ಅದು ಕೇರಳ. ಆದರೆ ಅಲ್ಲಿ ಗೋಹತ್ಯೆ ಮತ್ತು ಗೋಮಾಂಸಕ್ಕೆ ಸದಾ ಬೆಂಬಲವಿದೆ. ಅಲ್ಲಿನ ಕೆಲ ಮಾಂಸಾಹಾರಿಗಳು, ಗೋಮಾಂಸ ಸೇವಿಸುವುದನ್ನು ಮತ್ತು ಗೋಹತ್ಯೆ ಮಾಡುವುದನ್ನು ಬೆಂಬಲಿಸುತ್ತಾರೆ. ಅಲ್ಲಿ ಯಾರಾದರೂ ಗೋಹತ್ಯೆ ನಿಷೇಧಿಸಿ ಅಂದ್ರೆ, ಅವರ ವಿರುದ್ಧವೇ ಪ್ರತಿಭಟನೆ ಮಾಡಿ, ಅವರ ಹೇಳಿಕೆಯನ್ನು ಹತ್ತಿಕ್ಕುವ ಘಟನೆ ಸಾಮಾನ್ಯವಾಗಿದೆ.

ಅದೇ ರೀತಿ ಕೇರಳದ ಎರ್ನಾಕುಲಂನ ಕೆನರಾ ಬ್ಯಾಂಕ್‌ಗೆ ನೂತನವಾಗಿ ನೇಮಕವಾಗಿರುವ ಬಿಹಾರ ಮೂಲದ ಮ್ಯಾನೇಜರ್ ಅಶ್ವಿನ್ ಕುಮಾರ್, ಕ್ಯಾಂಟೀನ್‌ನಲ್ಲಿ ಗೋಮಾಂಸ ನಿಷೇಧ ಮಾಡಬೇಕು ಎಂದು ಆದೇಶ ನೀಡಿದ್ದಾರೆ. ಇದರಿಂದ ಕೋಪಗ“ಂಡಿರುವ ಅಲ್ಲಿನ ಸಿಬ್ಬಂದಿಗಳು, ಆಫೀಸ್ ಆಚೆಯೇ ಗೋಮಾಂಸದ ಅಡುಗೆ ಮಾಡಿ, ಸೇವಿಸಿದ್ದಾರೆ. ಈ ಬ್ಯಾಂಕ್‌ನ ಕ್ಯಾಂಟೀನ್‌ನಲ್ಲಿ ಗೋಮಾಂಸ ನಿಷೇಧಿಸಬೇಕು ಎಂದು ಮ್ಯಾನೇಜರ್ ಆದೇಶಿಸಿದ್ದರು. ಆದರೆ ಅಲ್ಲಿನ ಗೋಮಾಂಸ ಪ್ರಿಯರಾಗಿದ್ದ ಕೆಲ ಸಿಬ್ಬಂದಿಗಳಿಗೆ ಈ ಆದೇಶ ಹಿಡಿಸಿರಲಿಲ್ಲ. ಹಾಗಾಗಿ ಅವರೆಲ್ಲ ಸೇರಿ, ಬ್ಯಾಂಕ್ ಮುಂದೆಯೇ, ಗೋಮಾಂಸ ಉತ್ಸವ ಮಾಡಿ, ಅಲ್ಲಿ ಬಂದವರಿಗೆಲ್ಲಾ ಗೋಮಾಂಸದ ಅಡುಗೆ ಮಾಡಿ ಬಡಿಸಿದ್ದಾರೆ.

ಅಶ್ವಿನ್ ಕುಮಾರ್, ಆಫೀಸ್ ಕ್ಯಾಂಟೀನ್‌ನಲ್ಲಿ ಗೋಮಾಂಸ ಅಡುಗೆ ಸೇವಿಸಬೇಡಿ ಎಂದು ಕೇಳಿದ್ದಾರೆ. ಬಳಿಕ ಆದೇಶಿಸಿದ್ದಾರೆ. ಆದರೆ ಈ ದೇಶದಲ್ಲಿ ನಮಗೆ ಬೇಕಾಗಿದ್ದನ್ನು ತಿನ್ನುವ ಎಲ್ಲ ಅರ್ಹತೆ ನಮಗಿದೆ. ಹಾಗಿದ್ದಾಗ. ನಮ್ಮ ಆಹಾರವನ್ನು ಇವರು ಹೇಗೆ ಪ್ರಶ್ನಿಸುತ್ತಾರೆ..? ಇವರೇಕೆ ನಮಗೆ ಗೋಮಾಂಸ ತಿನ್ನಬಾರದು ಎಂದು ನಿರ್ದೇಶಿಸುತ್ತಾರೆ..? ಎಂದು ಸಿಬ್ಬಂದಿಗಳು ಪ್ರಶ್ನಿಸಿದ್ದಾರೆ. ಅಲ್ಲದೇ ಗೋಮಾಂಸ ಉತ್ಸವ ಮಾಡಿದ್ದಾರೆ.

ಇನ್ನು ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ, ಪರ ವಿರೋಧ ಕಾಮೆಂಟ್‌ಗಳು ಹೆಚ್ಚಾಗಿದೆ. ಇಲ್ಲಿ ಸಂಘ ಪರಿವಾರದ ಕಾರ್ಯಸೂಚಿ ಎಲ್ಲ ನಡೆಯುವುದಿಲ್ಲ. ಕೇಸರಿ ಧ್ವಜ ಹಾರಿಸಿ, ಶಾಂತಿ ಕದಡಲು ನಾವು ಬಿಡುವುದಿಲ್ಲ. ಇದು ಕಮ್ಯೂನಿಸ್ಟ್ ರಾಜ್ಯ. ಇಲ್ಲಿ ಅವರಿಗೆ ಮಾತನಾಡುವ, ಬೇಕಾದ ಹಾಗೆ ಇರುವ ಎಲ್ಲ ಸ್ವಾತಂತ್ರ್ಯವಿದೆ ಎಂದು ಬರೆದಿದ್ದಾರೆ.

About The Author