London: ಇಂಗ್ಲೆಡ್ ತಂಡದ ಕ್ರಿಕೇಟಿಗ ಬೆನ್ ಸ್ಟೋಕ್ಸ್ ಮನೆಗೆ ನುಗ್ಗಿ ದರೋಡೆಕೋರರು, ಚಿನ್ನಾಭರಣ ದೋಚಿದ್ದಾರೆ. ಬೆನ್ ಪಾಕಿಸ್ತಾನ ಪ್ರವಾಾಸದಲ್ಲಿರುವ ವೇಳೆ ಲಂಡನ್ನಲ್ಲಿರುವ ಅವರ ಮನೆಯಲ್ಲಿ ಕಳ್ಳತನವಾಗಿದೆ.
ಈ ಬಗ್ಗೆ ಸ್ವತಃ ಬೆನ್ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಅಕ್ಟೋಬರ್ 17ರಂದು ಕ್ಯಾಸ್ಟಲ್ ಈಡನ್ ಗಾರ್ಡನ್ನಲ್ಲಿರುವ ತಮ್ಮ ಮನೆಯಲ್ಲಿ ಕಳ್ಳತನವಾಗಿದ್ದು, ತಾನು ಪಾಕಿಸ್ತಾನ ಪ್ರವಾಸದಲ್ಲಿರುವ ವೇಳೆ ಖದೀಮರು ಮನೆಗೆ ನುಗ್ಗಿ ಕಳ್ಳತನ ಮಾಡಿದ್ದಾರೆ. ಚಿನ್ನಾಭರಣದ ಜೊತೆಗೆ ಇನ್ನೂ ಹಲವು ಬೆಲೆ ಬಾಳುವ ವಸ್ತುಗಳು ನಾಪತ್ತೆಯಾಗಿದ್ದು, ಅವುಗಳ ಜೊತೆ ನನ್ನ ಕುಟುಂಬ ಭಾವನಾತ್ಮಕ ಸಂಬಂಧ ಹೊಂದಿತ್ತು ಎಂದು ಬೆನ್ ಬೇಸರ ವ್ಯಕ್ತಪಡಿಸಿದ್ದಾರೆ.
ಇನ್ನು ಆಘಾತಕಾರಿ ಸಂಗತಿ ಅಂದ್ರೆ, ಬೆನ್ಸ್ಟೋಕ್ಸ್ ಪಾಕಿಸ್ತಾನ ಪ್ರವಾಸದಲ್ಲಿದ್ದರೂ ಕೂಡ, ಅವರ ಪತ್ನಿ ಮತ್ತು ಮಕ್ಕಳು ಮನೆಯಲ್ಲೇ ಇದ್ದರು. ಆಗಲೇ ಕಳ್ಳರು ಮನೆಗೆ ನುಗ್ಗಿ ಕಳ್ಳತನ ಮಾಡಿದ್ದಾರೆ ಎಂದು ಬೆನ್ ಸ್ಟೋಕ್ಸ್ ಹೇಳಿದ್ದಾರೆ.
ಆದರೆ ಮನೆಯಲ್ಲಿ ಇರುವವರಿಗೆ ಯಾರಿಗೂ ಏನೂ ತೊಂದರೆಯಾಗಿಲ್ಲ. ಬರೀ ಚಿನ್ನಾಭರಣ ಮಾತ್ರವಲ್ಲದೇ, ಇವರ ಪತ್ನಿಯ ಬಳಿ ಇದ್ದ ಲಕ್ಷಾಂತರ ಮೌಲ್ಯದ ವೆನಿಟಿ ಬ್ಯಾಗ್ ಸೇರಿ ಹಲವು ಬೆಲೆ ಬಾಳುವ ವಸ್ತುಗಳನ್ನು ಕಳ್ಳರು ದೋಚಿದ್ದಾರೆ. ಈ ಬಗ್ಗೆ ಬೆನ್ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.