- Advertisement -
ಕವಿರತ್ನ ಕಾಳಿದಾಸ ಸಿನಿಮಾ ಖ್ಯಾತಿಯ ಹಿರಿಯ ಕಲಾವಿದ ಶನಿ ಮಹಾದೇವ್ಪ(90) ಇಂದು ನಿಧನರಾಗಿದ್ದಾರೆ. ಕೊರೋನಾ ಸೋಂಕಿನಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಇಂದು ಸಂಜೆ ನಾಲ್ಕು ಗಂಟೆಗೆ ಕೊನೆಯುಸಿರೆಳೆದಿದ್ದಾರೆ.
ಶನಿ ಮಹಾದೇವಪ್ಪ, ಕವಿರತ್ನ ಕಾಳಿದಾಸ, ಶ್ರೀನಿವಾಸ ಕಲ್ಯಾಣ, ಭಕ್ತ ಕುಂಬಾರ ಸಿನಿಮಾ ಸೇರಿದಂತೆ ವರನಟ ಡಾ. ರಾಜ್ ಕುಮಾರ್ ಜೊತೆಯಲ್ಲಿ 150ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದರು. ಒಟ್ಟಾಗಿ 550ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ಖ್ಯಾತಿ ಇವರಿಗೆ ಸಲ್ಲುತ್ತದೆ. ನಾಳೆ ಸಮನಹಳ್ಳಿಯ ಚಿತಾಗಾರದಲ್ಲಿ ಮಹಾದೇವಪ್ಪನವರ ಅಂತ್ಯಕ್ರಿಯೆ ನಡೆಸಲು ಕುಟುಂಬದವರು ತೀರ್ಮಾನಿಸಿದ್ದಾರೆ ಎನ್ನಲಾಗ್ತಿದೆ.
- Advertisement -