Tuesday, July 22, 2025

Latest Posts

ಮಹಾದಾಯಿಗಾಗಿ ಪರಿಸರ ಕ್ಲಿಯರೆನ್ಸ್ ನೀಡುತ್ತಿಲ್ಲ. ಈ ಬಗ್ಗೆ ಬಿಜೆಪಿ ನಾಯಕರು ಮಾತೇ ಆಡುತ್ತಿಲ್ಲ: ಲಾಡ್ ಅಸಮಾಧಾನ

- Advertisement -

Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿಂದು ಮಾಧ್ಯಮದ ಜತೆ ಮಾತನಾಡಿರುವ ಸಚಿವ ಸಂತೋಷ್ ಲಾಡ್, ಧರ್ಮಸ್ಥಳ ಪ್ರಕರಣ ಎಸ್ ಐ ಟಿಗೆ ನೀಡಿರೋ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಸರ್ಕಾರ ಈಗಾಗಲೇ ಪ್ರಕರಣ ಎಸ್ ಐ ಟಿ ಗೆ ಕೊಟ್ಟಿದೆ. ಆ ಬಗ್ಗೆ ಆತುರದಿಂದ ಮಾತಾನಾಡೋದು ಸರಿಯಲ್ಲಾ. ಈ ಬಗ್ಗೆ ತನಿಖೆಯಾಗುತ್ತದೆ. ಬಿಜೆಪಿಯವರು ನಾವು ಏನು ಮಾಡಿದ್ರು ಮಾತಾಡ್ತಾರೆ. ಮೋದಿ ಅವರ ಟರ್ಮ್ ಮುಗಿಯುವವರೆಗೂ ಯಾರು ಮಾತಾಡೋ ಹಾಗಿಲ್ಲಾ. ಇ ಡಿ ಬಗ್ಗೆ ಸುಪ್ರೀಂ ಕೋರ್ಟ್ ಅನೇಕ ಬಾರಿ ಹೇಳ್ತಿದೆ. ರಾಜಕೀಯ ಕ್ಕಾಗಿ ಇ ಡಿ ಬಳಸ್ತಿದ್ದಾರೆ ಅಂತ ಸುಪ್ರೀಂ ಕೋರ್ಟ್ ಹೇಳಿದೆ. ನೆಗಟಿವ್ ಇದ್ರೆ ದೇಶದಲ್ಲಿ ಹೊರಬರಲ್ಲಾ ಎಂದು ಸಂತೋಷ್ ಲಾಡ್ ಆರೋಪಿಸಿದ್ದಾರೆ.

ದೇಶದಲ್ಲಿ ಕಷ್ಟಗಳೇ ಇಲ್ಲಾ ಅಂತ ಬಿಜೆಪಿಯವರು ಹೇಳ್ತಿದ್ದಾರೆ. ದೇಶದ ಪ್ರಧಾನಿ ಇನ್ನುವರಗೆ ಒಂದು‌ ಸುದ್ದಿಗೋಷ್ಟಿ ನಡೆಸಿಲ್ಲಾ. ಪೆಹಲ್ಗಾಂವ್ ಆಯ್ತು ನಂತರ ಎಂಟೆತ್ತು‌ ವಿದೇಶ ಪ್ರವಾಸ ಹೋಗಿ ಬಂದರು. ಇದೀಗ ಬಿಹಾರ್ ಚುನಾವಣೆಯಲ್ಲಿದ್ದಾರೆ ಎಂದು ಮೋದಿ ವಿರುದ್ಧ ಲಾಡ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಹದಾಯಿ ವಿಚಾರದ ಬಗ್ಗೆ ಪ್ರತಿಕ್ರಿಯಿಸಿರುವ ಸಂತೋಷ್ ಲಾಡ್, ಗೋವಾಗೆ ಬೇಕಾದಾಗ ಪರಿಸರ ಕ್ಲಿಯರನ್ಸ್ ಕೊಡ್ತಾರೆ. ಆದ್ರೆ ನಮಗೆ ಬೇಕಾದಾಗ ಪರಿಸರ ಕ್ಲಿಯರೆನ್ಸ್ ಕೊಡ್ತಿಲ್ಲಾ. ಈ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸೇರಿದಂತೆ ಯಾರು ಮಾತಾಡ್ತಿಲ್ಲಾ ಎಂದು ಸಚಿವ ಸಂತೋಷ್ ಲಾಡ್ ಆರೋಪಿಸಿದ್ದಾರೆ.

- Advertisement -

Latest Posts

Don't Miss