Tuesday, April 15, 2025

Latest Posts

ವಿಶ್ವನಾಥ್ ಗೆ ಈಶ್ ವಿರೋಧ.. ಜೆಡಿಎಸ್ ಜೊತೆ ಮೈತ್ರಿಗೆ ಸರ್ಕಸ್..!

- Advertisement -

ಬೆಂಗಳೂರು : ಸಚಿವ ಸಾರಾ ಮಹೇಶ್ ಹಾಗೂ ಬಿಜೆಪಿ ಉಸ್ತುವಾರಿ ಮುರುಳೀಧರ್ ರಾವ್ ಗೌಪ್ಯ ಮಾತುಕತೆಗೆ ಬಿಜೆಪಿ ಮುಖಂಡ  ಕೆ.ಎಸ್ ಈಶ್ವರಪ್ಪ ಮಧ್ಯಸ್ಥಿಕೆಯಾಗಿದ್ರು ಅನ್ನೋ ಮಾತು ಕೇಳಿ ಬಂದಿದೆ.. ಹೌದು ಕುರುಬ ಸಮುದಾಯಕ್ಕೆ ಸೇರಿರುವ ಈಶ್ವರಪ್ಪ ಸಿದ್ದರಾಮಯ್ಯ ಕಡು ವಿರೋಧಿ ಹಾಗೆಯೇ ಬಿಜೆಪಿಯಲ್ಲಿ ಇತರ ಕುರುಬ ಸಮುದಾಯದ ಯಾವೊಬ್ಬ ಮುಖಂಡ  ಬೆಳೆಯಬಾರದು, ಬರಬಾರದು ಅನ್ನೋದು ಈಶ್ ಲೆಕ್ಕಾಚಾರ.. ಈಗ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನದ ಜೊತೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈ ಸೇರಿರುವ ವಿಶ್ವನಾಥ್ ಯಾವುದೇ ಕಾರಣಕ್ಕೂ ಬಿಜೆಪಿಸೇರಬಾರದು ಅನ್ನೋದು ಈಶ್ವರಪ್ಪ ಪ್ರಯತ್ನ.

https://www.youtube.com/watch?v=i7VjPY3B1nw

ಕುಮಾರಸ್ವಾಮಿ ಈ ಮಾತುಕತೆಗೆ ಗ್ರೀನ್ ಸಿಗ್ನಲ್ ಕೊಟ್ರಾ..?

ಹಾಗೆ ನೋಡಿದ್ರೆ ಬಿಜೆಪಿಯ ಆಪರೇಷನ್ ಕಮಲದ ಮಾಹಿತಿಯನ್ನ ಪ್ರತೀ ಬಾರಿ ಜೆಡಿಎಸ್ ನಾಯಕರಿಗೆ ಸೋರಿಕೆ ಮಾಡ್ತಿದ್ದಿದ್ದು ಇದೇ ಈಶ್ವರಪ್ಪಅನ್ನೋದು ಬಿಜೆಪಿ ನಾಯಕರ ಮಾತು. ಈಗಲೂ ಕೂಡ ಈಶ್ವರಪ್ಪಅವರೇ ಕುಮಾರಸ್ವಾಮಿ ಬಳಿ ಮೈತ್ರಿಗೆ ಮುಂದಾಗಿದ್ದಾರೆ.. ಇದರ ಮೊದಲ ಹೆಜ್ಜೆಯೇ ಮುರಳೀಧರ್ ರಾವ್, ಸಾರಾ ಮಹೇಶ್ 30 ನಿಮಿಷಗಳ ರಹಸ್ಯ ಮಾತುಕತೆ.  ಇಬ್ಬರು ನಾಯಕರು ಕೆಕೆ ಗೆಸ್ಟ್ ಹೌಸ್ ರೂಂ ಸೇರಿ ಬಾಗಿಲು ಹಾಕ್ತಿದ್ದ ಹಾಗೆಯೇ ಇದನ್ನ ಕಂಡ ಪ್ರತ್ಯಕ್ಷದರ್ಶಿ ಮಾಧ್ಯಮಗಳಿಗೆ ಮಾಹಿತಿ ನೀಡಿದ ಪರಿಣಾಮ ಜೆಡಿಎಸ್-ಬಿಜೆಪಿ ನಾಯಕರ ಮಾತುಕತೆ ಬಹಿರಂಗವಾಗಿದೆ.. ಆದ್ರೆ ಜೆಡಿಎಸ್ ನಾಯಕರು ಮಾತ್ರ ಇದು ಆಕಸ್ಮಿಕ ಭೇಟಿ ಅಂತ ಮೈತ್ರಿ ಆರೋಪವನ್ನ ತಳ್ಳಿ ಹಾಕಿದ್ದಾರೆ..

https://www.youtube.com/watch?v=tJ4jyK8b-0A
- Advertisement -

Latest Posts

Don't Miss