Health:
ಮಕ್ಕಳು ಹಾಸಿಗೆಯಿಂದ ಬೀಳುವುದು ಮತ್ತು ಮೇಜಿನ ಅಂಚುಗಳನ್ನು ತಲೆಗೆ ತಗಲಿಸಿ ಕೊಳ್ಳುವುದು ಸಾಮಾನ್ಯವಾಗಿದೆ. ಮಗುವಿಗೆ ಸಣ್ಣಪುಟ್ಟ ಗಾಯವಾದರೂ ಸಹಿಸಲಾರದೆ ಪೋಷಕರು ತಲೆಗೆ ಪೆಟ್ಟು ಬಿದ್ದಿದ್ದರೆ ಗಂಭೀರ ಗಾಯವೋ ಅಥವಾ ಸಣ್ಣಪುಟ್ಟ ಗಾಯವೋ ಎಂದು ತಿಳಿಯುವುದು ಹೇಗೆ? ನೀವು ಯಾವ ಸಂದರ್ಭಗಳಲ್ಲಿ ವೈದ್ಯರನ್ನು ಭೇಟಿಯಾಗಬೇಕು ಎಂದು ತಿಳಿದುಕೊಳ್ಳಬೇಕಾದರೆ.. ಈ ಸ್ಟೋರಿ ಓದಿ.
ಮನೆಯಲ್ಲಿ ಮಕ್ಕಳು ಟೇಬಲ್ ಮತ್ತು ಹಾಸಿಗೆಯ ಅಂಚಿಗೆ ತಲೆ ಬಡಿದುಕೊಳ್ಳುವುದು ಸಾಮಾನ್ಯ. ಕೆಲವೊಮ್ಮೆ ಮೆಟ್ಟಿಲುಗಳಿಂದ ಕೆಳಗೆ ಬಿದ್ದು ತಲೆಗೆ ಗಾಯಗಳಾಗುತ್ತವೆ. ಹೀಗೆ ತಗಳಿಸಿಕೊಂಡರೆ ಪೋಷಕರು ಗೊಂದಲಕ್ಕೊಳಗಾಗುತ್ತಾರೆ, ಆ ಸಮಯದಲ್ಲಿ ಏನು ಮಾಡಬೇಕೆಂದು ತಿಳಿಯುವುದಿಲ್ಲ.
ಮಕ್ಕಳ ತಜ್ಞ ಡಾ.ನಿಹಾರ್ ಪರೇಖ್ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ಮಗುವಿನ ತಲೆಬುರುಡೆ ಸಾಮಾನ್ಯವಾಗಿ ಎರಡು ವರ್ಷ ವಯಸ್ಸಿನವರೆಗೆ ,ತಲೆಬುರುಡೆಗಳು ಸ್ಪ್ರಿಂಗ್ ಆಗಿದ್ದು, ಗಾಯದ ಆಘಾತವನ್ನು ತಡೆಯುತ್ತದೆ. ಮೆದುಳಿಗೆ ಯಾವುದೇ ಹಾನಿ ಹಾಗುವುದಿಲ್ಲ. ನಾಲ್ಕು ಅಡಿಗಿಂತ ಹೆಚ್ಚು ಎತ್ತರದಿಂದ ಬಿದ್ದರೆ ಮಾತ್ರ ಮಕ್ಕಳಿಗೆ ಗಂಭೀರ ಗಾಯವಾಗುವ ಸಾಧ್ಯತೆ ಇರುತ್ತದೆ, ಎಂದು ಡಾ.ನಿಹಾರ್ ಪಾರೇಖ್ ತಿಳಿಸಿದರು. ಮಕ್ಕಳು ಹಾಸಿಗೆ ಅಥವಾ ಟೇಬಲ್‌ನಿಂದ ಬಿದ್ದು ತಲೆ ನೆಲದ ಮೇಲೆ ಬಡಿದರೆ ಗಂಭೀರವಾಗಿ ಗಾಯಗೊಳ್ಳಬಹುದು ,ಇದನ್ನು ತಪ್ಪಿಸಲು ಆರಂಭಿಕ ರೋಗನಿರ್ಣಯ ಮುಖ್ಯ. ಡಾ.ಪರೇಖ್ ಅವರು ಮಕ್ಕಳಲ್ಲಿ ಆರಂಭಿಕ ಆಘಾತವನ್ನು ಪತ್ತೆಹಚ್ಚಲು ಕೆಲವು ವಿಧಾನಗಳನ್ನು ವಿವರಿಸಿದರು. ಅವು ಯಾವುದು ಎಂದು ತಿಳಿದುಕೊಳ್ಳೋಣ .
1.ತಲೆ ಊದಿಕೊಂಡು ಊತ ಹೆಚ್ಚಾದರೆ ಮಗುವಿಗೆ ಗಾಯವಾಗಿದೆ ಎಂದರ್ಥ ಇದು ಗಂಟೆಗಟ್ಟಲೆ ಹೆಚ್ಚಾದರೆ, ಕೂಡಲೇ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.
2.ಗಾಯದ ನಂತರ ಮೊದಲ 24 ಗಂಟೆಗಳಲ್ಲಿ ಮಗು ನಿರಂತರವಾಗಿ ವಾಂತಿ ಮಾಡುತ್ತಿದ್ದರೆ, ತಕ್ಷಣ ವೈದ್ಯರನ್ನು ಭೇಟಿ ಮಾಡುವುದು ಉತ್ತಮ. ಇದು ಆಂತರಿಕ ಗಾಯದ ಸಂಕೇತವಾಗಿದೆ.
3.ಗಾಯದ ನಂತರದ ನಿರಸವಾಗಿದ್ದರೆ ಅನುಮಾನಿಸಬೇಕಾದ ಸಂಗತಿಯಾಗಿದೆ. ನಿಂತರೂ ನಿಲ್ಲಲಾರರು, ಕುಳಿತರೆ ನೇರವಾಗಿ ಕೂರಲಾರರು. ಈ ರೋಗಲಕ್ಷಣಗಳನ್ನು ನೀವು ಗಮನಿಸಿದರೆ, ತಕ್ಷಣವೇ ವ್ಯೆದ್ಯರನ್ನು ಸಂಪರ್ಕಿಸಿ .
4.ಮಗು ಬಿದ್ದ ನಂತರ ಮೂಗು ಮತ್ತು ಕಿವಿಯಿಂದ ರಕ್ತ ಹರಿಯುತ್ತಿದ್ದರೆ ತಲೆಯಲ್ಲಿ ಆಂತರಿಕ ಗಾಯವಾಗಿದೆ ಎಂದರ್ಥ. ನಿಮ್ಮ ಮಗುವನ್ನು ತಕ್ಷಣ ವೈದ್ಯರ ಬಳಿಗೆ ಕರೆದೊಯ್ಯುವುದು ಉತ್ತಮ.
5.ಮೂರ್ಛೆ ಕಾಣಿಸಿಕೊಂಡರೆ ಇದು ಅತ್ಯಂತ ಗಂಭೀರ ಸ್ಥಿತಿಯಾಗಿದೆ ಎಂದು ಡಾ.ಪಾರೇಖ್ ಹೇಳಿದ್ದಾರೆ. ತಲೆಗೆ ಗಾಯವಾದ ನಂತರ ಮಗುವಿಗೆ ಮೂರ್ಛೆ ಕಾಣಿಸಿಕೊಂಡರೆ, ತಕ್ಷಣ ವೈದ್ಯರ ಬಳಿಗೆ ಕರೆದೊಯ್ಯಲು ಸೂಚಿಸಲಾಗುತ್ತದೆ. ಇದು ಸಬ್ಡ್ಯುರಲ್ ಹೆಮಟೋಮಾ (SDH) ನ ಸಂಕೇತವಾಗಿದೆ.
ನೀವು ಉಗುರುಗಳನ್ನು ಕಚ್ಚುತ್ತೀರಾ..? ಈ ಸಲಹೆಗಳೊಂದಿಗೆ ಅಭ್ಯಾಸವನ್ನು ಬಿಟ್ಟುಬಿಡಿ..!
ಸೌತೆಕಾಯಿಯ ಅದ್ಭುತ ಉಪಯೋಗಗಳು ಗೊತ್ತಾದರೆ ಇದನ್ನು ತಿನ್ನದೆ ಬಿಡುವುದಿಲ್ಲ..!